janadhvani

Kannada Online News Paper

ನಾಳೆ ಉಪ್ಪಿನಂಗಡಿಯಲ್ಲಿ SYS ಯುವಜನೋತ್ಸವ- SSF ದ.ಕ ಈಸ್ಟ್ ಜಿಲ್ಲಾ ಯಶಸ್ವಿಗೆ ಕರೆ

ಉಪ್ಪಿನಂಗಡಿ : 2024 ಜನವರಿ 24 ರಂದು ಮಂಗಳೂರಿನಲ್ಲಿ ನಡೆಯುವ ಎಸ್ ವೈ ಎಸ್ 30ನೇ ವಾರ್ಷಿಕ ಮಹಾ ಸಮ್ಮೇಳನದ ಪ್ರಚಾರಾರ್ಥ ನವಂಬರ್ 30ರಂದು ಮದ್ಯಾಹ್ನ 3 ಗಂಟೆಗೆ ಸರಿಯಾಗಿ ಉಪ್ಪಿನಂಗಡಿ ಎ.ಚ್.ಎಂ ಅಡಿಟೋರಿಯಂ ಮುಂಭಾಗದಲ್ಲಿ “ಯುವಜನೋತ್ಸವ” ನಡೆಯಲಿದೆ.

ಪ್ರಸ್ತುತ ಕಾರ್ಯಕ್ರಮದಲ್ಲಿ ಅಬ್ದುಲ್ ವಹಾಬ್ ಸಖಾಫಿ ಮಂಬಾಡ್ ಹಾಗೂ ಡಾ.ಅಬ್ದುಲ್ ರಶೀದ್ ಝೈನಿ ಕಾಮಿಲ್ ಮುಖ್ಯ ಭಾಷಣ ನಡೆಸಲಿದ್ದಾರೆ.

ದ.ಕ ಈಸ್ಟ್ ಜಿಲ್ಲಾ ವ್ಯಾಪ್ತಿಯ ಎಲ್ಲಾ ಶಾಖೆ, ಸೆಕ್ಟರ್, ಡಿವಿಷನ್ ನಿಂದ ಕಾರ್ಯಕರ್ತರು ಗರಿಷ್ಠ ಮಟ್ಟದಲ್ಲಿ ಭಾಗವಹಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಎಸ್ಸೆಸ್ಸೆಫ್ ದ.ಕ ಈಸ್ಟ್ ಜಿಲ್ಲಾ ಸಮಿತಿ ಕರೆ ನೀಡಿದೆ.