janadhvani

Kannada Online News Paper

ಎಸ್ಸೆಸ್ಸೆಫ್ ಬೆಂಗಳೂರು ಜಿಲ್ಲೆಯ ಡಿವಿಷನ್ ಗಳಲ್ಲಿ ಸಾಹಿತ್ಯೋತ್ಸವಕ್ಕೆ ಚಾಲನೆ

ವಿದ್ಯಾರ್ಥಿ ಪ್ರತಿಭೆಗಳಲ್ಲಿ ಅಡಗಿರುವ ಸುಪ್ತ ಶಕ್ತಿಯನ್ನು ಹೊರತಂದು ಅವರ ಭವಿಷ್ಯವನ್ನು ಬೆಳಗಿಸಲು ಎಸ್ಸೆಸ್ಸೆಫ್ ಕಳೆದ ಎರಡು ದಶಕಗಳಿಂದ ನಡೆಸಿಕೊಂಡು ಬರುತ್ತಿರುವ ವಿದ್ಯಾರ್ಥಿ ಪ್ರತಿಭಾ ಹಬ್ಬವಾಗಿದೆ ಸಾಹಿತ್ಯೋತ್ಸವ. ಭಾಷಣ ಬರಹ ಹಾಗೂ ಇನ್ನಿತರ ವಿವಿಧ ಕ್ಷೇತ್ರಗಳಲ್ಲಿರುವ ಪ್ರತಿಭಾನ್ವಿತರನ್ನು ಸಮಾಜಕ್ಕೆ ಪರಿಚಯಿಸಿ ಅವರನ್ನು ಸಮಾಜದ ಮುಖ್ಯವಾಹಿನಿಗೆ ಕರೆ ತರುವ ನಿಟ್ಟಿನಲ್ಲಿ ಎಸ್ಸೆಸ್ಸೆಫ್ ಸಾಹಿತ್ಯೋತ್ಸವದ ಮೂಲಕ ಕಾರ್ಯೋನ್ಮುಕವಾಗಿದೆ.

ಎಸ್ಸೆಸ್ಸೆಫ್ ನ ಸಾಹಿತ್ಯೋತ್ಸವವು ಪ್ರಖ್ಯಾತ ವಾಗ್ಮಿಗಳನ್ನು, ಗಾಯಕರನ್ನು, ಕವಿಗಳನ್ನು, ಸಮಾಜ ಸೇವಕರನ್ನು, ನಾಯಕರನ್ನು ಸೃಷ್ಟಿಸುವಲ್ಲಿ ಯಶಸ್ಸು ಕಂಡಿದೆ.ಬೆಂಗಳೂರಿನ ಜಿಲ್ಲಾ ವ್ಯಾಪ್ತಿಯ ಜಯನಗರ, ಯಶವಂತಪುರ, ಶಿವಾಜಿ ನಗರ,ಕೆ ಆರ್.ಪುರಂ,ಮಾರ್ಥ ಹಳ್ಳಿ ಡಿವಿಷನ್ ಗಳಲ್ಲಿ ಆದಿತ್ಯವಾರ ಸಾಹಿತ್ಯೋತ್ಸವ ನಡೆಯಲಿದ್ದು, 120 ಸ್ಪರ್ದೆಗಳಲ್ಲಿ ಸ್ಪರ್ದಾರ್ಥಿಗಳು ಭಾಗವಹಿಸಲಿದ್ದಾರೆ.

error: Content is protected !! Not allowed copy content from janadhvani.com