ದಮ್ಮಾಮ್; ಕೆಸಿಎಫ್ ಅಲ್ ಹಸ್ಸಾ ಸೆಕ್ಟರ್ ವತಿಯಿಂದ ಮುಜಾಲಸ-23 ಯಶಸ್ವಿಯಾಗಿ ನಡೆಸಲಾಯಿತು.
ಅಲ್ ಹಸ್ಸಾ ಕೆಸಿಎಫ್ ಅಧ್ಯಕ್ಷ ಅಬ್ದುಲ್ ಹಮೀದ್ ಕೈರಂಗಳ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು.
ದಮ್ಮಾಮ್ ಝೋನಲ್ ಪ್ರತಿನಿಧಿಯಾಗಿ ಆಗಮಿಸಿದ ಝೋನಲ್ ಸಂಘಟನಾ ಇಲಾಖೆಯ ನಾಯಕ ಅಶ್ರಫ್ ನಾವುಂದ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಸೌದಿ ರಾಷ್ಟ್ರೀಯ ಸಮಿತಿ ಸಂಘಟನಾ ಇಲಾಖೆಯ ಅಧ್ಯಕ್ಷ ಅಬ್ದುರ್ರಶೀದ್ ಸಖಾಫಿ ಆಧ್ಯಾತ್ಮಿಕ ಹಾಗೂ ಆರೋಗ್ಯಕರ ಜೀವನದ ಕುರಿತು ಉಪನ್ಯಾಸ ನೀಡಿದರು.
ಮುಜಾಲಸ-23 ಹಮ್ಮಿಕೊಂಡ ಫುಡ್ ಫೆಸ್ಟ್ ಕಾರ್ಯಕ್ರಮದಲ್ಲಿ ಕಾರ್ಯಕರ್ತರು ವಿವಿಧ ಬಗೆಯ ವಿದೌಟ್ ಫೈರ್(ಸರಳವಾಗಿ) ಶುಚಿ-ರುಚಿಕರವಾದ ಫುಡ್ ತಯಾರಿಸಿದರು.
ಫುಡ್ ಫೆಸ್ಟ್ ಸ್ಪರ್ಧಾಳು ಶಂಸುದ್ದೀನ್ ಕೆಮ್ಮಾರ ಸಿಹಿತಿಂಡಿಯಾಗಿ
‘ಫೈನಾಪಲ್ ಡೆಸರ್ಟ್ ತಯಾರಿಸಿ ಪ್ರಥಮ ಮತ್ತು ರುಚಿಕರವಾದ ಹೆಲ್ತಿ ಸಲಾಡ್ ತಯಾರಿಸಿ ಅಸ್ರು ಬಜ್ಪೆ ದ್ವಿತೀಯ ಸ್ಥಾನ ಗಳಿಸಿದರು.
ವೇದಿಕೆಯಲ್ಲಿ
ಹಸ್ಸಾ ಸೆಕ್ಟರ್ ಅಧ್ಯಕ್ಷ ಅಬ್ದುಲ್ ಹಮೀದ್ ಕೈರಂಗಳ,ಅಬ್ದುಲ್ ಮಜೀದ್ ಸಖಾಫಿ,ಇಕ್ಬಾಲ್ ಗುಲ್ವಾಡಿ, ಹಾರಿಸ್ ಕಾಜೂರು, ಮುಹಮ್ಮದ್ ಫಾರೂಖ್ ಸಅದಿ, ಉಬೈದುಲ್ಲಾ ಉಸ್ತಾದ್ ಅಲ್ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಇಸ್ಹಾಕ್ ಫಜೀರ್ ಸ್ವಾಗತಿಸಿ, ಧನ್ಯವಾದಗೈದರು.