ದುಬೈ: ಯುಎಇಯ 52ನೇ ರಾಷ್ಟ್ರೀಯ ದಿನದ ಪ್ರಯುಕ್ತ ಯುಎಇ ಸೆಂಟ್ರಲ್ ಬ್ಯಾಂಕ್ 500 ದಿರ್ಹಮ್‌ಗಳ ಹೊಸ ಕರೆನ್ಸಿಯನ್ನು ಬಿಡುಗಡೆ ಮಾಡಿದೆ.
ರಾಷ್ಟ್ರಪಿತ ಶೈಖ್ ಝಾಯಿದ್ ಬಿನ್ ಸುಲ್ತಾನ್ ಆಲ್ ನಹ್ಯಾನ್ ಅವರ ಭಾವಚಿತ್ರದ ಜೊತೆಗೆ, ನೀಲಿ ಬಣ್ಣದ ಕರೆನ್ಸಿಯು ಪರಿಸರ ಸ್ನೇಹಿ ಯೋಜನೆಗಳು, ಫ್ಯೂಚರ್ ಮ್ಯೂಸಿಯಂ, ಬುರ್ಜ್ ಖಲೀಫಾ ಮತ್ತು ಎಮಿರೇಟ್ಸ್ ವೇವ್ಸ್ ಚಿತ್ರಗಳನ್ನು ಸಹ ಒಳಗೊಂಡಿದೆ.
ನೋಟುಗಳನ್ನು ನವೆಂಬರ್ 30 ರ ಗುರುವಾರದಿಂದ ಸಾರ್ವಜನಿಕರಿಗೆ ಲಭ್ಯವಾಗುವಂತೆ ಮಾಡಲಾಗಿದೆ. ಕಾಗದದ ನೋಟಿನ ಬದಲಾಗಿ ಹೊಸ ದೀರ್ಘಕಾಲ ಬಾಳಿಕೆ ಬರುವ ಪಾಲಿಮರ್ ನೋಟಿನ ಮುಂಭಾಗವು ಎಕ್ಸ್‌ಪೋ ಸಿಟಿ ದುಬೈನಲ್ಲಿರುವ ಟೆರ್ರಾ ಸಸ್ಟೈನಬಿಲಿಟಿ ಪೆವಿಲಿಯನ್‌ನ ಚಿತ್ರವನ್ನು ಸಹ ಒಳಗೊಂಡಿದೆ. ಬಹು-ಬಣ್ಣದ ಭದ್ರತಾ ಚಿಪ್ ಅನ್ನು ಸಹ ಒಳಪಡಿಸಲಾಗಿದೆ.