ರಿಯಾದ್: ಸೌದಿ ಅರೇಬಿಯಾದ ಹಣಕಾಸು ಪ್ರಾಧಿಕಾರವು ಒಂದು ರಿಯಾಲ್ ನೋಟನ್ನು ಹಂತಹಂತವಾಗಿ ಹಿಂದಕ್ಕೆ ಪಡೆಯಲಾಗುವುದು ಎಂದು ಘೋಷಿಸಿದೆ.
ನಾಣ್ಯಗಳನ್ನು ವ್ಯಾಪಕಗೊಳಿಸುವ ಭಾಗವಾಗಿ ಒಂದು ರಿಯಾಲ್ ನೋಟನ್ನು ಮಾರುಕಟ್ಟೆಯಿಂದ ಹಿಂಪಡೆಯಲಾಗುತ್ತದೆ.
ಕಳೆದ ಗುರುವಾರವೇ ಇದು ಜಾರಿಗೆ ಬಂದಿದ್ದು,.ಬ್ಯಾಂಕ್‌ಗಳಲ್ಲಿ ನೋಟುಗಳಿಗೆ ಬದಲಾಗಿ ನಾಣ್ಯವನ್ನು ವಿತರಿಸಲಾಗುತ್ತಿದೆ.ಮಾರುಕಟ್ಟೆಯಲ್ಲಿ ಚಲಾವಣೆಯಲ್ಲಿರುವ ನೋಟುಗಳು ಸಂಪೂರ್ಣವಾಗಿ ಬ್ಯಾಂಕುಗಳಿಗೆ ಹಿಂತಿರುಗುವ ತನಕ ನಿರ್ದಿಷ್ಟ ಅವಧಿಗೆ ನೋಟುಗಳು ಮತ್ತು ನಾಣ್ಯಗಳನ್ನು ವಿನಿಮಯ ಮಾಡಲು ಅನುಮತಿ ಇದೆ.
ಉತ್ತಮ ತಂತ್ರಜ್ಞಾನವನ್ನು ಬಳಸಿಕೊಂಡು ಸುಂದರವಾಗಿ ವಿನ್ಯಾಸಗೊಳಿಸಲಾದ ನಾಣ್ಯಗಳನ್ನು ಮಾರುಕಟ್ಟೆಗೆ ತರಲಾಗಿದೆ.
ದೊರೆ ಸಲ್ಮಾನ್ ಆಡಳಿತ ವಹಿಸಿಕೊಂಡ ಬಳಿಕ ಇದು ಆರನೇ ಬಾರಿಗೆ ನಾಣ್ಯಗಳನ್ನು ಹೊರತರಲಾಗುತ್ತಿದೆ.ಒಂದು ಹಲಾಲ, ಐದು ಹಲಾಲ, ಹತ್ತು ಹಲಾಲ, ಇಪ್ಪತ್ತೈದು ಹಲಾಲ, ಐವತ್ತು ಹಲಾಲ, ಒಂದು ರಿಯಾಲ್ ಮತ್ತು ಎರಡು ರಿಯಾಲ್ ನಾಣ್ಯಗಳನ್ನು ಹೊರತರಲಾಗಿದೆ.
ಸೌದಿಯಲ್ಲಿ ಚಲಾವಣೆಯಲ್ಲಿರುವ ನೋಟುಗಳಲ್ಲಿ ಶೇ 49 ರಷ್ಟು ಒಂದು ರಿಯಾಲ್ ನೋಟೇ ಆಗಿದೆ.ಒಂದು ರಿಯಾಲ್ ನೊಟುಗಳು ಬೇಗನೆ ಹಾನಿಯಾಗುವುದನ್ನು ತಡೆಯಲು ನಾಣ್ಯಗಳನ್ನು ವ್ಯಾಪಕ ಗೊಳಿಸುವುದರಿಂದ ಸಾಧ್ಯ ಎಂದು ನಿರೀಕ್ಷಿಸಲಾಗಿದೆ.
ಇನ್ನಷ್ಟು ಸುದ್ದಿಗಳು
ಉಮ್ರಾ ಯಾತ್ರಾರ್ಥಿಗಳಿಗೆ ಕೋವಿಡ್ ಲಸಿಕೆ ಕಡ್ಡಾಯ- ಸೌದಿ ಹಜ್, ಉಮ್ರಾ ಸಚಿವ
ಸೌದಿ: ಒಂದೇ ವಾರದಲ್ಲಿ 20 ಸಾವಿರ ಕೋವಿಡ್ ಪ್ರೋಟೋಕಾಲ್ ಉಲ್ಲಂಘನೆ
ಇಸ್ರೇಲ್- ಯುಎಇ ವೀಸಾ ರಹಿತ ಪ್ರಯಾಣ ಒಪ್ಪಂದ ರದ್ದು
ಅಲ್ ಮದೀನತುಲ್ ಮುನವ್ವರ ಮೂಡಡ್ಕ ಬತ್ತಾ ಸಮಿತಿಗೆ ನೂತನ ಸಾರಥ್ಯ
ವಾಟ್ಸಾಪ್ ಬಳಕೆದಾರರಿಗೆ ಸೌದಿ ಹಣಕಾಸು ಸಚಿವಾಲಯ ಎಚ್ಚರಿಕೆ
ಝಂಝಂ ಲೇಬಲಿನಲ್ಲಿ ಸಾದಾ ನೀರು ವಿತರಣೆ – ವಿದೇಶೀಯರ ಬಂಧನ