janadhvani

Kannada Online News Paper

ನಾಳೆ ಅರಸೀಕೆರೆ ನಗರದಲ್ಲಿ ಉಚಿತ ನೇತ್ರ ತಪಾಸಣೆ ಶಿಬಿರ

ಅರಸೀಕೆರೆ: ನಗರದ ಸುಲ್ತಾನುಲ್ ಹಿಂದ್ ಎಜುಕೇಶನಲ್ ಮತ್ತು ಚಾರಿಟೇಬಲ್ ಟ್ರಸ್ಟ್ ವತಿಯಿಂದ ತಾಲೂಕು ಆರೋಗ್ಯ ಇಲಾಖೆ, ಜೆ ಸಿ ಆಸ್ಪತ್ರೆ, ರೋಟರಿ ವಸವಾಂಬ ಸುಂದರರಾಜ್ ಶೆಟ್ಟಿ ನೇತ್ರಾಲಯ ಅರಸೀಕೆರೆ ಇವರುಗಳ ಸಹಯೋಗದೊಂದಿಗೆ ದಿನಾಂಕ 29/11/2023 ನೇ ಬುದುವಾರ ಬೆಳಿಗ್ಗೆ 10 ರಿಂದ ಮಧ್ಯಾಹ್ನ 2 ಗಂಟೆವರೆಗೆ ಹುಳಿಯಾರ್ ರಸ್ತೆಯಲ್ಲಿರುವ ಮದೀನಾ ಶಾದಿ ಮಹಲ್ ನಲ್ಲಿ ಉಚಿತ ನೇತ್ರ ತಪಾಸಣೆ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ ಎಂದು ಟ್ರಸ್ಟ್ ನಾ ಕಾರ್ಯದರ್ಶಿಗಳಾದ ಪರ್ವಾಜ್ ನೂರಿರವರು ತಿಳಿಸಿದರು.

ಈ ಶಿಬಿರದಲ್ಲಿ ಉಚಿತ ನೇತ್ರ ತಪಾಸಣೆ, ಬಿಪಿ, ಸಕ್ಕರೆ ಕಾಯಿಲೆ, ಹಾಗೂ ರಕ್ತ ಪರೀಕ್ಷೆ ಮಾಡಲಾಗುವುದು ಮತ್ತು ಅವಶ್ಯಕತೆ ಇರುವಂತವರಿಗೆ ಉಚಿತವಾಗಿ ಶಸ್ತ್ರಚಿಕಿತ್ಸೆ ಮಾಡಿಸಲಾಗುವುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಟ್ರಸ್ಟ್ ಅಧ್ಯಕ್ಷರಾದ ಕೌಸರ್ ಪಾಷಾ ಉಪಾಧ್ಯಕ್ಷರಾದ ಸರ್ವರ್ ಅಹಮದ್ ಕೋಶಾಧಿಕಾರಿ ಫಯಾಜ್ ಪಾಶ ಉಪಸ್ಥಿತರಿದ್ದರು.

error: Content is protected !! Not allowed copy content from janadhvani.com