janadhvani

Kannada Online News Paper

ಮಕ್ಕಾದಲ್ಲಿ ಸಿಡಿಲು ಬಡಿದು ನಾಲ್ವರು ಮೃತ್ಯು- ಓರ್ವರಿಗೆ ಗಾಯ

ಮಕ್ಕಾ | ಮಕ್ಕಾದಲ್ಲಿ ಸಿಡಿಲು ಬಡಿದು ನಾಲ್ವರು ಮೃತಪಟ್ಟಿದ್ದಾಗಿ ವರದಿಯಾಗಿದೆ. ಒಬ್ಬರು ಗಾಯಗೊಂಡಿದ್ದಾರೆ. ಮಕ್ಕಾದ ಸೌ‌ರ್ ಬೆಟ್ಟದಲ್ಲಿ ಬುಧವಾರ ಸಂಜೆ ಈ ಘಟನೆ ನಡೆದಿದೆ.

ಘಟನೆಯ ನಂತರ, ಸಿವಿಲ್ ಡಿಫೆನ್ಸ್ ಮತ್ತು ರೆಡ್ ಕ್ರೆಸೆಂಟ್ ಕಾರ್ಯಕರ್ತರು ಕ್ಷಿಪ್ರ ರಕ್ಷಣಾ ಕಾರ್ಯಾಚರಣೆ ನಡೆಸಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ರವಾನಿಸಲಾಗಿದ್ದು, ಮೃತದೇಹಗಳನ್ನು ಶವಾಗಾರಕ್ಕೆ ರವಾನಿಸಲಾಗಿದೆ.

ಮೃತಪಟ್ಟವರ ವಿವರಗಳು ಇನ್ನಷ್ಟೇ ಲಭ್ಯವಾಗಲಿದೆ.

error: Content is protected !! Not allowed copy content from janadhvani.com