janadhvani

Kannada Online News Paper

ಮರ್ಕಝುಲ್ ಹುದಾ ಒಮಾನ್ :ಅಧ್ಯಕ್ಷರಾಗಿ ಸಾದಿಖ್ ಸುಳ್ಯ,ಫಾಝಿಲ್ ಕಂಕನಾಡಿ ಪ್ರಧಾನ‌ ಕಾರ್ಯದರ್ಶಿ

ಪುತ್ತೂರು ಕುಂಬ್ರ ಮರ್ಕಝುಲ್ ಹುದಾ ಮಹಿಳಾ ಕಾಲೇಜು ಒಮಾನ್ ರಾಷ್ಟ್ರೀಯ ಸಮಿತಿಯ ಮಹಾಸಭೆ ಮತ್ತು ಶೈಖ್ ರಿಫಾಈ (ರ) ಸಂಸ್ಮರಣೆ ಕಾರ್ಯಕ್ರಮವು ಇತ್ತೀಚೆಗೆ ರುವಿ‌ ಆತ್ರಾಡಿ‌ ಹೌಸ್‌ನಲ್ಲಿ ಕೇಂದ್ರ ಸಮಿತಿ ಉಪಾಧ್ಯಕ್ಷ ಡಾ.ಎಮ್ಮೆಸ್ಸೆಂ ಝೈನೀ ಕಾಮಿಲ್ ಅವರ ನೇತೃತ್ವದಲ್ಲಿ‌ ನಡೆಯಿತು.

ಒಮಾನ್ ರಾಷ್ಟ್ರೀಯ ಸಮಿತಿಯ ನೂತನ ಪದಾಧಿಕಾರಿಗಳಾಗಿ‌ ಕೆಳಗಿವನರನ್ನು ಆರಿಸಲಾಯಿತು.

ಹಾಜಿ ಮುಹಮ್ಮದ್ ಇಬ್ರಾಹಿಂ ಆತ್ರಾಡಿ (ಗೌರವಾಧ್ಯಕ್ಷರು) ಮುಹಮ್ಮದ್ ಸ್ವಾದಿಖ್ ಸುಳ್ಯ (ಅಧ್ಯಕ್ಷರು) ಮುಹಮ್ಮದ್ ಫಾಝಿಲ್ ಕಂಕನಾಡಿ (ಪ್ರಧಾನ ಕಾರ್ಯದರ್ಶಿ) ಉಮರ್ ಸಖಾಫಿ ಅಲ್ ಸಫಾ (ಕೋಶಾಧಿಕಾರಿ)

ಸಮೀರ್ ಉಸ್ತಾದ್ ಹೂಡೆ, ಹಂಝ ಹಾಜಿ ಕನ್ನಂಗಾರ್ (ಉಪಾಧ್ಯಕ್ಷರು) ಅಬ್ದುಲ್ಲತೀಫ್ ಮಂಜೇಶ್ವರ, ಅಬ್ಬಾಸ್ ಮರಕಡ (ಕಾರ್ಯದರ್ಶಿಗಳು) ಉಬೈದುಲ್ಲಾಹ್ ಸಖಾಫಿ ಮಿತ್ತೂರು (ಕೋ ಆರ್ಡಿನೇಟರ್)

ಅಝೀಝ್ ಬಾಳೆಹೊನ್ನೂರು,
ಹನೀಫ್ ಮಣ್ಣಾಪು, ಸಿದ್ದೀಖ್ ಕಬಕ,ಲತೀಫ್ ತೋಡಾರ್,
ರಿಯಾಝ್ ಮಂಜನಾಡಿ,
ಮುಝಮ್ಮಿಲ್ ಅಳಕೆಮಜಲು, ಸಿದ್ದೀಖ್ ಕೋಟ,
ಶಾಹುಲ್ ಹಮೀದ್ ಸುರಲ್ಪಾಡಿ,ಕರೀಂ ಕಂಡಿಗೆ,ಶಾಕಿರ್ ಸುಳ್ಯ,ರಜಬ್ ಕಾಪು (ಕಾರ್ಯಕಾರಿ ಸದಸ್ಯರು)

ಹಾಗೂ ಸಲಹೆಗಾರರಾಗಿ ಸಯ್ಯಿದ್ ಝೈನುಲ್ ಆಬಿದ್ ಅಲ್ ಐದರೂಸ್ ಎಮ್ಮೆಮಾಡು, ಇಖ್ಬಾಲ್ ಬರಕ, ಅಯ್ಯೂಬ್ ಕೋಡಿ,ಮೋನಬ್ಬ ಅಬ್ದುಲ್ ರಹ್ಮಾನ್,ಫಾರೂಖ್ ಸೊಹಾರ್, ಆರಿಫ್ ಕೋಡಿ,ಸಯ್ಯಿದ್ ಮೊಹಿದ್ದಿನ್ ಸಾಹೆಬ್ ಸಾಸ್ತಾನ,ಅಬ್ಬಾಸ್ ಪಡುಬಿದ್ರೆ, ಉಸ್ತಾದ್ ರಫೀಖ್ ಹೂಡೆ ಇವರನ್ನು ಆರಿಸಲಾಯಿತು.

ಸಭೆಯಲ್ಲಿ ನಿಕಟಪೂರ್ವ ಅಧ್ಯಕ್ಷ ಹಾಜಿ ಇಬ್ರಾಹಿಂ ಆತ್ರಾಡಿ ಅಧ್ಯಕ್ಷತೆ ವಹಿಸಿದರು. ಕೆಸಿಎಫ್ ಒಮಾನ್ ರಾಷ್ಟ್ರೀಯ ಸಮಿತಿಯ ಅಧ್ಯಕ್ಷ ಅಯ್ಯೂಬ್ ಕೋಡಿ ಉಧ್ಘಾಟಿಸಿದರು. ಮರ್ಕಝುಲ್ ಹುದಾ ಒಮಾನ್ ರಾಷ್ಟ್ರೀಯ ಸಮಿತಿಯ ಸಂಯೋಜಕ ಉಬೈದುಲ್ಲಾಹ್ ಸಖಾಫಿ ಮಿತ್ತೂರು ಪ್ರಾಸ್ತಾವಿಕವಾಗಿ‌ ಮಾತನಾಡಿದರು.

ಡಿಕೆಎಸ್ಸಿ ಒಮಾನ್ ರಾಷ್ಟ್ರೀಯ ಸಮಿತಿಯ ಅಧ್ಯಕ್ಷ ಮೋನಬ್ಬ ಅಬ್ದುಲ್ ರಹ್ಮಾನ್, ಮಸ್‌ನವೀ ಗ್ಲೋಬಲ್ ಅಕಾಡೆಮಿ ಉಪಾಧ್ಯಕ್ಷ ಉಮರ್ ಸಖಾಫಿ ಎಡಪ್ಪಾಲ್,ಶುಭ ಹಾರೈಸಿದರು.

ಸಾದಿಖ್ ಸುಳ್ಯ ಸ್ವಾಗತಿಸಿ ಫಾಝಿಲ್ ಕಂಕನಾಡಿ ಧನ್ಯವಾದ ಹೇಳಿದರು.

error: Content is protected !! Not allowed copy content from janadhvani.com