ರಿಯಾದ್: ಕೊಲೆ ಪ್ರಕರಣದಲ್ಲಿ ಸೌದಿ ಜೈಲಿನಲ್ಲಿದ್ದ ಭಾರತೀಯನ ಗಲ್ಲು ಶಿಕ್ಷೆಯನ್ನು ಜಾರಿಗೊಳಿಸಲಾಗಿದೆ. ಕರ್ನಾಟಕದ ಮಂಗಳೂರು ಮೂಲದ ಸಮದ್ ಸ್ವಾಲಿಹ್ ಹಸನ್ ಎಂಬವರ ಮರಣದಂಡನೆ ಜಾರಿಗೊಳಿಸಲಾಗಿದೆ ಎಂದು ದಮ್ಮಾಮ್ ಜೈಲು ಅಧಿಕಾರಿಗಳು ಘೋಷಿಸಿದ್ದಾರೆ.
11 ವರ್ಷಗಳ ಹಿಂದೆ ಈ ಪ್ರಕರಣದಲ್ಲಿ ಸಮದ್ ರನ್ನು ಬಂಧಿಸಲಾಗಿತ್ತು. ಇಂದು ಬೆಳಗ್ಗೆ ಮರಣದಂಡನೆ ಶಿಕ್ಷೆ ವಿಧಿಸಲಾಯಿತು.
ಮನೆ ಚಾಲಕನಾಗಿ ಸೌದಿ ಅರೇಬಿಯಾಕೆ ಆಗಮಿಸಿದ್ದ ಸಮದ್ 11 ವರ್ಷಗಳ ಹಿಂದೆ, ಮನೆಗೆ ನುಗ್ಗಿ ಕಳ್ಳತನಕ್ಕೆ ಯತ್ನಿಸುವ ವೇಳೆ ತಡೆಯಲು ಬಂದಿದ್ದ ಸೌದಿ ಪೂರ್ವ ಪ್ರಾಂತ್ಯದ ಅಲಿ ಬಿನ್ ತ್ರಾದ್ ಅಲ್-ಅನಾಸಿ ಎಂಬ ಸೌದಿ ಪ್ರಜೆಯನ್ನು ಬಟ್ಟೆಯಿಂದ ಕಟ್ಟಿ ಉಸಿರುಗಟ್ಟಿಸಿ ಹತ್ಯೆ ನಡೆಸಲಾಗಿತ್ತು. ಬಳಿಕ ಪೊಲೀಸರು ಸಮದ್‌ನನ್ನು ಬಂಧಿಸಿ,ವಿಚಾರಣೆ ವೇಳೆ ಸಮದ್ ತಪ್ಪೊಪ್ಪಿಕೊಂಡಿದ್ದರು. ಕೊನೆಯಲ್ಲಿ, ಸುಪ್ರೀಂ ಕೋರ್ಟ್ ಮರಣದಂಡನೆಯನ್ನು ವಿಧಿಸಿತ್ತು. ಕೊಲ್ಲಲ್ಪಟ್ಟ ವ್ಯಕ್ತಿಯ ಸಂಬಂಧಿಕರು ಕ್ಷಮಾಪಣೆಗೆ ಸಿದ್ಧರಿಲ್ಲದ ಕಾರಣ ಅಂತಿಮವಾಗಿ ಮರಣದಂಡನೆಯನ್ನು ಜಾರಿಗೊಳಿಸಲಾಗಿದೆ.