janadhvani

Kannada Online News Paper

ಮಹಿಳೆಯರ ಅವಹೇಳನಕಾರಿ ಖಂಡನೆ ಫೈರೋಜ್ ರಜ್ವಿ

ಚಿಕ್ಕಮಗಳೂರು ಡಿಸೆಂಬರ್ 26 ಆರ್ ಎಸ್ ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಎಂಬುವ ಕೋಮುವಾದಿ ಮಂಡ್ಯದಲ್ಲಿ ಧಾರ್ಮಿಕ ಕಾರ್ಯಕ್ರಮವಂದರಲ್ಲಿ ಒಂದು ಧರ್ಮದ ಮಹಿಳೆಯರ ಮೇಲೆ ಅವಹೇಳನಕಾರಿಯಾಗಿ ಬಹಿರಂಗವಾಗಿ ಸಾರ್ವಜನಿಕರ ಎದುರು ಭಾಷಣ ಮಾಡಿದ ಘಟನೆ ದೇಶದ ಎಲ್ಲ ಮಹಿಳೆಯರನ್ನು ಅವಮಾನಿಸಿ ಮಹಿಳೆಯರ ಗೌರವಕ್ಕೆ ಧಕ್ಕೆಯುಂಟು ಮಾಡಿರುವುದಲ್ಲದೆ ಮಹಿಳಾ ಹಕ್ಕುಗಳ ಉಲ್ಲಂಘನೆಯಾಗಿರುತ್ತದೆ ಮತ್ತು ಇಡೀ ಸಮಾಜಕ್ಕೆ ನೋವುಂಟು ಮಾಡುವ ಸಂಗತಿಯಾಗಿದೆ ಆದ್ದರಿಂದ ಕಲ್ಲಡ್ಕ ಪ್ರಭಾಕರ್ ರನ್ನು ತಕ್ಷಣ ಬಂಧಿಸಿ ಕಠಿಣ ಕ್ರಮ ಕೈಗೊಳ್ಳಬೇಕಾಗಿದೆ ಎಂದು ಅಖಿಲ ಭಾರತ ಮಾನವ ಹಕ್ಕುಗಳ ಪರಿಷತ್ ಜಿಲ್ಲಾ ಅಧ್ಯಕ್ಷರಾದ ಹಾಜಿ ಫೈರೋಜ್ ಅಹಮದ್ ರಜ್ವಿ ರವರು ಒತ್ತಾಯಿಸಿದ್ದಾರೆ.

ಇದಕ್ಕೆ ಸಂಬಂಧಿಸಿದಂತೆ ಹೇಳಿಕೆ ನೀಡಿರುವ ರಜ್ವಿ ರವರು ಮಾನ್ಯ ಸರ್ವೋಚ್ಚ ನ್ಯಾಯಾಲಯ ಆಗಸ್ಟ್ 25 ರಂದು ದ್ವೇಷ ಭಾಷಣದ
ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದ ಸರ್ವೋಚ್ಚ ನ್ಯಾಯಾಲಯ ದ್ವೇಷ ಭಾಷಣ ಮಾಡಿದರೆ ಸಂತ್ರಸ್ತರು ದೂರು ನೀಡುವವರೆಗೆ ಕಾಯದೆ ಪೊಲೀಸರೇ ಸ್ವಯಂ ಪ್ರೇರಿತ ದೂರು ದಾಖಲಿಸಿ ಕ್ರಮ ಕೈಗೊಳ್ಳಬೇಕು ಎಂದು ರಾಜ್ಯಗಳಿಗೆ ಹೇಳಿತ್ತು.

ಸಮಾಜದಲ್ಲಿ ಶಾಂತಿ, ಸೌಹಾರ್ದ ಹಾಗು ಸಹೋದರತೆಯನ್ನು ಕಾಪಾಡಲೇಬೇಕು. ಇದಕ್ಕಾಗಿ 2018 ರಲ್ಲಿ ತಾನು ದ್ವೇಷ ಅಪರಾಧಗಳಿಗೆ ಕಡಿವಾಣ ಹಾಕಲು ಸೂಚಿಸಿದ್ದ ಮಾರ್ಗದರ್ಶಿ ಸೂತ್ರಗಳನ್ನು ಇನ್ನಷ್ಟು ಬಲಪಡಿಸಲು ಕೆಲವು ಹೆಚ್ಚುವರಿ ಕ್ರಮಗಳು ಅಗತ್ಯ ಎಂದು ಹೇಳಿತ್ತು. ಎಂದು ತಿಳಿಸಿದ್ದಾರೆ.

ಆ ಪೈಕಿ ಸಿಸಿಟಿವಿ ಕ್ಯಾಮರಾಗಳ ಅಳವಡಿಕೆ, ದ್ವೇಷ ಭಾಷಣ ಹೆಚ್ಚಿರುವ ಜಿಲ್ಲೆಗಳಲ್ಲಿ ಪೊಲೀಸ್‌ ಅಧಿಕಾರಿಗಳ ವಿಶೇಷ ಸಮಿತಿ ರಚನೆಯಂತಹ ಕ್ರಮಗಳನ್ನು ಜರುಗಿಸಬೇಕೆಂದು ನ್ಯಾಯಮೂರ್ತಿ ಸಂಜೀವ್ ಖನ್ನಾ ಹಾಗು ಎಸ್ ವಿ ಎನ್ ಭಟ್ಟಿ ಅವರ ಪೀಠ ಅದೇಶಿಸಿಸಿರುವುದು ಅನ್ವಯವಾಗುವಂತೆ
ಈ ರೀತಿಯ ಕೋಮು ಸಂಘರ್ಷಕ್ಕೆ ಕುಮ್ಮಕ್ಕು ನೀಡುವ ಒಂದು ಸಮುದಾಯದ ವಿರೋಧಿಯಾಗಿರುವ ಮಹಿಳೆಯರನ್ನು ಆಗೌರವವಾಗಿ ನಡೆದುಕೊಳ್ಳುವ ಕೋಮುದ್ವೇಷಿ ಮನಸ್ಥಿತಿಯುಳ್ಳ ವ್ಯಕ್ತಿಯನ್ನು ಮಾನವ ಸಮಾಜದಿಂದಲೇ ಬಹಿಷ್ಕರಿಸಬೇಕು ಇವರ ಮೇಲೆ ಕಠಿಣವಾದ ಕಾನೂನು ಕ್ರಮ ಜರುಗಿಸಿ ಜಾಮೀನು ರಹಿತ ಬಂಧನವಾಗಬೇಕೆಂದು ಆಗ್ರಹಿಸಿದ್ದಾರೆ.

error: Content is protected !! Not allowed copy content from janadhvani.com