ಪುತ್ತೂರು : 2024 ಜನವರಿ 24 ರಂದು ಮಂಗಳೂರಿನಲ್ಲಿ ನಡೆಯಲಿರುವ ಕರ್ನಾಟಕ ರಾಜ್ಯ ಸುನ್ನಿ ಯುವಜನ ಸಂಘ ಎಸ್‌ವೈಎಸ್ ಇದರ 30ನೇ ವಾರ್ಷಿಕ ಮಹಾಸಮ್ಮೇಳನದ ಪ್ರಚಾರಾರ್ಥವಾಗಿ ನಾಳೆ (ನವೆಂಬರ್ 30l) ಉಪ್ಪಿನಂಗಡಿ ಎಚ್ ಎಂ ಹಾಲ್ ಮುಂಭಾಗ ಎಸ್‌ವೈಎಸ್ ದಕ್ಷಿಣ ಕನ್ನಡ ಈಸ್ಟ್ ಜಿಲ್ಲಾ ವತಿಯಿಂದ ಯುವಜನೋತ್ಸವ 2023 ಸುನ್ನಿ ಮಹಾಸಂಗಮ ನಡೆಯಲಿದೆ.
ಸಂಜೆ 4.30ಕ್ಕೆ ಆರಂಭವಾಗುವ ಕಾರ್ಯಕ್ರಮವನ್ನು ಅಸ್ಸೆಯ್ಯಿದ್ ಇಸ್ಮಾಯಿಲ್ ತಂಙಳ್ ಉಜಿರೆರವರು ಉದ್ಘಾಟಿಸಲಿದ್ದು, ಮೌಲಾನ ಅಬ್ದುಲ್ ವಹಾಬ್ ಸಖಾಫಿ ಮಂಬಾಡ್ ಮುಖ್ಯ ಭಾಷಣ ಮಾಡಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್‌ವೈಎಸ್ ಈಸ್ಟ್ ಜಿಲ್ಲಾಧ್ಯಕ್ಷರಾದ ಅಬ್ದುಲ್ ಅಝೀಝ್ ಮಿಸ್ಬಾಹಿ ಉಸ್ತಾದರು ವಹಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ಮುಶಾವರ ಸದಸ್ಯರಾದ ವಳವೂರು ಉಸ್ತಾದ್, ಕಾಸಿಂ ಮದನಿ ಕರಾಯ, ಹೈದರ್ ಮದನಿ ಕರಾಯ, ಜಿ. ಎಂ. ಎಂ. ಕಾಮಿಲ ಸಖಾಫಿ, ಪುತ್ತೂರು ಶಾಸಕರಾದ ಅಶೋಕ್ ರೈ ಬೆಳ್ಳಿಪ್ಪಾಡಿ, ಎಂಕೆಎಂ ಶಾಫಿ ಸಅದಿ ಬೆಂಗಳೂರು, ಸಯ್ಯಿದ್ ಸಾದಾತ್ ತಂಙಳ್ ಕರ್ವೇಲ್, ಅಬ್ದುಲ್ ಹಫೀಳ್ ಸಅದಿ, ಎಂಬಿಎಂ ಸ್ವಾದಿಖ್ ಮಾಸ್ಟರ್ ಮಲೆಬೆಟ್ಟು ಸಹಿತ ಅನೇಕ ಉಲಮಾಗಳು, ಸಾದಾತುಗಳು, ಸಾಮಾಜಿಕ ರಾಜಕೀಯ ನೇತಾರರು ಹಾಗೂ ಸಂಘಟನಾ ನಾಯಕರು ಭಾಗವಹಿಸಲಿದ್ದಾರೆ.
ಕರ್ನಾಟಕ ಮುಸ್ಲಿಂ ಜಮಾಅತ್ ದಕ್ಷಿಣ ಕನ್ನಡ ಈಸ್ಟ್ ಜಿಲ್ಲಾ ವ್ಯಾಪ್ತಿಯ ಯುನಿಟ್, ಸರ್ಕಲ್, ಸೆಕ್ಟರ್, ಝೋನ್, ಡಿವಿಷನ್ ಗಳಲ್ಲಿ ಬರುವ ಎಲ್ಲಾ ಸಂಘ ಕುಟುಂಬದ ನಾಯಕರು, ಕಾರ್ಯಕರ್ತರು ಹಾಗೂ ಹಿತೈಷಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ಕರ್ನಾಟಕ ಮುಸ್ಲಿಂ ಜಮಾಅತ್ ದಕ್ಷಿಣ ಕನ್ನಡ ಈಸ್ಟ್ ಜಿಲ್ಲಾಧ್ಯಕ್ಷರಾದ ಅಬ್ದುರ್ರಹ್ಮಾನ್ ಹಾಜಿ ಅರಿಯಡ್ಕರವರು ಕರೆ ನೀಡಿದ್ದಾರೆ.
ವರದಿ : ಯೂಸುಫ್ ಸಯೀದ್ ಪುತ್ತೂರು (ಮಾಧ್ಯಮ ಕಾರ್ಯದರ್ಶಿ ಕರ್ನಾಟಕ ಮುಸ್ಲಿಂ ಜಮಾಅತ್ ದ.ಕ. ಈಸ್ಟ್ ಜಿಲ್ಲೆ)