ಮಂಗಳೂರು: ಇತ್ತೀಚೆಗೆ ಉತ್ತರ ಕನ್ನಡದ ಸಂಸದರಾದ ಅನಂತ್ ಕುಮಾರ್ ಹೆಗ್ಡೆಯವರು ಹೇಳಿಕೆ ನೀಡಿ ಭಟ್ಕಳದ ಗೋಲ್ಡನ್ ಮಸೀದಿಯನ್ನು ನಿರ್ನಾಮ ಮಾಡುತ್ತೇವೆ ಎಂದು ಹೇಳಿದ್ದಾರೆ. ಇದರ ವಿರುದ್ಧ ಪ್ರತಿಕ್ರಿಯಿಸಿರು ಮುಸ್ಲಿಮ್ ಒಕ್ಕೂಟದ ಅಧ್ಯಕ್ಷರಾದ ಕೆ.ಅಶ್ರಫ್, ಹೆಗ್ಡೆ ತನ್ನ ಆರೋಗ್ಯ ನಿರ್ನಾಮವಾಗದಂತೆ ನೋಡಿಕೊಳ್ಳಲಿ ಎಂದಿದ್ದಾರೆ.
ಅನಂತ್ ಕುಮಾರ್ ಹೆಗ್ಡೆ ಈ ಹಿಂದೆ ಇಸ್ಲಾಮ್ ಭಯೋತ್ಪಾದಕ ಧರ್ಮ ಅದನ್ನು ಮೆಲೋತ್ಪಾಟನೆ ಮಾಡಬೇಕು, ಭಾರತದ ಸಂವಿಧಾನವನ್ನು ಬದಲಾಯಿಸುತ್ತೇವೆ ಎಂಬುದಾಗಿ ಕೂಡಾ ವಿವಾದಿತ ಹೇಳಿಕೆ ನೀಡಿರುತ್ತಾರೆ.
ನೈಜ ಸಮಸ್ಯೆಯಿಂದ ಜನರ ಗಮನವನ್ನು ವಿಕೇಂದ್ರೀಕರಿಸಿ ತಮ್ಮ ವೈಫಲ್ಯವನ್ನು ಮರೆ ಮಾಚಲು ಪ್ರಯತ್ನಿಸುವ ಸಂಘ ಮಿತ್ರ ಅನಂತ್ ಕುಮಾರ್ ಹೆಗ್ಡೆ ಈ ಬಾರಿ ಭಟ್ಕಳ ಗೋಲ್ಡನ್ ಮಸೀದಿಯ ನಿರ್ಣಾಮಕ್ಕೆ ಹೊರಟಿದ್ದಾರೆ!. ಅನಂತ್ ಕುಮಾರ್ ಹೆಗ್ಡೆ ಇತ್ತೀಚೆಗೆ ತನಗೆ ಭಾದಿಸಿದ ಅನಾರೋಗ್ಯ ಕಾರಣಕ್ಕಾಗಿ ನೇಪತ್ಯಕ್ಕೆ ಸರಿದಿದ್ದರು. ಆರೋಗ್ಯದಲ್ಲಿ ಸ್ವಲ್ಪ ಸುಧಾರಿಸಿದಾಗ ಮತ್ತೆ ತನ್ನ ನಾಲಿಗೆಯನ್ನು ಕೋಮು ಪ್ರಚೋದನಕಾರಿ ಹೇಳಿಕೆಗೆ ಸೀಮಿತ ಗೊಳಿಸಿರುವುದು ಖೇದಕರ.ಹೆಗ್ಡೆಯಂತಹ ಸಂಸದರಿಗೆ ಅದೆಷ್ಟೋ ಅಭಿವೃದ್ದಿ ವಿಷಯಗಳಲ್ಲಿ ರಾಜಕೀಯ ಮೈಲುಗಲ್ಲು ಸಾಧಿಸಬಹುದಿತ್ತು,ಆದರೆ ಅವರು ಸಂಘರ್ಷ ರಾಜಕೀಯಕ್ಕಿಳಿದರು. ಕನಿಷ್ಠ ತನ್ನ ದೈಹಿಕ ಆರೋಗ್ಯದ ಸ್ವಾಸ್ತ್ಯದ ಅನುಪಾತದಲ್ಲಾದರೂ ಅವರು ತನ್ನ ಪ್ರಚೋದನಕಾರಿ ಹೇಳಿಕೆಯನ್ನು ಸೀಮಿತಗೊಳಿಸಿದ್ದರೆ ಅವರಿಗೆ ಈ ಸ್ಥಿತಿ ಬರುತ್ತಿರಲಿಲ್ಲ.
ಇನ್ನಾದರೂ ಅವರು ತನ್ನ ಆರೋಗ್ಯ ನಿರ್ನಾಮ ಗೊಳ್ಳದ ಹಾಗೆ ಕಾಳಜಿ ವಹಿಸಲಿ, ಧಾರ್ಮಿಕ ಕೇಂದ್ರಗಳ ಬಗ್ಗೆ ವಿವಾದಿತ ಹೇಳಿಕೆ ನೀಡಲು ರಾಜ್ಯದಲ್ಲಿ ಅದೆಷ್ಟೋ ಆರೋಗ್ಯವಂತ ಹರಕು ಬಾಯಿ ಈಶ್ವರಪ್ಪಂದಿರು, ವೈದ್ಯ ವೃತ್ತಿ ಮರೆತು ಹೋದ ಡಾಕ್ಟರ್ ಕಲ್ಲಡ್ಕ ಭಟ್, ಹುಟ್ಟು ಅವಿವಾಹಿತ ಪ್ರಮೋದ್ ಮುತಾಲಿಕರು ಅಸ್ತಿತ್ವದಲ್ಲಿರುವಾಗ , ಹೆಗ್ಡೆಯವರು ತಮ್ಮ ಉಳಿದ ಆಯುಷ್ಯವನ್ನು ಸಂಸ್ಕಾರ ವೃದ್ದಿಸುವುದಕ್ಕೆ ವ್ಯಯಿಸುವುದು ಸೂಕ್ತವೆಂದು ಅರಿಯುವುದು ಒಳಿತು ಎಂದು ಕೆ.ಅಶ್ರಫ್( ಮಾಜಿ ಮೇಯರ್)
ಅಧ್ಯಕ್ಷರು.ದ.ಕ.ಜಿಲ್ಲಾ ಮುಸ್ಲಿಮ್ ಒಕ್ಕೂಟ ತಮ್ಮ ಪತ್ರಿಕಾ ಹೇಳಿಕೆಯಲ್ಲಿ ಪ್ರತಿಕ್ರಿಯಿಸಿದ್ದಾರೆ.