janadhvani

Kannada Online News Paper

ಕುಟುಂಬಗಳನ್ನು ನಿವಾಸ ಮತ್ತು ಸಂದರ್ಶಕ ವೀಸಾಗಳಲ್ಲಿ ಕರೆತರಲು ಹೊಸ ಮಾನದಂಡ

ಸ್ವಂತ ಪ್ರಾಯೋಜಕತ್ವದ ಅಡಿಯಲ್ಲಿ ಫ್ಯಾಮಿಲಿ ರೆಸಿಡೆನ್ಸಿ ವೀಸಾಗೆ ಅರ್ಜಿ ಸಲ್ಲಿಸಲು ಗಂಡು ಮಕ್ಕಳ ವಯಸ್ಸು 25 ವರ್ಷಕ್ಕಿಂತ ಹೆಚ್ಚಿರಬಾರದು. ಹೆಣ್ಣು ಮಕ್ಕಳು ಅವಿವಾಹಿತರಾಗಿರಬೇಕು.

ದೋಹಾ: ಕತಾರ್‌ನ ಆಂತರಿಕ ಸಚಿವಾಲಯವು ಕುಟುಂಬಗಳನ್ನು ನಿವಾಸ ಮತ್ತು ಸಂದರ್ಶಕ ವೀಸಾಗಳ ಮೇಲೆ ಕರೆತರುವ ಮಾನದಂಡವನ್ನು ಸ್ಪಷ್ಟಪಡಿಸಿದೆ.

ಸ್ವಂತ ಪ್ರಾಯೋಜಕತ್ವದ ಅಡಿಯಲ್ಲಿ ಫ್ಯಾಮಿಲಿ ರೆಸಿಡೆನ್ಸಿ ವೀಸಾಗೆ ಅರ್ಜಿ ಸಲ್ಲಿಸಲು ಗಂಡು ಮಕ್ಕಳ ವಯಸ್ಸು 25 ವರ್ಷಕ್ಕಿಂತ ಹೆಚ್ಚಿರಬಾರದು. ಹೆಣ್ಣು ಮಕ್ಕಳು ಅವಿವಾಹಿತರಾಗಿರಬೇಕು. ಆರರಿಂದ 18 ವರ್ಷದೊಳಗಿನ ಮಕ್ಕಳು ಕತಾರ್ ಅಥವಾ ವಿದೇಶದಲ್ಲಿ ಶಿಕ್ಷಣ ಪಡೆಯುತ್ತಿರುವ ಬಗ್ಗೆ ಪ್ರಮಾಣೀಕರಿಸಬೇಕು.

ಕುಟುಂಬಕ್ಕೆ ಆರೋಗ್ಯ ವಿಮೆಯನ್ನೂ ಖಾತರಿಪಡಿಸಬೇಕು. ಸರ್ಕಾರಿ ಮತ್ತು ಅರೆ ಸರ್ಕಾರಿ ನೌಕರರು ಕನಿಷ್ಠ 10,000 ರಿಯಾಲ್‌ಗಳ ವೇತನವನ್ನು ಹೊಂದಿರಬೇಕು. ತಾಂತ್ರಿಕ ಮತ್ತು ವಿಶೇಷ ವರ್ಗದ ವೃತ್ತಿಪರರು ಖಾಸಗಿ ವಲಯದಲ್ಲಿ ಕೆಲಸ ಮಾಡುತ್ತಿದ್ದರೆ ಕುಟುಂಬ ವೀಸಾಗೆ ಅರ್ಜಿ ಸಲ್ಲಿಸಬಹುದು.

ಕನಿಷ್ಠ 10,000 ರಿಯಾಲ್‌ಗಳ ಸಂಬಳ ಇರಬೇಕು. ಇಲ್ಲದಿದ್ದರೆ, ಕಂಪನಿಯ ಅಡಿಯಲ್ಲಿ 6000 ರಿಯಾಲ್‌ಗಳ ಸಂಬಳ ಮತ್ತು ಕುಟುಂಬ ವಸತಿ ಹೊಂದಿರುವವರೂ ಅರ್ಜಿ ಸಲ್ಲಿಸಬಹುದು. ಇದನ್ನು ಉದ್ಯೋಗ ಒಪ್ಪಂದದಲ್ಲಿ ನಿರ್ದಿಷ್ಟಪಡಿಸಬೇಕು.

ಕುಟುಂಬ ಸಂದರ್ಶಕ ವೀಸಾಕ್ಕಾಗಿ, ಕನಿಷ್ಠ 5000 ರಿಯಾಲ್‌ಗಳ ಮಾಸಿಕ ವೇತನದ ಅಗತ್ಯವಿದೆ. ಕುಟುಂಬದ ವಸತಿ ಸೌಕರ್ಯವನ್ನೂ ಖಚಿತಪಡಿಸಿಕೊಳ್ಳಬೇಕು. ಸಂದರ್ಶಕರು ಪ್ರಾಯೋಜಕ ವ್ಯಕ್ತಿಯೊಂದಿಗೆ ನಿಕಟ ಸಂಬಂಧ ಹೊಂದಿರಬೇಕು. ಸಂದರ್ಶಕರ ವೀಸಾ ಹೊಂದಿರುವವರಿಗೆ ಯಾವುದೇ ಪ್ರಾಯ ವ್ಯತ್ಯಾಸವಿಲ್ಲ.ಆದರೆ, ಕತಾರ್‌ನಲ್ಲಿ ಉಳಿಯುವವರೆಗೆ ಪ್ರತಿಯೊಬ್ಬರಿಗೂ ಆರೋಗ್ಯ ವಿಮೆ ಕಡ್ಡಾಯವಾಗಿದೆ.

error: Content is protected !! Not allowed copy content from janadhvani.com