janadhvani

Kannada Online News Paper

ಜ್ಞಾನವಾಪಿ ಮಸೀದಿ ಧ್ವಂಸಕ್ಕೆ ಆಗ್ರಹಿಸಿ ಕೋರ್ಟ್ ಮೆಟ್ಟಲೇರಿದ್ದ ಹರಿಹರ ಪಾಂಡೆ ಸಾವು

ಇವರಲ್ಲಿ ಸೋಮನಾಥ್ ವ್ಯಾಸ್ ಮತ್ತು ಪ್ರಫಾ ರಾಮರಂಗ್ ಶರ್ಮಾ ಈ ಹಿಂದೆಯೇ ಸಾವನ್ನಪ್ಪಿದ್ದರು.

ವಾರಣಾಸಿ | ಜ್ಞಾನವಾಪಿ ಮಸೀದಿ ಧ್ವಂಸಕ್ಕೆ ಆಗ್ರಹಿಸಿ ನ್ಯಾಯಾಲಯದ ಮೆಟ್ಟಿಲೇರಿದ್ದ ಮೂವರಲ್ಲಿ ಕೊನೆಯವರಾದ ಹರಿಹರ ಪಾಂಡೆ ಸಾವನ್ನಪ್ಪಿದ್ದಾರೆ.ಅವರಿಗೆ 77 ವರ್ಷ ವಯಸ್ಸಾಗಿತ್ತು. ಹರಿಹರ ಪಾಂಡೆ ಅವರ ಪುತ್ರ ಕರಣ್ ಶಂಕ‌ರ್ ಪಾಂಡೆ ಮಾತನಾಡಿ, ಸೋಂಕಿನಿಂದ ತಂದೆಯ ಸ್ಥಿತಿ ಹದಗೆಟ್ಟಿ, ದೀರ್ಘಕಾಲದ ಅನಾರೋಗ್ಯದಿಂದ ಚಿಕಿತ್ಸೆ ಪಡೆಯುತ್ತಿದ್ದರು ಎಂದರು.

ಮಸೀದಿಯನ್ನು ಕೆಡವಲು ಆಗ್ರಹಿಸಿದ್ದ ಮೂವರಲ್ಲಿ ಸೋಮನಾಥ್ ವ್ಯಾಸ್ ಮತ್ತು ಪ್ರೊ.ರಾಮರಂಗ್ ಶರ್ಮಾ ಈ ಹಿಂದೆಯೇ ಸಾವನ್ನಪ್ಪಿದ್ದರು.

1991ರಲ್ಲಿ ಸೋಮನಾಥ ವ್ಯಾಸ್,ಪ್ರೊ. ರಾಮರಂಗ್ ಶರ್ಮಾ ಮತ್ತು ಹರಿಹರ ಪಾಂಡೆ ಎಂಬುವವರು ಆದಿ ವಿಶ್ವೇಶ್ವರ ದೇವಸ್ಥಾನದ ಜಾಗದಲ್ಲಿರುವ ಜ್ಞಾನವಾಪಿ ಮಸೀದಿಯನ್ನು ಕೆಡವಲು ಒತ್ತಾಯಿಸಿ ಅರ್ಜಿ ಸಲ್ಲಿಸಿದ್ದರು.