ಕಾರ್ಕಳ: ಕರ್ನಾಟಕ ಮುಸ್ಲಿಂ ಜಮಾ ಅತ್ ಕಾರ್ಕಳ ಝೋನ್ ಮಹಾಸಭೆಯು ದಿನಾಂಕ 15/01/2024 ನೇ ಸೋಮವಾರ ಮಧ್ಯಾಹ್ನ 3 ಕ್ಕೆ ಜಲ್ಬಾ ಏ ನೂರ್ ಮದರಸದಲ್ಲಿ ನಡೆಯಿತು.
2024/25 ರ ಸಾಲಿನ ಹೊಸ ಸಮಿತಿ ರೂಪೀಕರಣ ಮಾಡಲಾಯಿತು.
ಅಧ್ಯಕ್ಷ ರಾಗಿ ಶೇಖ್ ನಾಸಿರ್ ಇಂಜಿನಿಯರ್ ಬೈಲೂರು, ಪ್ರ.ಕಾರ್ಯದರ್ಶಿಯಾಗಿ N.C. ರಹೀಂ ಹೊಸ್ಮಾರ್, ಫಿನಾನ್ಸ್ ಕಾರ್ಯದರ್ಶಿ ಯಾಗಿ ಲತೀಫ್ ಸಾಣೂರು ರವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.
ಉಪಾಧ್ಯಕ್ಷರುಗಳಾಗಿ ಮುಹ್ಯಿದ್ದೀನ್ ನಿಟ್ಟೆ, ಅಬ್ದುಲ್ಲಾ ಭಾಯ್ ಕಾರ್ಕಳ, ರಹೀಂ ಎಣ್ಣೆಹೊಳೆ
ಕಾರ್ಯದರ್ಶಿ ಗಳಾಗಿ ಇಬ್ರಾಹಿಂ ಹಾಜಿ ಜರಿಗುಡ್ಡೆ, ಅಕ್ಬರ್ ಅಲಿ, ಅಬೂಬಕರ್ ಪುತ್ತ, ರಿಯಾಝ್ ಮಿಯ್ಯಾರ್ ಹಾಗೂ ಸಿರಾಜ್ ಭಾಯ್ ರವರನ್ನು ಆಯ್ಕೆಯಾದರು.
ಎಕ್ಸಿಕ್ಯೂಟೀವ್ ಸದಸ್ಯರುಗಳಾಗಿ
ಮುಹಮ್ಮದ್ ಗೌಸ್ ಮಿಯ್ಯಾರ್, ಹಂಝ ಕುಕ್ಕುಂದೂರು, ಮಹಮ್ಮದ್ ಹುಸೈನ್, ಸಯ್ಯದ್ ಅಬ್ದುಲ್ ರಶೀದ್, ಬಾಸುರ್ ಅಬ್ದುಲ್ ರಹ್ಮಾನ್ , ಮುಹಮ್ಮದ್ ಇಯಾಝ್, ನಝೀರ್ ಸಾಹೇಬ್ ಹೊಸ್ಮಾರ್, ಸಯ್ಯದ್ ಅಶ್ಪಾಕ್,
ಶೈಖ್ ತ್ವಯ್ಯಿಬ್, ರಿಯಾಝುದ್ದೀನ್ MD , ಆಯ್ಕೆಗೊಂಡರು.
ಜಲ್ವಾ ಏ ನೂರ್ ಸಯೀದ್ ರಝಾ ಮೌಲಾನಾ ರ ದುಆ ದೊಂದಿಗೆ ಆರಂಭಗೊಂಡ ಸಭೆಯನ್ನು ಕರ್ನಾಟಕ ಮುಸ್ಲಿಂ ಜಮಾ ಅತ್ ಉಡುಪಿ ಜಿಲ್ಲಾಧ್ಯಕ್ಷ BSF ರಫೀಕ್ ಉದ್ಘಾಟಿಸಿದರು.
ಕಾರ್ಯದರ್ಶಿ ಲತೀಫ್ ಸಾಣೂರು ವರದಿ ಮಂಡಿಸಿದರು.
KMJ ಉಡುಪಿ ಜಿಲ್ಲಾ ಪ್ರ. ಕಾರ್ಯದರ್ಶಿ ಸುಬ್ಹಾನ್ ಅಹ್ಮದ್ ಹೊನ್ನಾಳ ಸಭೆಯನ್ನು ನಿಯಂತ್ರಿಸಿ, ನೇತ್ರತ್ವ ನೀಡಿದರು.
ನಾಸಿರ್ ಇಂಜಿನಿಯರ್ ಸ್ವಾಗತಿಸಿದ ಸಭೆಯನ್ನು ಕೊನೆಯಲ್ಲಿ ಪ್ರ.ಕಾರ್ಯದರ್ಶಿ NC ರಹೀಂ ಹೊಸ್ಮಾರ್ ವಂದಿಸಿದರು.
3 ಸ್ವಲಾತ್ನೊಂದಿಗೆ ಕಾರ್ಯಕ್ರಮ ಮುಕ್ತಾಯ ಗೊಂಡಿತು.