ಮಂಗಳೂರು: ಮುಸ್ಲಿಂ ಮಹಿಳೆಯರ ವಿರುದ್ಧ ನಿಂದನಾತ್ಮಕವಾಗಿ ಭಾಷಣ ಮಾಡಿ, ಸ್ತ್ರೀ ಕುಲವನ್ನು ಅವಮಾನಿಸಿ ನಿರಂತರವಾಗಿ ಸಮಾಜದ ಸ್ವಾಸ್ಥ್ಯವನ್ನು ಕೆಡಿಸುತ್ತಿರುವ ಕೋಮುವಾದಿ ಕಲ್ಲಡ್ಕ ಪ್ರಭಾಕರ್ ಭಟ್ ಬಂಧಿಸುವಂತೆ ಹಾಗೂ ಯಾವುದೇ ವೇದಿಕೆಗಳಲ್ಲಿ ಭಾಷಣ ಮಾಡದಂತೆ ನಿರ್ಬಂಧ ಹೇರಬೇಕಾಗಿ ಒತ್ತಾಯಿಸಿ ಕರ್ನಾಟಕ ಮುಸ್ಲಿಂ ಜಮಾಅತ್, ಎಸ್ ವೈ ಎಸ್-ಎಸ್ ಎಸ್ ಎಫ್ ದ.ಕ. ಜಿಲ್ಲಾ ವೆಸ್ಟ್ ಸಮಿತಿ ಮುಖಂಡರಿಂದ ಕಮಿಷನರೇಟ್ ಮಾರ್ಚ್ ನಡೆಸಲಾಯಿತು.
29/12/2023 ಶುಕ್ರವಾರ ಸಂಜೆ ಮಿನಿ ವಿಧಾನಸೌಧದಿಂದ ಆರಂಭಗೊಂಡ ಮಾರ್ಚ್ ಕಮಿಷನರ್ ಕಚೇರಿ ತನಕ ನಡೆಯಿತು. ಬಳಿಕ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಯವರನ್ನು ಭೇಟಿ ಮಾಡಿ ವಿವಿಧ ಬೇಡಿಕೆಗಳನ್ನು ಮುಂದಿಟ್ಟು ನ್ಯಾಯಕ್ಕಾಗಿ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿಯವರ ಮೂಲಕ ಸನ್ಮಾನ್ಯ ಮುಖ್ಯಮಂತ್ರಿಯವರಿಗೂ ಸನ್ಮಾನ್ಯ ಗೃಹ ಮಂತ್ರಿಯವರಿಗೂ ಮನವಿ ಸಲ್ಲಿಸಲಾಯಿತು.