ಕರ್ನಾಟಕ ರಾಜ್ಯ ಸುನ್ನಿ ಸ್ಟೂಡೆಂಟ್ ಫೆಡರೇಶನ್ ಬೆಂಗಳೂರು ಜಿಲ್ಲಾ ಮಟ್ಟದ ಸಾಹಿತ್ಯೋತ್ಸವ ಜನವರಿ 6 ಹಾಗೂ 7 ರಂದು ಬೆಳಿಗ್ಗೆ 8 ಗಂಟೆಯಿಂದ ಬೆಂಗಳೂರು ನಗರದ ಅಲ್ ಅಮೀನ್ ಕಾಲೇಜ್ ನಲ್ಲಿ ನಡೆಯಲಿದೆ.
ಈ ಕಾರ್ಯಕ್ರಮದಲ್ಲಿ ಬೆಂಗಳೂರು ಜಿಲ್ಲಾ ವ್ಯಾಪ್ತಿಯ ವಿವಿಧ ಡಿವಿಷನ್ ಗಳಿಂದ ಆಯ್ಕೆಯಾದ ಸುಮಾರು 500ಕ್ಕೂ ಅಧಿಕ ಸ್ಪರ್ಧಾರ್ಥಿಗಳು ಭಾಗವಹಿಸಲಿದ್ದು, ವಿವಿಧ ವಿಭಾಗಗಳಲ್ಲಿ ಆಕರ್ಷಕ ವೇದಿಕೆಗಳಲ್ಲಿ ಸ್ಪರ್ಧಾ ಕಾರ್ಯಕ್ರಮ ನಡೆಯಲಿದೆ.
ಪ್ರಸ್ತುತ ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ವಿಧಾನ ಸಭಾ ಅಧ್ಯಕ್ಷರಾದ ಜನಾಬ್ ಯು ಟಿ ಖಾದರ್ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಕವಿಗಳಾದ ಡಾ. ಮೂಡ್ನಾಕೂಡು ಚಿನ್ನಸ್ವಾಮಿ ,ಸ್ಥಳೀಯ ಶಾಸಕರಾದ ಎನ್.ಎ.ಹಾರಿಸ್,ರಿಜ್ವಾನ್ ಅರ್ಷದ್ , ವಕ್ಪ್ ಬೋರ್ಡ್ ನಿಕಟ ಪೂರ್ವ ಅಧ್ಯಕ್ಷರಾದ ಎನ್.ಕೆ.ಎಂ ಶಾಫಿ ಸಅದಿ,ಅಲ್ ಅಮೀನ್ ಕಾಲೇಜ್ ಚೇರ್ಮಾನ್ ಉಮ್ಮರ್ ಇಸ್ಮಾಯಿಲ್ ಖಾನ್ ಹಾಗೂ ಪ್ರಮುಖ ಸಾದಾತುಗಳು, ಉಲಮಾ, ಉಮರಾ ನಾಯಕರು, ಸಂಘ ಕುಟುಂಬದ ಪದಾಧಿಕಾರಿಗಳು ಭಾಗವಹಿಸಲಿದ್ದು.
ದೀನೀ ಪ್ರೇಮಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ಸ್ವಾಗತ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.