janadhvani

Kannada Online News Paper

ಕೆಸಿಎಫ್ ಬಹರೈನ್: ಇಶಾರ ಅಭಿಯಾನ ಹಾಗೂ ಸ್ಪೀಕರ್ ಯು.ಟಿ. ಖಾದರ್ ರವರಿಗೆ ಸನ್ಮಾನ ಸಮಾರಂಭ

ಮನಾಮ: ಕೆಸಿಎಫ್ ಬಹರೈನ್ ರಾಷ್ಟ್ರೀಯ ಸಮಿತಿಯ ವತಿಯಿಂದ ಕೆಸಿಎಫ್ ಮುಖವಾಣಿ ಗಲ್ಫ್ ಇಶಾರ ಅಭಿಯಾನದ ಉದ್ಘಾಟನೆ ಹಾಗೂ ಕರ್ನಾಟಕ ರಾಜ್ಯ ವಿಧಾನ ಸಭೆಯ ಸ್ಪೀಕರ್ ಸನ್ಮಾನ್ಯ ಯು. ಟಿ. ಖಾದರ್ ರವರಿಗೆ ಸನ್ಮಾನ ಸಮಾರಂಭ ಕಾರ್ಯಕ್ರಮವು ಗುದೈಬಿಯಾ ಕೆಸಿಎಫ್ ಸೆಂಟರಿನಲ್ಲಿ ನಡೆಯಿತು.

ಅಸ್ಸಯ್ಯಿದ್ ಆಟಕೋಯ ತಂಙಳ್ ಆದೂರು ರವರ ದುಆದೊಂದಿಗೆ ಪ್ರಾರಂಭವಾದ ಕಾರ್ಯಕ್ರಮದಲ್ಲಿ ಕೆಸಿಎಫ್ ಬಹರೈನ್ ರಾಷ್ಟ್ರೀಯ ಸಮಿತಿಯ ಅಧ್ಯಕ್ಷರಾದ ಜನಾಬ್ ಜಮಾಲುದ್ದೀನ್ ವಿಟ್ಲರವರು ಅಧ್ಯಕ್ಷತೆ ವಹಿಸಿದ್ದರು.

ಕೆಸಿಎಫ್ ರಾಷ್ಟ್ರೀಯ ಸಮಿತಿ ಸಂಘಟನಾ ಇಲಾಖೆ ಅಧ್ಯಕ್ಷರಾದ ಖಲಂದರ್ ಮುಸ್ಲಿಯಾರ್ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಮುಖ್ಯ ಅತಿಥಿಯಾಗಿ ಆಗಮಿಸಿದ ಸನ್ಮಾನ್ಯ ಯು.ಟಿ.ಖಾದರ್ ರವರು ಮಾತನಾಡಿ ಸಾತ್ವಿಕ ಉಲಮಾಗಳ ನಾಯಕತ್ವದಲ್ಲಿ ಕಾರ್ಯಾಚರಿಸುತ್ತಿರುವ ಕೆಸಿಎಫ್ ನ ಕಾರ್ಯಚಟುವಟಿಕೆಗಳ ಬಗ್ಗೆ ಶ್ಲಾಘನೆಯನ್ನು ವ್ಯಕ್ತಪಡಿಸಿದರು.

ಯುವ ಉದ್ಯಮಿ ಮನ್ಸೂರ್ ಹೆಜಮಾಡಿಯವರು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಪ್ರಾಸ್ತಾವಿಕ ಭಾಷಣ ಮಾಡಿದ ಕೆಸಿಎಫ್ ಬಹರೈನ್ ರಾಷ್ಟೀಯ ಸಮಿತಿಯ ಪ್ರಧಾನ ಕಾರ್ಯದರ್ಶಿ ಹಾರಿಸ್ ಸಂಪ್ಯರವರು ಕೆಸಿಎಫ್ ನ ಕಾರ್ಯ ವೈಖರಿ ಗಳ ಬಗ್ಗೆ ವಿವರಿಸುತ್ತಾ ದಶಮನೋತ್ಸವದ ಭಾಗವಾಗಿ ಕೆಸಿಎಫ್ ಹಮ್ಮಿಕೊಂಡ ಕಾರ್ಯ ಯೋಜನೆಗಳನ್ನು ಯಶಸ್ವಿಗೊಳಿಸಲು ಸರ್ವರೂ ಸಹಕರಿಸಬೇಕೆಂದು ಕರೆ ನೀಡಿದರು.

ವೇದಿಕೆಯಲ್ಲಿ ಆಸಿಫ್ ಉಳ್ಳಾಲ, ಯು.ಟಿ. ಇಫ್ತಿಕಾರ್, ಶಿರಾಜ್ ಕಿನ್ಯ ಮುಂತಾದ ಗಣ್ಯರು ಉಪಸ್ಥಿತರಿದ್ದರು.ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಸಮಿತಿಯ ಕೋಶಾಧಿಕಾರಿ ಸೂಫಿ ಪೈಂಬಚ್ಚಾಲ್, ಶಿಕ್ಷಣ ವಿಭಾಗದ ಅಧ್ಯಕ್ಷರಾದ ಹನೀಫ್ ಮುಸ್ಲಿಯಾರ್ ರೆಂಜ, ಕಾರ್ಯದರ್ಶಿ ಅಶ್ರಫ್ ರೆಂಜಾಡಿ, ಸಂಘಟನಾ ಇಲಾಖೆ ಕಾರ್ಯದರ್ಶಿ ಮನ್ಸೂರ್ ಬೆಳ್ಮ, ಸಾಂತ್ವನ ವಿಭಾಗದ ಅದ್ಯಕ್ಷರಾದ ಸುಹೈಲ್ ಬಿ.ಸಿ. ರೋಡ್ ಕಾರ್ಯದರ್ಶಿ ರಝಾಖ್ ಆನೇಕಲ್, ಪ್ರಕಾಶನ ವಿಭಾಗದ ಅಧ್ಯಕ್ಷರಾದ ಲತೀಫ್ ಪೇರೋಳಿ, ಇಹ್ಸಾನ್ ವಿಭಾಗದ ಕಾರ್ಯದರ್ಶಿ ನಝೀರ್ ಹಾಜಿ ದೇರ್ಳಕಟ್ಟೆ, ಆಡಳಿತ ವಿಭಾಗದ ಅಧ್ಯಕ್ಷರಾದ ಸವಾದ್ ಉಳ್ಳಾಲ, ಕಾರ್ಯದರ್ಶಿ ಅನ್ಸಾರ್ ಬಜ್ಪೆ, ಹಾಗೂ ಝೋನಲ್, ಸೆಕ್ಟರುಗಳ ಪ್ರತಿನಿಧಿಗಳು ಭಾಗವಹಿಸಿದ್ದರು.

ರಾಷ್ಟ್ರೀಯ ಸಮಿತಿಯ ಅಧ್ಯಕ್ಷರಾದ ಜಮಾಲುದ್ದೀನ್ ವಿಟ್ಲರವರು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.
ಪ್ರಕಾಶನ ವಿಭಾಗದ ಕಾರ್ಯದರ್ಶಿ ತೌಫೀಖ್ ಬೆಳ್ತಂಗಡಿ ಧನ್ಯವಾದ ಸಮರ್ಪಿಸಿದರು.

✍️ ಎಂ.ಎ. ವೇಣೂರು, ಬಹರೈನ್.

error: Content is protected !! Not allowed copy content from janadhvani.com