janadhvani

Kannada Online News Paper

ಯುಎಇಯ 52ನೇ ರಾಷ್ಟ್ರೀಯ ದಿನಾಚರಣೆ:1,249 ಕೈದಿಗಳ ಬಿಡುಗಡೆ-ದುಬೈ ಶೈಖ್ ಆದೇಶ

ಇದಕ್ಕೂ ಮುನ್ನ ಯುಎಇ ಅಧ್ಯಕ್ಷ ಶೈಖ್ ಮುಹಮ್ಮದ್ ಬಿನ್ ಝಾಯಿದ್ ಆಲ್ ನಹ್ಯಾನ್ ಅವರು 1,018 ಕೈದಿಗಳನ್ನು ಬಿಡುಗಡೆ ಮಾಡಿದ್ದರು.

ದುಬೈ: ಯುಎಇಯ 52ನೇ ರಾಷ್ಟ್ರೀಯ ದಿನಾಚರಣೆಯ ಅಂಗವಾಗಿ 1,249 ಕೈದಿಗಳನ್ನು ಬಿಡುಗಡೆ ಮಾಡುವಂತೆ ಯುಎಇ ಉಪಾಧ್ಯಕ್ಷ ಹಾಗೂ ಪ್ರಧಾನಿ ಹಾಗೂ ದುಬೈ ಆಡಳಿತಗಾರ ಶೈಖ್ ಮುಹಮ್ಮದ್ ಬಿನ್ ರಾಶಿದ್ ಆಲ್ ಮಕ್ತೂಮ್ ಆದೇಶಿಸಿದ್ದಾರೆ. ಜೈಲಿನಲ್ಲಿ ಉತ್ತಮ ನಡವಳಿಕೆ ತೋರಿದವರು ಮತ್ತು ಎಲ್ಲ ಷರತ್ತುಗಳನ್ನು ಪಾಲಿಸಿದವರಾದ ವಿವಿಧ ರಾಷ್ಟ್ರಗಳ ಕೈದಿಗಳಿಗೆ ಕ್ಷಮಾದಾನ ನೀಡಿ ಬಿಡುಗಡೆ ಮಾಡಲಾಗುವುದು.

ಇದಕ್ಕೂ ಮುನ್ನ ಯುಎಇ ಅಧ್ಯಕ್ಷ ಶೈಖ್ ಮುಹಮ್ಮದ್ ಬಿನ್ ಝಾಯಿದ್ ಆಲ್ ನಹ್ಯಾನ್ ಅವರು 1,018 ಕೈದಿಗಳನ್ನು ಬಿಡುಗಡೆ ಮಾಡಿದ್ದರು. ಶಾರ್ಜಾ ಆಡಳಿತಗಾರ ಶೈಖ್ ಡಾ. ಸುಲ್ತಾನ್ ಬಿನ್ ಮುಹಮ್ಮದ್ ಅಲ್ ಖಾಸಿಮಿ 475 ಕೈದಿಗಳಿಗೆ ಕ್ಷಮಾದಾನ ನೀಡಿದ್ದಾರೆ. ಫುಜೈರಾ ಆಡಳಿತಗಾರ ಶೈಖ್ ಹಮದ್ ಬಿನ್ ಮುಹಮ್ಮದ್ ಅಲ್ ಶರ್ಕಿ 113 ಕೈದಿಗಳಿಗೆ ಮತ್ತು ಅಜ್ಮಾನ್ ಆಡಳಿತಗಾರ ಶೈಖ್ ಹುಮೈದ್ ಬಿನ್ ರಶೀದ್ ಅಲ್ ನ್ಯೂಮಿ 143 ಕೈದಿಗಳಿಗೆ ಕ್ಷಮಾದಾನ ನೀಡಿದ್ದಾರೆ.

error: Content is protected !! Not allowed copy content from janadhvani.com