ಬೆಳ್ತಂಗಡಿ: ಕರ್ನಾಟಕ ರಾಜ್ಯ ಸುನ್ನೀ ಯುವಜನ ಸಂಘ SჄS ನ 30 ನೇ ವರ್ಷಾಚರಣೆಯ ಪ್ರಚಾರವಾಗಿ ENERGIZE-2K24 ಸುನ್ನೀ ಸಂಘ ಕುಟುಂಬಗಳ ಸಮ್ಮಿಲನ ದಿನಾಂಕ ಜನವರಿ 12 ರಂದು ಮಲ್ಜಅ್ ವಿದ್ಯಾಸಂಸ್ಥೆಯಲ್ಲಿ ನಡೆಯಲಿದೆ.
ಮುಹಮ್ಮದಲಿ ಸಖಾಫಿ ವೆಳ್ಳಿಯಾಡ್ ಮುಖ್ಯ ಪ್ರಭಾಷಣ ನಡೆಸಲಿದ್ದಾರೆ.
ಪ್ರಸ್ತುತ ಕಾರ್ಯಕ್ರಮ ಆಯೋಜಿಸಲು ದಿನಾಂಕ 2023 ಡಿಸೆಂಬರ್ 10 ರಂದು SYS ಬೆಳ್ತಂಗಡಿ ಝೋನ್ ಅಧ್ಯಕ್ಷರಾದ ಕಾಸಿಂ ಮಾಚಾರು ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸ್ವಾಗತ ಸಮಿತಿಯನ್ನು ರಚನೆಮಾಡಲಾಯಿತು.
ಚೆಯರ್‌ಮೇನ್ ಸಲೀಂ ಕನ್ಯಾಡಿ, ಕನ್ವೀನರ್ ಅಬ್ದುರಝಾಖ್ ಸಖಾಫಿ ಮಡಂತ್ಯಾರು, ಕೋಶಾಧಿಕಾರಿಯಾಗಿ ಹಾರಿಸ್ ಕುಕ್ಕುಡಿ ವೈಸ್ ಚೆಯರ್‌ಮೇನ್ ಹಂಝ ಮದನಿ ಹಾಗೂ ಅಬ್ದುರ್ರಹ್ಮಾನ್ ಸಖಾಫಿ. ವೈಸ್ ಕನ್ವೀನರ್ ಜಮಾಲುದ್ದೀನ್ ಲತ್ವೀಫಿ ಹಾಗೂ ಅಯ್ಯೂಬ್ ಮಹ್ಲರಿಯವರನ್ನು ಆಯ್ಕೆ ಮಾಡಲಾಯಿತು.
ಝೋನ್ ಪ್ರಧಾನ ಕಾರ್ಯದರ್ಶಿ ನಝೀರ್ ಪೆರ್ದಾಡಿ ಸ್ವಾಗತಿಸಿ ವಂದಿಸಿದರು.