janadhvani

Kannada Online News Paper

ಮಸ್ಜಿದುಲ್ ಹಿದಾಯ ಆಡಳಿತ ಸಮಿತಿ ದಿಡುಪೆ ಇದರ ನೂತನ ಅಧ್ಯಕ್ಷರಾಗಿ ಡಿ.ಬಿ ಇಸ್ಮಾಯಿಲ್ ಮುಸ್ಲಿಯಾರ್ ಪುನರಾಯ್ಕೆ

ಬೆಳ್ತಂಗಡಿ : ರಹ್ಮಾನಿಯಾ ಜುಮಾ ಮಸೀದಿ ಹಾಗೂ ದರ್ಗಾ ಶರೀಫ್ ಕಾಜೂರು ಇದರ ಅಂಗಸಂಸ್ಥೆಯಾದ ಮಸ್ಜಿದುಲ್ ಹಿದಾಯ ಹಾಗೂ ಹಿದಾಯತುಲ್ ಇಸ್ಲಾಂ ಮದರಸ ದಿಡುಪೆ ಆಡಳಿತ ಸಮಿತಿ ಮಹಾಸಭೆಯು ಕಾಜೂರು ದರ್ಗಾ ಸಮಿತಿ ಅಧ್ಯಕ್ಷರಾದ ಜ. ಕೆ.ಯು ಇಬ್ರಾಹಿಂ ಕಾಜೂರು ಇವರ ಸಭಾಧ್ಯಕ್ಷತೆಯಲ್ಲಿ ದಿಡುಪೆ ಮದರಸ ಹಾಲ್ ನಲ್ಲಿ ನಡೆಯಿತು. ಸ್ಥಳೀಯ ಇಮಾಂ ಶರೀಫ್ ಸಖಾಫಿ ಉಜಿರ್ಬೆಟ್ಟು ದುಆ ಹಾಗೂ ಉದ್ಘಾಟನೆ ಮಾಡಿದರು .

ಕಾಜೂರು ದರ್ಗಾ ಶರೀಫ್ ಆಡಳಿತ ಸಮಿತಿ ಪ್ರದಾನ ಕಾರ್ಯದರ್ಶಿ, ದ.ಕ ಜಿಲ್ಲಾ ವಕ್ಫ್ ಸಲಹಾ ಸಮಿತಿ ಸದಸ್ಯರಾದ ಜೆ.ಎಚ್ ಅಬೂಬಕರ್ ಸಿದ್ದೀಕ್ ಕಾಜೂರ್ , ಕೋಶಾಧಿಕಾರಿ ಮುಹಮ್ಮದ್ ಕಮಾಲ್ ಕಾಜೂರು ಇವರ ಗೌರವ ಉಪಸ್ಥಿತಿಯೊಂದಿಗೆ ನಡೆದ ಮಹಾಸಭೆಯಲ್ಲಿ ಹಿಂದಿನ ಸಮಿತಿಯ ಕಾರ್ಯ ಚಟುವಟಿಕೆಗಳನ್ನು ಚರ್ಚಿಸಿ ಸಭೆಯ ಸರ್ವಾನುಮತದಂತೆ ಈ ಹಿಂದಿನ ಸಮಿತಿಯನ್ನೇ ಪುನರಾಯ್ಕೆ ಮಾಡಲಾಯಿತು.

ಅದರಂತೆ ಅಧ್ಯಕ್ಷರಾಗಿ ಡಿ.ಬಿ ಇಸ್ಮಾಯಿಲ್ ಮುಸ್ಲಿಯಾರ್ ದಿಡುಪೆ, ಪ್ರಧಾನ ಕಾರ್ಯದರ್ಶಿ ಎ.ಯು ಮುಹಮ್ಮದ್ ಅಲಿ ಅಶ್ವತ್ತಡಿ, ಕೋಶಾಧಿಕಾರಿ ಎನ್ ಎ ಪುತ್ತಬ್ಬ ಅಡ್ಕ , ಉಪಾಧ್ಯಕ್ಷರು ಅಬ್ದುಲ್ ಖಾದರ್ ಪಯ್ಯೆ , ಕಾರ್ಯದರ್ಶಿ ನಿಝಾಮುದ್ದೀನ್ ಅಜಲ್ದಕ್ಕಿ ಸಹಿತ ವಿರುವ 11 ಸದಸ್ಯರನ್ನೊಳಗೊಂಡ ಉತ್ತಮ ಸಮಿತಿಯನ್ನು ರಚಿಸಲಾಯಿತು.

ಸಮಿತಿ ಅಧ್ಯಕ್ಷರಿಂದ ಧನ್ಯವಾದದೊಂದಿಗೆ ಸಭೆಯು ಮುಕ್ತಯವಾಯಿತು.