janadhvani

Kannada Online News Paper

ಸೂರಿಕುಮೇರು ಮರ್‌ಹೂಂ ಇರ್ಶಾದ್ ಉಮ್ಮರ್ ವೇದಿಕೆಯಲ್ಲಿ ಬೃಹತ್ ಬುರ್ದಾ ಮಜ್ಲಿಸ್ ಕಾರ್ಯಕ್ರಮ

ಮಾಣಿ : ಕರ್ನಾಟಕ ಮುಸ್ಲಿಂ ಜಮಾ‌ಅತ್,ಸುನ್ನೀ ಯುವಜನ ಸಂಘ,ಸುನ್ನೀ ಸ್ಟೂಡೆಂಟ್ ಫೆಡರೇಶನ್ ಸೂರಿಕುಮೇರು ಯುನಿಟ್ ಇದರ ವತಿಯಿಂದ ಇತ್ತೀಚಿಗೆ ಮರಣ ಹೊಂದಿದ ಎಸ್ಸೆಸ್ಸೆಫ್ ಸೂರಿಕುಮೇರು ಯುನಿಟ್ ಕಾರ್ಯಕರ್ತ ಮರ್ಹೂ‌ಂ ಇರ್ಶಾದ್ ಉಮ್ಮರ್ ವೇದಿಕೆಯಲ್ಲಿ ಬೃಹತ್ ಬುರ್ದಾ ಮಜ್ಲಿಸ್ ಸುನ್ನೀ ಸಮ್ಮೇಳನ ಕಾರ್ಯಕ್ರಮವು ನವೆಂಬರ್ ‌28 ಮಂಗಳವಾರ ಮಗ್ರಿಬ್ ನಮಾಝ್ ಬಳಿಕ ಸೂರಿಕುಮೇರು ಜಂಕ್ಷನ್ ಬಳಿ ನಡೆಯಲಿದೆ.

ಖಾಝಿ ಝೈನುಲ್ ಉಲಮಾ ಮಾಣಿ ಉಸ್ತಾದ್ ಕಾರ್ಯಕ್ರಮ ಉದ್ಘಾಟನೆ ಮಾಡುವರು,ಅಸ್ಸಯ್ಯಿದ್ ಮುಹ್ಸಿನ್ ತಂಙಳ್ ದುಆ ನಡೆಸಿಕೊಡುವರು,ಸಯ್ಯಿದ್ ತ್ವಾಹಾ ತಂಙಳ್ ಪೂಕೊಟೂರು ನೇತೃತ್ವದಲ್ಲಿ,ಶಾಹಿನ್ ಬಾಬು,ಇನ್ಶಾದ್ ಅಬೂಬಕರ್,ನಾಸಿಫ್ ಕ್ಯಾಲಿಕಟ್,ಬುರ್ದಾ ಆಲಾಪನೆ ಮಾಡುವರು,ಕಾರ್ಯಕ್ರಮದಲ್ಲಿ ಹಲವಾರು ಉಲಮಾ, ಉಮರಾ,ಸಾಮಾಜಿಕ, ರಾಜಕೀಯ ನಾಯಕರುಗಳು ಭಾಗವಹಿಸಲಿರುವರು ಎಂದು ಸ್ವಾಗತ ಸಮಿತಿಯ ಚೆಯರ್‌ಮೆನ್ ಹನೀಫ್ ಸಂಕ,ಕನ್ವೀನರ್ ಹಸೈನ್ ಸಂಕ,ಅಝೀಂ ಸೂರಿಕುಮೇರು ತಿಳಿಸಿದರು.