ಉಪ್ಪಿನಂಗಡಿ : ಕರ್ನಾಟಕ ರಾಜ್ಯ ಸುನ್ನಿ ಸ್ಟೂಡೆಂಟ್ಸ್ ಫೆಡರೇಶನ್ (ರಿ) SSF ದ.ಕ ಈಸ್ಟ್ ಜಿಲ್ಲಾ ಮಟ್ಟದ ಸಾಹಿತ್ಯೋತ್ಸವವು 2024 ಜನವರಿ 6, 7ರಂದು ಸರಳಿಕಟ್ಟೆಯಲ್ಲಿ ನಡೆಯಲಿದೆ. ಸುಮಾರು 800ರಷ್ಟು ಪ್ರತಿಭೆಗಳು ಭಾಗವಹಿಸಲಿರುವ ಈ ಸ್ಪರ್ಧಾ ಕಾರ್ಯಕ್ರಮವು 4 ವಿಭಾಗಗಳ ಮೂಲಕ 5 ವೇದಿಕೆಗಳಲ್ಲಿ ನಡೆಯಲಿದ್ದು, ಪ್ರಸ್ತುತ ಕಾರ್ಯಕ್ರಮದ ಸ್ಥಳೀಯ ಸ್ವಾಗತ ಸಮಿತಿ ರಚನಾ ಸಭೆಯು ಸರಳಿಕಟ್ಟೆ ಮದರಸ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಶೈಖುನಾ ಪೆರ್ನೆ ಉಸ್ತಾದರು ದುಆ ನೆರವೇರಿಸಿ ಆಶಿರ್ವದಿಸಿದರು. ಸರಳಿಕಟ್ಟೆ ಜುಮಾ ಮಸ್ಜಿದ್ ಖತೀಬರಾದ ಅಬ್ದುರ್ರಹೀಂ ಸಖಾಫಿ ಉದ್ಘಾಟಿಸಿದರು.SSF ದ.ಕ ಈಸ್ಟ್ ಜಿಲ್ಲಾಧ್ಯಕ್ಷ ಮುಹಮ್ಮದ್ ಮಿಸ್ಬಾಹಿ ಜಿಲ್ಲಾ ಸಾಹಿತ್ಯೋತ್ಸವ ಹಾಗೂ ಸ್ವಾಗತ ಸಮಿತಿ ರೂಪೀಕರಣದ ವಿಷಯ ಮಂಡಿಸಿದರು. SSF ರಾಜ್ಯ ಸಾಹಿತ್ಯೋತ್ಸವ ಸಮಿತಿ ಕನ್ವೀನರ್ ಮುಹಮ್ಮದ್ ಅಲಿ ತುರ್ಕಳಿಕೆ, ಮೂಡಡ್ಕ ಅಲ್ ಮದೀನತುಲ್ ಮುನವ್ವರ ಮ್ಯಾನೇಜರ್ ಅಶ್ರಫ್ ಸಖಾಫಿ ಮಾಡಾವು ಶುಭಹಾರೈಸಿದರು.
ಜಿಲ್ಲಾ ನಾಯಕರ ನೇತೃತ್ವದಲ್ಲಿ ಸ್ವಾಗತ ಸಮಿತಿ ರಚಿಸಲಾಯಿತು. ಸಲಹೆಗಾರರಾಗಿ ಸರಳಿಕಟ್ಟೆ ಜುಮಾ ಮಸ್ಜಿದ್ ಜಮಾಅತ್ ಅಧ್ಯಕ್ಷ ಅಬ್ದುಲ್ ಹಮೀದ್ ಹಾಜಿ, ಮೂಡಡ್ಕ ಅಲ್ ಮದೀನತುಲ್ ಮುನವ್ವರ ಮ್ಯಾನೇಜರ್ ಅಶ್ರಫ್ ಸಖಾಫಿ ಮಾಡಾವು, ಅಬ್ದುಲ್ ಹಮೀದ್ ಮಿಸ್ಬಾಹಿ, ಉಸ್ಮಾನ್ ಹಾಜಿ, ಅಬ್ದುರ್ರಹೀಂ ಸಖಾಫಿಯವರನ್ನು ಸೂಚಿಸಲಾಯಿತು. ಸ್ವಾಗತ ಸಮಿತಿ ಚೇರ್ಮಾನ್ ಕೆ.ಎಂ ಅಬ್ದುಕ್ ಹಕೀಂ ತನಲ್ ಸರಳಿಕಟ್ಟೆ, ಜನರಲ್ ಕನ್ವೀನರ್ ಅಬ್ದುಲ್ಲತೀಫ್ ಮಾಸ್ಟರ್ ಸರಳಿಕಟ್ಟೆ, ಫಿನಾನ್ಸ್ ಕೋರ್ಡಿನೇಟರ್ ನೌಫಲ್ ಜಿ.ಎಸ್, ವೈಸ್ ಚೇರ್ಮನ್ಸ್ ಪಿ.ಎಸ್ ಅಬ್ದುಲ್ಲತೀಫ್ ಹಾಜಿ ಮಜಲ್, ಮುನೀರ್ ಪಿ.ಎಂ ಸರಳಿಕಟ್ಟೆ, ಅಬ್ದುರ್ರಝಾಕ್ ಸರಳಿಕಟ್ಟೆ, ಕನ್ವೀನರ್ ಗಳಾಗಿ ಅಬ್ದುಲ್ ನಾಸಿರ್ ಎಸ್, ನೌಶಾದ್ ಎಸ್, ಪಿ.ಎಂ ಶಾಫಿ, ಅಬ್ದುಲ್ ಸಮದ್ ಎಂ.ಎಚ್ ಹಾಗೂ ಸದಸ್ಯರನ್ನು ಆರಿಸಲಾಯಿತು.
ಕಾರ್ಯಕ್ರಮದಲ್ಲಿ ಯೂಸುಫ್ ಹಾಜಿ ಕುರುಬರ ಪಾಲು, ಜಿಲ್ಲಾ ನಾಯಕರಾದ ಕೆ.ಎಸ್ ಹಕೀಂ ಕಳಂಜಿಬೈಲ್, ರಶೀದ್ ಮಾಸ್ಟರ್ ಮಡಂತ್ಯಾರ್, ಶಫೀಕ್ ಸಅದಿ ಈಶ್ವರಮಂಗಳ, ಶರೀಫ್ ಕಲ್ಲಾಜೆ, ಇಸ್ಹಾಕ್ ಮದನಿ ಅಳಕೆ, ಇಕ್ಬಾಲ್ ನೀರಕಟ್ಟೆ, ಸಿದ್ದೀಕ್ ಹಿಮಮಿ ಸಖಾಫಿ ಉಪಸ್ಥಿತರಿದ್ದರು. ಸರಳಿಕಟ್ಟೆ ಎಸ್.ವೈ.ಎಸ್ ಕಾರ್ಯದರ್ಶಿ ಅಬ್ದುಲ್ಲತೀಫ್ ಮಾಸ್ಟರ್ ಸ್ವಾಗತಿಸಿ ಜಿಲ್ಲಾ ಕನ್ವೀನರ್ ಸ್ವಬಾಹ್ ಹಿಮಮಿ ಸಖಾಫಿ ವಂದಿಸಿದರು.