janadhvani

Kannada Online News Paper

ಎಸ್ಸೆಸ್ಸೆಫ್ ಪುತ್ತೂರು ಡಿವಿಷನ್ ಸಾಹಿತ್ಯೋತ್ಸವ- ಮಾಡಾವು ಸೆಕ್ಟರ್ ಚಾಂಪಿಯನ್

ಪುತ್ತೂರು : ಕರ್ನಾಟಕ ರಾಜ್ಯ ಸುನ್ನಿ ಸ್ಟೂಡೆಂಟ್ ಫೆಡರೇಶನ್ ಎಸ್ಸೆಸ್ಸೆಫ್ ಪುತ್ತೂರು ಡಿವಿಷನ್ ಮಟ್ಟದ ಸಾಹಿತ್ಯೋತ್ಸವವು ಕಾವು ಬದ್ರಿಯಾ ಎಜು ಸೆಂಟರ್ ನಲ್ಲಿ ನಡೆಯಿತು. ನೂತನ ಮಾಡಾವು ಸೆಕ್ಟರ್ 965 ಅಂಕಗಳೊಂದಿಗೆ ಚಾಂಪಿಯನ್, ಮಾಣಿ ಸೆಕ್ಟರ್ 948 ಅಂಕಗಳೊಂದಿಗೆ ರನ್ನರ್ ತಮ್ಮದಾಗಿಸಿಕೊಂಡಿತು.

ಕ್ರಮವಾಗಿ ಈಶ್ವರಮಂಗಲ 905 , ಕಬಕ 784, ಕುಂಬ್ರ 777, ರೆಂಜ 747 ಹಾಗೂ ಪುತ್ತೂರು ಸೆಕ್ಟರ್ 698 ಅಂಕಗಳೊಂದಿಗೆ ಉತ್ತಮ ಪೈಪೋಟಿಯನ್ನು ನೀಡಿತು. ಸಬ್ ಜೂನಿಯರ್, ಜೂನಿಯರ್, ಸೀನಿಯರ್, ಜನರಲ್‌ ಹಾಗೂ ಕ್ಯಾಂಪಸ್ ವಿಭಾಗಗಳಲ್ಲಿ 118 ರಷ್ಟು ಸ್ಪರ್ಧೆಯು 4 ವೇದಿಕೆಗಳಲ್ಲಿ ಯಶಸ್ವಿಯಾಗಿ ನಡೆಯಿತು. ಡಿವಿಷನ್ ವ್ಯಾಪ್ತಿಯ 7 ಸೆಕ್ಟರ್ ಗಳಿಂದ ಆಯ್ಕೆಯಾದಂತಹ ಸುಮಾರು 450 ರಷ್ಷು ಸ್ಪರ್ಧಾರ್ಥಿಗಳು ಭಾಗವಹಿಸಿದ್ದರು.

ಸಮಾರೋಪ ಸಮಾರಂಭದಲ್ಲಿ ಸಂಸ್ಥೆಯ ರೂವಾರಿ ಸಯ್ಯದ್ ಹದ್ದಾದ್ ತಂಙಳ್ ದುಆ ನೆರವೇರಿಸಿ ತಮ್ಮ ಬಾಲ್ಯ ಕಾಲದ ಸಾಹಿತ್ಯೋತ್ಸವ ವೇದಿಕೆಯನ್ನು ನೆನಪಿಸುತ್ತಾ ಮಕ್ಕಳಿಗೆ ಹುರಿದುಂಬಿಸಿ ಫಲಿತಾಂಶ ವನ್ನು ಪ್ರಕಟಿಸಿದರು.
ಬೆಳಿಗ್ಗೆಯಿಂದ ಆರಂಭಗೊಂಡ ಕಾರ್ಯಕ್ರಮದಲ್ಲಿ ಕರ್ನಾಟಕ ಮುಸ್ಲಿಂ ಜಮಾಅತ್, ಎಸ್ ವೈ ಎಸ್ ಜಿಲ್ಲಾ, ಝೋನ್ , ಸರ್ಕಲ್, ಬ್ರಾಂಚ್ ಗಳ ನಾಯಕರು , ಎಸ್ಸೆಸ್ಸೆಫ್ ಜಿಲ್ಲಾ ನಾಯಕರು , ರಾಜಕೀಯ, ಸಾಮಾಜಿಕ ನಾಯಕರು ಭಾಗವಹಿಸಿ ಶುಭಹಾರೈಸಿದರು. ಡಿವಿಷನ್ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದವರು ಜನವರಿ 6, 7 ರಂದು ಉಪ್ಪಿನಂಗಡಿ, ಸರಳಿಕಟ್ಟೆಯಲ್ಲಿ ನಡೆಯುವ ದ.ಕ ಈಸ್ಟ್ ಜಿಲ್ಲಾ ಮಟ್ಟದ ಸಾಹಿತ್ಯೋತ್ಸವದಲ್ಲಿ ಪ್ರತಿನಿಧಿಸಲಿದ್ದಾರೆ. ಚಾಂಪಿಯನ್ ಹಾಗೂ ರನ್ನರ್ ಟ್ರೋಫಿಯನ್ನು ಸಯ್ಯದ್ ಹದ್ದಾದ್ ತಂಙಳ್ ರವರಿಂದ ಸೆಕ್ಟರ್ ನಾಯಕರು ಸ್ವೀಕರಿಸಿದರು.

error: Content is protected !! Not allowed copy content from janadhvani.com