ಮಂಗಳೂರು; ಎಸ್‌ವೈಎಸ್ ದಕ್ಷಿಣ ಕನ್ನಡ ಜಿಲ್ಲಾ ವೆಸ್ಟ್ ವತಿಯಿಂದ ಏಳು ಝೋನ್‌ಗಳ ಕ್ಯಾಬಿನೆಟ್ ನಾಯಕರಿಗಾಗಿ TOPS PLUS ಕಾರ್ಯಕ್ರಮವು ಜಿಲ್ಲಾಧ್ಯಕ್ಷ ವಿ.ಯು.ಇಸ್ಹಾಕ್ ಝುಹ್ರಿ ಕಾನೆಕೆರೆ ಅಧ್ಯಕ್ಷತೆಯಲ್ಲಿ ಅಡ್ಯಾರ್ ಕಣ್ಣೂರ್ ಸುನ್ನೀ ಸೆಂಟರ್ ನಲ್ಲಿ ನಡೆಯಿತು .
ರಾಜ್ಯ ಇಸಾಬಾ ಕಾರ್ಯದರ್ಶಿ ಇಬ್ರಾಹಿಂ ಖಲೀಲ್ ಮಾಲಿಕಿ ಬೋಳಂತೂರು ಸಭೆಯನ್ನು ಉದ್ಘಾಟಿಸಿದರು. ಎಸ್‌ವೈಎಸ್ ರಾಜ್ಯ ನಾಯಕರಾದ ಮುಹಮ್ಮದ್ ಅಲಿ ಸಖಾಫಿ ಸುರಿಬೈಲ್ ತರಗತಿ ನಡೆಸಿದರು.
ಜಿಲ್ಲಾ ವ್ಯಾಪ್ತಿಯ ಏಳು ಝೋನ್ ಕ್ಯಾಬಿನೆಟ್ ನಾಯಕರ ನಡುವೆ ಸಾಂಘಿಕ ಚಟುವಟಿಕೆ ಬಗ್ಗೆ ಅವಲೋಕನ ನಡೆಯಿತು. ಈ ಸಂದರ್ಭದಲ್ಲಿ ರಾಜ್ಯ ನಾಯಕರಾದ ಬಶೀರ್ ಮದನಿ ಕೂಳೂರು, ಆಸಿಫ್ ಹಾಜಿ ಕೃಷ್ಣಾಪುರ, ಜಿಲ್ಲಾ ಕೋಶಾಧಿಕಾರಿ ನಝೀರ್ ಮುಡಿಪು, ಜಿಲ್ಲಾ ಕಾರ್ಯದರ್ಶಿಗಳಾದ ಬದ್ರುದ್ದೀನ್ ಅಝ್‌ಜರಿ ಕೈಕಂಬ, ಮೆಹಬೂಬ್ ಸಖಾಫಿ ಕಿನ್ಯ, ಬಶೀರ್ ಸಖಾಫಿ ಉಳ್ಳಾಲ, ಖಾಲಿದ್ ಹಾಜಿ ಭಟ್ಕಳ, ಅಬ್ದುರ್ರಝಾಕ್ ಭಾರತ್ ಮಂಚಿ ಮುಂತಾದವರು ಉಪಸ್ಥಿತರಿದ್ದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಬ್ದುರ್ರಹ್ಮಾನ್ ಹಾಜಿ ಪ್ರಿಂಟೆಕ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.