janadhvani

Kannada Online News Paper

ಸಮಾಜಮುಖಿ ಕಾರ್ಯಗಳಲ್ಲಿ ಕರ್ನಾಟಕ ಮುಸ್ಲಿಮ್ ಜಮಾಅತ್ ತೊಡಗಿಸಿಕೊಳ್ಳಬೇಕು – ಎಸ್. ಪಿ. ಹಂಝ ಸಖಾಫಿ

ಪ್ರಸಕ್ತ ಸನ್ನಿವೇಶದಲ್ಲಿ ನಾಯಕತ್ವದ ಕೊರತೆ ಅನುಭವಿಸುತಿದ್ದು, ಅದನ್ನು ನೀಗಿಸಲು ನಾಯಕರಾದ ನಾವೆಲ್ಲರೂ ಕೈಜೋಡಿಸಬೇಕು ಎಂದು ಸಲಹೆ ನೀಡಿದರು.

ಪುತ್ತೂರು : ಸಮಾಜದಲ್ಲಿರುವ ಸಮಸ್ಯೆಗಳಿಗೆ ಸ್ಪಂದಿಸಿ, ವಿಧ್ಯಾಭ್ಯಾಸಕ್ಕೆ ಒತ್ತುಕೊಟ್ಟು ಉಲಾಮಗಳ ನೇತೃತ್ವದಲ್ಲಿ ನಾಡಿನ ಧನಿಕರನ್ನು ಒಗ್ಗೂಡಿಸಿ ಸಮಾಜಮುಖಿ ಕಾರ್ಯಕ್ರಮದಲ್ಲಿ ತೊಡಗಿಸಿದರೆ ನಾಡು ಅಭಿವೃದ್ಧಿ ಹೊಂದಬಹುದು. ಆ ನಿಟ್ಟಿನಲ್ಲಿ ಕರ್ನಾಟಕ ಮುಸ್ಲಿಮ್ ಜಮಾಅತ್ ಕಾರ್ಯರೂಪಕ್ಕೆ ಇಳಿಯಬೇಕೆಂದು ಕರ್ನಾಟಕ ಜಂಇಯ್ಯತುಲ್ ಉಲಮಾ ಕಾರ್ಯದರ್ಶಿ ಉಸ್ತಾದ್ ಎಸ್. ಪಿ. ಹಂಝ ಸಖಾಫಿ ಹೇಳಿದರು.

ಅವರು ದಿನಾಂಕ 05.12.2023 ಮಂಗಳವಾರದಂದು ಲಯನ್ಸ್ ಸೇವಾ ಮಂದಿರ ಪುತ್ತೂರಿನಲ್ಲಿ ಕರ್ನಾಟಕ ಮುಸ್ಲಿಂ ಜಮಾಅತ್ ದಕ್ಷಿಣ ಕನ್ನಡ ಈಸ್ಟ್ ಜಿಲ್ಲಾ ಸಮಿತಿ ಆಯೋಜಿಸಿದ ಮ್ಯಾಗ್ನೆಟ್ ಕ್ಯಾಂಪ್ ನಾಯಕರ ಸಂಗಮದಲ್ಲಿ ಮುಖ್ಯ ತರಗತಿ ನೀಡಿ ಮಾತನಾಡಿದರು. ಪ್ರಸಕ್ತ ಸನ್ನಿವೇಶದಲ್ಲಿ ನಾಯಕತ್ವದ ಕೊರತೆ ಅನುಭವಿಸುತಿದ್ದು, ಅದನ್ನು ನೀಗಿಸಲು ನಾಯಕರಾದ ನಾವೆಲ್ಲರೂ ಕೈಜೋಡಿಸಬೇಕು ಎಂದು ಸಲಹೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ಮುಸ್ಲಿಂ ಜಮಾಅತ್ ದಕ್ಷಿಣ ಕನ್ನಡ ಈಸ್ಟ್ ಜಿಲ್ಲಾಧ್ಯಕ್ಷರಾದ ಅಬ್ದುರ್ರಹ್ಮಾನ್ ಹಾಜಿ ಅರಿಯಡ್ಕರವರು ವಹಿಸಿದರು. ಸಂಘಟನಾ ಹಿರಿಯರಾದ ಸುನ್ನಿ ಫೈಝಿ ಉಸ್ತಾದರು ದುಆಃ ನೆರವೇರಿಸಿದರು. ಜಿಲ್ಲಾ ಕೋಶಾಧಿಕಾರಿ ಬಿ. ಪಿ. ಇಸ್ಮಾಯಿಲ್ ಹಾಜಿ ಬೈತಡ್ಕರವರು ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ. ಎಂ. ಎಂ. ಕಾಮಿಲ್ ಸಖಾಫಿ ಉಸ್ತಾದರು ಪ್ರಾಸ್ತಾವಿಕ ಮಾತನ್ನಾಡಿ ನಾಯಕರು ಮಾಡಬೇಕಾದ ಕರ್ತವ್ಯಗಳನ್ನು ವಿವರಿಸಿದರು.ಕಾರ್ಯಕ್ರಮದಲ್ಲಿ ಮುಶಾವರ ಸದಸ್ಯರಾದ ಅಬ್ದುಲ್ ಜಲೀಲ್ ಸಖಾಫಿ, ಸಯ್ಯಿದ್ ಶರಫುದ್ದೀನ್ ತಂಙಳ್ ವೇಣೂರುರವರು ಅತಿಥಿಗಳಾಗಿ ಭಾಗವಹಿಸಿದರು.

ಜಿಲ್ಲಾ ವ್ಯಾಪ್ತಿಯಲ್ಲಿರುವ ಆರು ಝೋನುಗಳ ಮಾಹಿತಿಯನ್ನು ಕ್ರಮವಾಗಿ ಸಯ್ಯಿದ್ ಎಸ್. ಎಂ. ತಂಙಳ್ ಉಜಿರೆ, ಕೆ. ಬಿ. ಕಾಸಿಂ ಹಾಜಿ ಮಿತ್ತೂರು, ಉಮರ್ ಮುಸ್ಲಿಯಾರ್ ಮರ್ಧಾಳ, ಇಬ್ರಾಹಿಂ ಸಖಾಫಿ ಕೊಡುಂಗಾಯಿ, ಅಬ್ದುಲ್ ಹಮೀದ್ ಸುಣ್ಣಮೂಲೆ ಹಾಗೂ ಅಬ್ಬಾಸ್ ಬಟ್ಲಡ್ಕರವರು ನೀಡಿದರು. ಬಳಿಕ ಝೋನ್ ಮತ್ತು ಸರ್ಕಲ್‌ಗಳಿಗೆ ನಡೆಸಬೇಕಾದ ಕಾರ್ಯಕ್ರಮದ ಸುತ್ತೋಲೆಗಳನ್ನು ವಿತರಿಸಲಾಯಿತು. ಕಾರ್ಯದರ್ಶಿ ಇಸ್ಮಾಯಿಲ್ ಮಾಸ್ಟರ್ ಮಂಗಳಪದವು ಕಾರ್ಯಕ್ರಮದ ಹಾಜರಾತಿಯನ್ನು ನೀಡಿದರು.

ಕಾರ್ಯಕ್ರಮದಲ್ಲಿ ಅಬೂಬಕ್ಕರ್ ಸ‌ಅದಿ ಮಜೂರು, ಪಿ. ಯು. ಅಬ್ದುರ್ರಹ್ಮಾನ್ ಮುಸ್ಲಿಯಾರ್ ನಾವೂರು, ಅಬ್ದುಲ್ಲ ಮುಸ್ಲಿಯಾರ್ ಬನ್ನೂರು, ಅಬ್ದುಲ್ ಖಾದಿರ್ ಸಖಾಫಿ ಕಡಂಬು, ಉಸ್ಮಾನ್ ಮುಸ್ಲಿಯಾರ್ ಕುಂಬ್ರ, ಅಬ್ಬಾಸ್ ಮದನಿ ಬಂಡಾಡಿ, ಅಬ್ದುಲ್ ಕರೀಂ ಹಾಜಿ ಚೆನ್ನಾರ್, ಜಿ. ಮುಹಮ್ಮದ್ ಕುಂಞಿ, ಇಕ್ಬಾಲ್ ಬಪ್ಪಳಿಗೆ, ಹನೀಫ್ ಹಾಜಿ ಇಂದ್ರಾಜೆ, ಉಸ್ಮಾನ್ ಹಾಜಿ ಸೆರ್ಕಳ ಹಾಗೂ ಉಮರ್ ತಾಜ್ ನೆಲ್ಯಾಡಿ ಉಪಸ್ಥಿತರಿದ್ದರು. ಝೋನ್ ಹಾಗೂ ಸರ್ಕಲ್ ನಾಯಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದರು.

ಜಿಲ್ಲಾ ಉಪಾಧ್ಯಕ್ಷರಾದ ಅಬ್ದುಲ್ ಹಮೀದ್ ಸಖಾಫಿ ಕೊಡುಂಗಾಯಿ ಸ್ವಾಗತಿಸಿದರು. ಕಾರ್ಯದರ್ಶಿ ಕಾಸಿಂ ಪದ್ಮುಂಜ ಧನ್ಯವಾದಗೈದರು. ಕಾರ್ಯಕ್ರಮದ ಛಾಯಾಚಿತ್ರ ನಿರ್ವಹಣೆಯನ್ನು ಜಿಲ್ಲಾ ಮಾಧ್ಯಮ ಕಾರ್ಯದರ್ಶಿ ಯೂಸುಫ್ ಸಯೀದ್ ಪುತ್ತೂರುರವರು ನಿರ್ವಹಿಸಿದರು. ಕಾರ್ಯದರ್ಶಿ ಕೆ. ಇ. ಅಬೂಬಕ್ಕರ್ ಕಾರ್ಯಕ್ರಮ ನಿರೂಪಿಸಿದರು.

ವರದಿ : ಯೂಸುಫ್ ಸಯೀದ್ ಪುತ್ತೂರು (ಮಾಧ್ಯಮ ಕಾರ್ಯದರ್ಶಿ, ಕರ್ನಾಟಕ ಮುಸ್ಲಿಂ ಜಮಾಅತ್ ದ. ಕ. ಈಸ್ಟ್ ಜಿಲ್ಲೆ)

error: Content is protected !! Not allowed copy content from janadhvani.com