janadhvani

Kannada Online News Paper

‘ಸಮಸ್ತ’ 100 ನೇ ವಾರ್ಷಿಕೋತ್ಸವ- ಇಂದು ಕಾಸರಗೋಡಿನಲ್ಲಿ ಘೋಷಣಾ ಸಮಾವೇಶ

ಸಮಸ್ತ ಧ್ವಜಕ್ಕೆ 60 ವರ್ಷಗಳು ಪೂರ್ಣಗೊಂಡಿದ್ದು ಹಾಗೂ ಸಮಸ್ತ 100ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿರುವ ಹಿನ್ನೆಲೆಯಲ್ಲಿ ಘೋಷಣೆಯನ್ನು ಕೂಗಿ 300 ಧ್ವಜಾರೋಹಣಗಾರರು ತಳಂಗರ ಮಾಲಿಕ್ ದಿನಾ‌ರ್ ನಿಂದ ನಡೆಸಿದ ಮೆರವಣಿಗೆ ಪ್ರೌಢವಾಗಿತ್ತು.

ಕಾಸರಗೋಡು: ಸಮಸ್ತ ಕೇರಳ ಜಂಇಯ್ಯತುಲ್ ಉಲಮಾದ 100ನೇ ವಾರ್ಷಿಕದ ಘೋಷಣಾ ಸಮಾವೇಶವು ಇಂದು ಕಾಸರಗೋಡಿನಲ್ಲಿ ನಡೆಯಲಿದೆ. ಅಧ್ಯಕ್ಷರಾದ ಇ.ಸುಲೈಮಾನ್ ಮುಸ್ಲಿಯಾರ್ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಸಮಾರಂಭದಲ್ಲಿ, ಪ್ರಧಾನ ಕಾರ್ಯದರ್ಶಿ,ಇಂಡಿಯನ್ ಗ್ರ್ಯಾಂಡ್ ಮುಫ್ತಿ ಕಾಂತಪುರಂ ಅಬೂಬಕರ್ ಮುಸ್ಲಿಯಾರ್ ಸಮ್ಮೇಳನದ ಘೋಷಣೆ ಮಾಡಲಿದ್ದಾರೆ.

100ನೇ ವರ್ಷಾಚರಣೆಯ ಅಂಗವಾಗಿ ಮೂರು ವರ್ಷಗಳ ಆಚರಣೆ ಹಾಗೂ ಯೋಜನೆಗಳನ್ನು ಸಮ್ಮೇಳನದಲ್ಲಿ ಪ್ರಕಟಿಸಲಾಗುತ್ತದೆ. ಶಿಕ್ಷಣ, ಉದ್ಯೋಗ ಮತ್ತು ಕೌಶಲ್ಯ ಅಭಿವೃದ್ಧಿ ಕ್ಷೇತ್ರಗಳಲ್ಲಿ ಗುಣಮಟ್ಟ ಮತ್ತು ಸ್ವಾವಲಂಬನೆಯನ್ನು ಸುಧಾರಿಸಲು ಒತ್ತು ನೀಡಿ ಯೋಜನೆಗಳನ್ನು ಜಾರಿಗೊಳಿಸಲಾಗುತ್ತಿದೆ.

ಕಾಸರಗೋಡು ಚಟ್ಟಂಚಾಲ್ ನಲ್ಲಿ ವಿಶೇಷವಾಗಿ ಸ್ಥಾಪಿಸಿರುವ ಮಾಲಿಕ್ ಇಬ್ನ್ ದಿನಾರ್ ನಗರಿಯಲ್ಲಿ ಸಂಜೆ 4 ಗಂಟೆಗೆ ಘೋಷಣಾ ಸಮಾವೇಶ ಆರಂಭವಾಗಲಿದೆ.ಸಮ್ಮೇಳನದಲ್ಲಿ ಸಮಸ್ತದ 40 ಕೇಂದ್ರ ಮುಶಾವರ ಸದಸ್ಯರು ಹಾಗೂ ಸಾಮಾಜಿಕ, ಸಾಂಸ್ಕೃತಿಕ ಕ್ಷೇತ್ರದ ಪ್ರಮುಖರು ಭಾಗವಹಿಸಲಿದ್ದಾರೆ.

ಸಮಸ್ತ ಕೇರಳ ಜಂಇಯ್ಯತುಲ್ ಉಲಮಾ 100ನೇ ವಾರ್ಷಿಕ ಘೋಷಣಾ ಸಮ್ಮೇಳನದ ಪ್ರಾರಂಭೋತ್ಸವದ ಅಂಗವಾಗಿ ಧ್ವಜಾರೋಹಣವನ್ನು ನಿನ್ನೆ ನೆರವೇರಿಸಲಾಯಿತು. ಕೇರಳ ಮುಸ್ಲಿಂ ಜಮಾಅತ್ ರಾಜ್ಯ ಪ್ರಧಾನ ಕಾರ್ಯದರ್ಶಿ ಸಯ್ಯಿದ್ ಇಬ್ರಾಹೀಮುಲ್ ಖಲೀಲುಲ್ ಬುಖಾರಿ, ಸಮಸ್ತ ಕಾರ್ಯದರ್ಶಿ ಪೇರೋಡ್ ಅಬ್ದುಲ್ ರಹ್ಮಾನ್ ಸಖಾಫಿ ಹಾಗೂ ಮುಶಾವರ ಸದಸ್ಯರಾದ ಎ.ಪಿ. ಅಬ್ದುಲ್ಲಾಹ್ ಮುಸ್ಲಿಯಾರ್ ಮಾಣಿಕೋತ್ ಧ್ವಜಾರೋಹಣ ನೆರವೇರಿಸಿದರು. 300 ಮಂದಿ ಧ್ವಜಧಾರಿಗಳ ಉಪಸ್ಥಿತಿಯು ಕಾರ್ಯಕ್ರಮವನ್ನು ಆಕರ್ಷಕಗೊಳಿಸಿತು.

ಕರ್ನಾಟಕ ಸ್ಪೀಕರ್ ಯು.ಟಿ.ಖಾದರ್, ಅಲವಿ ಸಖಾಫಿ ಕೊಳತ್ತೂರು, ಮೊಯ್ದಿನ್ ಕುಟ್ಟಿ ಬಾಖವಿ ಪೊನ್ಮಳ, ಮುಹಮ್ಮದಲಿ ಸಖಾಫಿ ತ್ರಿಕರಿಪುರ, ಸಯ್ಯಿದ್ ಹಸನ್ ಅಹದಲ್ ತಂಙಳ್, ಸಯ್ಯಿದ್ ಅಶ್ರಫ್ ತಂಙಳ್ ಮಂಞಂಪಾರ, ಸಯ್ಯಿದ್ ಪಿ.ಎಸ್.ಆಟಕೋಯ ತಂಙಳ್ ಪಂಚಿಕಲ್, ಸಯ್ಯಿದ್ ಜಲಾಲ್ ಬುಖಾರಿ ಮಲ್ಹರ್, ಸಯ್ಯಿದ್ ಇಸ್ಮಾಯಿಲ್ ತಂಙಳ್ ಪಾನೂರು, ಎನ್ ಅಲಿ ಅಬ್ದುಲ್ಲಾ, ಮಜೀದ್ ಕಕ್ಕಾಡ್, ಸೈದಲವಿ ಚೆಂಙರ, ಮುಸ್ತಫಾ ಮಾಸ್ಟರ್ ಕೋಡೂರು, ಕೆ.ಪಿ.ಹುಸೈನ್‌ ಸಅದಿ, ಮೊಯ್ದು ಸಅದಿ ಚೇರೂರು, ಬಿ.ಎಸ್.ಅಬ್ದುಲ್ಲಕುಂಞ ಫೈಝಿ, ಕುಟಸ್ಸೇರಿ ಅಬ್ದುಲ್ಲಾ ಬಾಖವಿ, ವೈ.ಎಂ.ಅಬ್ದುಲ್ ರಹ್ಮಾನ್ ಅಹ್ಸನಿ, ಹಮೀದ್ ಚೋವ್ವಾ, ಯು.ಸಿ.ಅಬ್ದುಲ್ ಮಜೀದ್, ಶಾನವಾಝ್ ಪಾದೂರ್, ಹಕೀಂ ಕುನ್ನಿಲ್,ಕೊವ್ವಲ್ ಆಮು ಹಾಜಿ, ಕ್ಯಾಪ್ಟನ್ ಶರೀಫ್ ಕಲ್ಲಟ್ರ, ಪಳ್ಳಂಗೋಡು ಅಬ್ದುಲ್ ಖಾದಿರ್ ಮದನಿ, ಮುಹಮ್ಮದ್ ಪರವೂರು ಮೊದಲಾದವರು ಶುಭಕೋರಿದರು.

ಸಮಸ್ತ ಧ್ವಜಕ್ಕೆ 60 ವರ್ಷಗಳು ಪೂರ್ಣಗೊಂಡಿದ್ದು ಹಾಗೂ ಸಮಸ್ತ 100ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿರುವ ಹಿನ್ನೆಲೆಯಲ್ಲಿ ಘೋಷಣೆಯನ್ನು ಕೂಗಿ 300 ಧ್ವಜಾರೋಹಣಗಾರರು ತಳಂಗರ ಮಾಲಿಕ್ ದಿನಾ‌ರ್ ನಿಂದ ನಡೆಸಿದ ಮೆರವಣಿಗೆ ಪ್ರೌಢವಾಗಿತ್ತು. ಪ್ರಥಮವಾಗಿ ಸಮಸ್ತ ಧ್ವಜ ಸ್ವೀಕಾರ ಮಾಡಿದ ಸ್ಥಳದಿಂದಲೇ ಆರಂಭಗೊಂಡ ಮೆರವಣಿಗೆ ರೋಚಕವಾಗಿತ್ತು.ಚಂದ್ರಗಿರಿ ಮಾರ್ಗವಾಗಿ ಸಅದಿಯ್ಯಾ ನೂರುಲ್ ಉಲಮಾ ದರ್ಬಾರಿಗೆ ತಲುಪಿ ಅಲ್ಲಿಂದ ಸಮ್ಮೇಳನ ನಗರಕ್ಕೆ ಮೆರವಣಿಗೆ ನಡೆಸಿ, ಧ್ವಜಾರೋಹಣ ನೆರವೇರಿಸಲಾಯಿತು.

error: Content is protected !! Not allowed copy content from janadhvani.com