janadhvani

Kannada Online News Paper

ದುಬೈ ಅಂತಾರಾಷ್ಟ್ರೀಯ ಹೋಲಿ ಖುರ್‌ಆನ್ ಅವಾರ್ಡ್-ಕಂಠಪಾಟ ಸ್ಪರ್ಧೆಗೆ ಚಾಲನೆ

ದುಬೈ: ದುಬೈ ಅಂತರರಾಷ್ಟ್ರೀಯ ಹೋಲಿ ಖುರ್‌ಆನ್ ಪ್ರಶಸ್ತಿ ಪ್ರದಾನ ಕಾರ್ಯಕ್ರಮಗಳ  ಭಾಗವಾಗಿ ಖುರ್‌ಆನ್ ಪಠಿಸುವ ಸ್ಪರ್ಧೆಯು ಆರಂಭಗೊಂಡಿತು.

ಫಾರಿಸ್ ಸಯೀದ್ ಹಮಾದಿ (ಟಾಂಝಾನಿಯಾ), ನಾಸರ್ ನಿಹಾದ್ ಇಬ್ರಾಹಿಂ (ಜೋರ್ಡಾನ್), ಮುಹಮ್ಮದ್ ಸ್ವಾಲಿಹ್ ಹಯಾತುಫ್ (ತಜಿಕಿಸ್ತಾನ್), ಬಾರಿ ಉಮರ್ ಬೆಲ್ಲಾ (ಗೆಬೊನ್) ತಾರಿಕ್ ಅಝೀಝ್ ಕಡೋಡಿಯಾ (ಪೋರ್ಚುಗಲ್), ಅಯ್ ಮನ್ (ಮಯನ್ಮಾರ್) ಮೊದಲಾದವರು ಮೊದಲನೇ ದಿನದ ಸ್ಪರ್ಧೆಯಲ್ಲಿ ಭಾಗವಹಿಸಿದರು.

ಪ್ರಾಥಮಿಕ ಹಂತದಲ್ಲಿ ಅರ್ಹತಾ ಸ್ಪರ್ಧೆಯನ್ನು ಮುಗಿಸಿದ ನಂತರ, ಮುಖ್ಯ ವೇದಿಕೆಗೆ ಕರೆತರಲಾಯಿತು.ಮುಖ್ಯ ಜುಝ್‌ಅ್ (ಅಧ್ಯಾಯಗಳು) ನ್ನು ಬಾಯಿ ಪಾಠ ಮಾಡಲಾಗಿರುವುದರ ಪ್ರಾವೀಣ್ಯತೆಯನ್ನು ಸ್ಪರ್ಧೆಯಲ್ಲಿ ಪರಿಶೀಲನೆ ಮಾಡಲಾಯಿತು.ವಿಶ್ವದಾದ್ಯಂತ ಪ್ರಸಿದ್ಧರಾದ ತೀರ್ಪು ಗಾರರನ್ನು ಸ್ಪರ್ಧೆಯನ್ನು ನಿಯಂತ್ರಿಸಲು ಕರೆತರಲಾಗಿದೆ.

ದುಬೈ ಆಡಳಿತಾಧಿಕಾರಿಯ ಸಾಂಸ್ಕೃತಿಕ ಸಲಹೆಗಾರ, ದುಬೈ ಅಂತರರಾಷ್ಟ್ರೀಯ ಪವಿತ್ರ ಖುರ್‌ಆನ್ ಪ್ರಶಸ್ತಿ ಸಮಿತಿಯ ಉನ್ನತಾಧಿಕಾರಿ, ಇಬ್ರಾಹಿಮ್ ಮುಹಮ್ಮದ್ ಬು ಮಿಲ್ಹ, ಹಿರಿಯ ಅಧಿಕಾರಿಗಳು, ವಿವಿಧ ಇಲಾಖೆಗಳ ಪ್ರಮುಖರು,ಅವಾರ್ಡ್ ಪ್ರೊಗ್ರಾಮ್ ಪ್ರಾಯೋಜಕರು, ಮತ್ತು ವಿವಿಧ ಯೋಜನೆಗಳ ಪ್ರತಿನಿಧಿಗಳು ಭಾಗವಹಿಸಿದ್ದರು.

error: Content is protected !! Not allowed copy content from janadhvani.com