ಎಸ್ಸೆಸ್ಸೆಫ್ ಬೊಳಂತೂರು ಸೆಕ್ಟರ್ ಸಾಹಿತ್ಯೋತ್ಸವ ಕಾರ್ಯಕ್ರಮವು ಡಿ.25 ರಂದು ದಾರುಲ್ ಅಶ್ ಅರಿಯ್ಯ ಎಜುಕೇಶನ್ ಸೆಂಟರ್ ನಲ್ಲಿ ನಡೆಯಿತು. 6 ಶಾಖೆಗಳ ಸುಮಾರು 200 ಸ್ಪರ್ಧಾರ್ಥಿಗಳು ಭಾಗವಹಿಸಿದ್ದರು.
ಕಾರ್ಯಕ್ರಮವನ್ನು ಸಿ.ಹೆಚ್ ಮಹಮ್ಮದ್ ಅಲಿ ಸಖಾಫಿ ಉದ್ಘಾಟಿಸಿ, ಶಿಹಾಬುದ್ದೀನ್ ತಂಙಳ್ ಮದಕ ದುಅ ನೆರವೇಸಿದರು.
ಕೆಪಿಸಿಸಿ ಕಾರ್ಯದರ್ಶಿ ಯಂ.ಎಸ್ ಮಹಮ್ಮದ್, ದ.ಕ ಜಿಲ್ಲಾ ಅಸಂಘಟಿತ ಕಾರ್ಮಿಕ ಘಟಕದ ಜಿಲ್ಲಾಧ್ಯಕ್ಷರಾದ ಅಬ್ಬಾಸ್ ಅಲಿ ಬೊಳಂತೂರು, ಸುನ್ನಿ ಮಹಲ್ ಸಾರಥಿ ಸಿ.ಯಂ.ಅಬೂಬಕ್ಕರ್ ಲತೀಫ್ ಎಣ್ಮೂರು, ಅಕ್ಷಯ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷರಾದ ಝಕರಿಯಾ ನಾರ್ಶ, ಸಂಚಾಲಕ ಇಬ್ರಾಹೀಂ ಕರೀಂ ಕದ್ಕಾರ್ , ಬೊಳಂತೂರು ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಯಾಕೂಬ್ ದಂಡೆಮಾರ್, ಜಯರಾಜ್ ಎನ್ ಸಿ ರೋಡ್, ಬೊಳಂತೂರು ಗ್ರಾಮ ಪಂಚಾಯತ್ ಸದಸ್ಯ ಅಶ್ರಫ್ ಬೊಳಂತೂರು, ನಾರಂಕೋಡಿ ಮದ್ರಸ ಅಧ್ಯಕ್ಷ ಅಬ್ದುಲ್ಲ ನಾರಂಕೋಡಿ, ಅಬ್ದುಲ್ ಖಾದರ್ ಕೊಕ್ಕಪ್ಪುಣಿ, ಸುನ್ನಿ ಮಹಲ್ ಮದರ್ರಿಸ್ ಸಾಲಿಮ್ ಸಅದಿ, SYS ಮಂಚಿ ಸರ್ಕಲ್ ಸ್ವಾಂತಾನ ಕಾರ್ಯದರ್ಶಿ ಹಂಝ ಮಂಚಿ, SSF ಮಾಜಿ ಜಿಲ್ಲಾ ಸದಸ್ಯ ಅಸ್ಲಂ ಪಂಜಿಕಲ್ಲು, ಬಂಟ್ವಾಳ ಡಿವಿಜನ್ ಕಾರ್ಯದರ್ಶಿ ಲುಕ್ಮಾನ್ ಕುಕ್ಕಾಜೆ.
ಸೆಕ್ಟರ್ ನಾಯಕರುಗಳಾದ ಹಮೀದ್ ಕದ್ಕಾರ್, ಮಜೀದ್ ಕದ್ಕಾರ್ , ಇಕ್ಬಾಲ್ ಹನೀಫಿ ಅಶ್ ಅರಿಯ್ಯ, ಆಸಿಫ್ ಬೊಳಂತೂರು, ಸಿದ್ದೀಕ್ ನಾಡಾಜೆ, ಶಾಯಿಕ್ ನಾರ್ಶ, ಝುಬೈರ್ ಅಶ್ ಅರಿಯ್ಯ, ನಜೀಬ್ ಮುಸ್ಲಿಯಾರ್ ಕಲ್ಲಡ್ಕ, ಮಹುಶುಮ್ ನಾರ್ಶ, ಪಯಾಝ್ ಅಶ್ ಅರಿಯ್ಯ, ಆಶಿಕ್ ಅಶ್ ಅರಿಯ್ಯ ಇವರು ಭಾಗವಹಿಸಿದರು.
ತೀರ್ಪುಗಾರರಾಗಿ ಇಸ್ಮಾಯಿಲ್ ಮಾಸ್ಟರ್ ಮಂಗಿಲಪದವು, ಅಬ್ದುಲ್ ರಹಿಮಾನ್ ಪದ್ಮುಂಜೆ ಹಾಗೂ ರಶೀದ್ ಜೌಹರಿ ಕರಾಯ,ಕಬೀರ್ ಸಖಾಫಿ ಮಾಲಾಡಿ, ಫಾರೂಕ್ ಅಂಜಾದಿ ಬಜಪೆ, ಹೈದರ್ ಮಾಸ್ಟರ್ ಜಾರಿಗೆಬೈಲ್, ರಿಜ್ವಾನ್ ಮಾಸ್ಟರ್ ಕೆಜಿ ಯನ್ ಇವರು ಸಹಕರಿಸಿದರು. ವಿವಿಧ ರೀತಿಯ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಥಮ ಹಾಗೂ ದ್ವಿತೀಯ ಬಹುಮಾನವನ್ನು ಪಡಕೊಂಡ ವಿದ್ಯಾರ್ಥಿಗಳಿಗೆ ಬಹುಮಾನವನ್ನು ಅಕ್ಷಯ ಚಾರಿಟೇಬಲ್ ಟ್ರಸ್ಟ್ ವತಿಯಿಂದ ನೀಡಲಾಯಿತು.
SSF ಬೊಳಂತೂರು ಯುನಿಟ್ ಚಾಂಪಿಯನ್ ಆಗಿ , SSF ನಾರ್ಶ ಶಾಖೆ ರನ್ನರ್ಸ್ ಆಗಿ ಹೊರಹೊಮ್ಮಿತು. ರಾಫಿ ಅಶ್ ಅರಿಯ್ಯ ಕಾರ್ಯಕ್ರಮ ನಿರೂಪಿಸಿದರು, ಝಿಯಾದ್ ಸಖಾಫಿ ಬಾರೆಬೆಟ್ಟು ಸ್ವಾಗತಿಸಿ ವಂದಿಸಿದರು.