ಅರಸೀಕೆರೆ: ಇಂದು ನಗರದ ಸುಲ್ತಾನುಲ್ ಹಿಂದ್ ಎಜುಕೇಶನಲ್ ಮತ್ತು ಚಾರಿಟೇಬಲ್ ಟ್ರಸ್ಟ್ ವತಿಯಿಂದ ತಾಲೂಕು ಆರೋಗ್ಯ ಇಲಾಖೆ, ಜೆ ಸಿ ಆಸ್ಪತ್ರೆ, ರೋಟರಿ ವಸವಾಂಬ ಸುಂದರರಾಜ್ ಶೆಟ್ಟಿ ನೇತ್ರಾಲಯ ಅರಸೀಕೆರೆ ಇವರುಗಳ ಸಹಯೋಗದೊಂದಿಗೆ ಹೂಳಿಯಾರು ರಸ್ತೆಯಲ್ಲಿರುವ ಮದೀನಾ ಶಾದಿ ಮಹಲ್ ನಲ್ಲಿ ಉಚಿತ ನೇತ್ರ ತಪಾಸಣಾ ಶಿಬಿರ ಆಯೋಜಿಸಲಾಗಿತ್ತು.
ಈ ಶಿಬಿರವನ್ನು ತಾಲೂಕು ಆರೋಗ್ಯ ಅಧಿಕಾರಿಗಳಾದ ಡಾ. ತಿಮ್ಮರಾಜು ಡಿ ವೈ ಎಸ್ ಪಿ ರವರಾದ ಲೋಕೇಶ್ ಹಾಗೂ ಉದ್ಯಮಿಯರಾದ ಕೆಪಿಎಸ್ ವಿಶ್ವನಾಥ್ ರವರು ಹಾಗೂ ಸುಲ್ತಾನುಲ್ ಹಿಂದ್ ಟ್ರಸ್ಟ್ ನ ಅಧ್ಯಕ್ಷರಾದ ಕೌಸರ್ ಪಾಷಾರವರು ಗಿಡಕ್ಕೆ ನೀರು ಹಾಕುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿದರು.
ನಂತರ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಟಿ ಹೆಚ್ ಓ ರವರು ಸಂಘ ಸಂಸ್ಥೆಗಳು ಮುಂದೆ ಬಂದು ಆರೋಗ್ಯ ಶಿಬಿರಗಳನ್ನು ಆಯೋಜಿಸಿ ಜನರಿಗೆ ಅನುಕೂಲವಾಗುವಂತಹ ಸಮಾಜ ಸೇವೆ ಮಾಡುತ್ತಿರುವುದು ಹಾಗೂ ಜನರಿಗೆ ಆರೋಗ್ಯದ ಬಗ್ಗೆ ಅರಿವು ಮೂಡಿಸುವ ಕೆಲಸ ಮಾಡುತ್ತಿರುವುದು ತುಂಬಾ ಸಂತೋಷದ ವಿಷಯವಾಗಿದೆ. ಇದೇ ರೀತಿ ತಮ್ಮ ಸಮಾಜ ಸೇವೆ ಮುಂದುವರೆಸಿಕೊಂಡು ಹೋಗಿ ಎಂದು ಹಾರೈಸಿದರು.
ಡಿವೈಎಸ್ಪಿ ರವರು ಮಾತನಾಡಿ, ಈ ರೀತಿಯ ಶಿಬಿರಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗವಹಿಸಿ ಈ ಶಿಬಿರಗಳ ಸದುಪಯೋಗ ಪಡೆದುಕೊಳ್ಳಬೇಕು ಹಾಗೂ ತಮ್ಮ ಆರೋಗ್ಯಗಳ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕು ಎಂದು ತಿಳಿಸಿದರು. ಉದ್ಯಮಿ ವಿಶ್ವನಾಥ್ ಹಾಗೂ ಅಬ್ದುಲ್ ಜಮೀಲ್ ರವರು ಮಾತನಾಡಿ ಸುಮಾರು ಐದು ವರ್ಷಗಳಿಂದ ಸುಲ್ತಾನುಲ್ ಹಿಂದ್ ಟ್ರಸ್ಟ್ ನಡೆಸುತ್ತಿರುವ ಸಾಮಾಜಿಕ ಕಾರ್ಯಕ್ರಮಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಈ ಶಿಬಿರದಲ್ಲಿ ಸುಮಾರು 500 ಜನರು ಭಾಗವಹಿಸಿ ಈ ಶಿಬಿರದ ಸದುಪಯೋಗ ಪಡೆದುಕೊಂಡರು.
ಈ ಸಂದರ್ಭದಲ್ಲಿ ಮುಸ್ಲಿಂ ಜಮಾತ್ ಕಮಿಟಿಯ ಕಾರ್ಯದರ್ಶಿಗಳಾದ ರಿಯಾಜ್ ಪಾಷಾ, ರೋಟರಿ ಸಂಸ್ಥೆಯ ಯೋಗೇಶ್, ಮದೀನಾ ಶಾದಿ ಮಹಲ್ ಕಮಿಟಿ ಅಧ್ಯಕ್ಷರಾದ ಬಾಬು, , ಎನ್ ಎ ಸೈಯದ್ ಸರ್ದಾರ್, ಅಪ್ರೋಜ್ ಪಾಷಾ, ಉತ್ತಮ್ ಚಂದ್, ಸೈಯದ್, ಬಿಕೆ ಮೆಹಬೂಬ್ ಪಾಷಾ, ಟ್ರಸ್ಟ್ ನಾ ಉಪಾಧ್ಯಕ್ಷರಾದ ಸರ್ವರ್ ಅಹಮದ್, ಫಯಾಜ್ ಪಾಷಾ, ಫರಾಜ್ ಪಾಷ, ಪರ್ವಾಜ್ ನೂರಿ ಹಾಗೂ ಸುಲ್ತಾನುಲ್ ಹಿಂದ್ ಟ್ರಸ್ಟ್ ನಾ ಎಲ್ಲಾ ಪದಾಧಿಕಾರಿಗಳು ಉಪಸ್ಥಿತರಿದ್ದರು.