ಅಬುಧಾಬಿ: ಕಾರ್ಮಿಕರಿಗೆ ವೇತನ ನೀಡುವುದರಲ್ಲಿ ವಿಳಂಬ ಉಂಟುಮಾಡಿದ 164 ಕಂಪನಿಗಳ ವಿಚಾರಣೆಯನ್ನು ಪ್ರೋಸಿಕ್ಯೂಷನ್ಗೆ ವರ್ಗಾಯಿಸಲಾಗಿದೆ.
ಎರಡು ತಿಂಗಳುಗಳಿಗಿಂತ ಹೆಚ್ಚಿನ ಸಂಬಳವನ್ನು ಪಾವತಿಸದಿರುವ ಕಂಪನಿಗಳು ಕಾನೂನು ಕ್ರಮವನ್ನು ಎದುರಿಸುತ್ತಿವೆ.
ಮಾನವ ಸಂಪನ್ಮೂಲ ಸ್ವದೇಶೀಕರಣ ಸಚಿವಾಲಯದ ನೇತೃತ್ವದಲ್ಲಿರುವ ಮಾನವ ಕಳ್ಳಸಾಗಣೆಗಳ ರಕ್ಷಣಾ ಸಮಿತಿಯ ವಾರ್ಷಿಕ ವರದಿಯಲ್ಲಿ, ಸಂಬಳ ಪಾವತಿಸಲು ವಿಫಲವಾದ ಸಂಸ್ಥೆಗಳಿಗೆ ಸಂಬಧಪಟ್ಟ ಕಡತಗಳನ್ನು ಪ್ರೋಸಿಕ್ಯೂಷನ್ಗೆ ಹಸ್ತಾಂತರಿಸಿದ ವಿವರಗಳಿವೆ.
ವೇತನ ಲಭಿಸದೆ ಸಂಕಷ್ಟಕ್ಕೀಡಾದ ಕಾರ್ಮಿಕರನ್ನು ತಾಯ್ನಾಡಿಗೆ ಕಳುಹಿಸುವುದು ಸಮೇತ ಕಾರ್ಯಗಳನ್ನು ಕ್ರಮೀಕರಿಸಲು ಸಮಿತಿಯು ಕಳೆದ ವರ್ಷ ಒಟ್ಟು 2.7 ಮಿಲಿಯನ್ ದಿರ್ಹಮ್ ಗಳನ್ನು ವ್ಯಯಿಸಿದೆ ಎಂದು ಸಮಿತಿಯು ಹೇಳಿದೆ.ಉದ್ಯೋಗದಾತ ವೀಸಾ ಅರ್ಜಿಗಳನ್ನು ನೀಡಿದಾಗ ಪಾವತಿಸಿದ ಮೊತ್ತವನ್ನು ಈ ಕಾರ್ಯಕ್ಕಾಗಿ ವ್ಯಯಿಸಲಾಗಿದೆ.
ಯುಎಇ ಕಾಯಿದೆ ಪ್ರಕಾರ ಕಾರ್ಮಿಕರಿಗೆ 2 ತಿಂಗಳುಗಳಿಗಿಂದ ವೇತನ ವಿಳಂಬ ಗೊಳಿಸುವುದು ಕಾನೂನು ಬಾಹಿರವಾಗಿದೆ.ಎರಡು ತಿಂಗಳ ವೇತನವನ್ನು ಪಡೆಯದ ನೌಕರರು ಪ್ರಾಯೋಜಕರ ಒಪ್ಪಿಗೆಯಿಲ್ಲದೆ ಇತರ ಸೂಕ್ತ ಸಂಸ್ಥೆಗಳಿಗೆ ವೀಸಾವನ್ನು ಬದಲಾಯಿಸಲು ಅನುಮತಿಯಿದೆ.
ಖಾಸಗಿ ವಲಯದ ಕಾರ್ಮಿಕರ ಸ್ಥಿತಿಯನ್ನು ಸುಧಾರಿಸಲು 50,000ಕ್ಕಿಂತ ಹೆಚ್ಚಿನ ಪರಿಶೀಲನೆಗಳನ್ನು ಕಳೆದ ವರ್ಷ ನಡೆಸಲಾಗಿದೆ.
ಮಾನವ ಕಳ್ಳಸಾಗಣೆ ತಡೆಯುವ ಸಲುವಾಗಿ 2013 ರಲ್ಲಿ ಯುಎಇ ರಾಷ್ಟ್ರೀಯ ಸಮಿತಿಯನ್ನು ರಚಿಸಲಾಯ್ತು. ಸಂತ್ರಸ್ತರಿಗೆ ಸಹಾಯ ಮತ್ತು ಪುನರ್ವಸತಿಗಾಗಿ 663,206 ದಿರ್ಹಂ ಖರ್ಚು ಮಾಡಲಾಯಿತು.















ಇನ್ನಷ್ಟು ಸುದ್ದಿಗಳು
ಸೌದಿಯ ವೈಮಾನಿಕ ದಾಳಿ ಇರಾಕಿ ಜನತೆ ಅಥವಾ ಸರ್ಕಾರದ ವಿರುದ್ಧವಲ್ಲ- ಸೌದಿ ಅರೇಬಿಯಾ
ಇಸ್ರೇಲಿ ಉತ್ಪನ್ನಗಳ ಆಮದು ನಿಷೇಧ: ಐರ್ಲೆಂಡ್ ಕ್ರಮವನ್ನು ಸ್ವಾಗತಿಸಿದ ಕತಾರ್
ಪ್ರಾದೇಶಿಕ ಮಟ್ಟದಲ್ಲಿ ಅನಿಶ್ಚಿತತೆ: ಮೂರು ಗಲ್ಫ್ ದೇಶಗಳಿಗೆ ವಿಮಾನ ಸೇವೆ ಸ್ಥಗಿತ
ಅನಿವಾಸಿ ಭಾರತೀಯರ ಪಾಸ್ಪೋರ್ಟ್ ಶುಲ್ಕ ಹೆಚ್ಚಳ: ಮೂರು ವಾರಗಳಲ್ಲಿ ನಿರ್ಧಾರ ತಿಳಿಸುವಂತೆ ಕೇಂದ್ರಕ್ಕೆ ಕೋರ್ಟ್ ನಿರ್ದೇಶನ
ಹೋರ್ಮುಜ್ ಮೂಲಕ ಸುರಕ್ಷಿತ ಸಾರಿಗೆ- ಪ್ರಮುಖ ಚರ್ಚೆಗಾಗಿ ಇರಾನ್ಗೆ ತಲುಪಿದ ಒಮಾನ್ ನಿಯೋಗ
ಉಮ್ರಾ ಯಾತ್ರಿಕರಿಗೆ ಸಿಹಿ ಸುದ್ದಿ: ಒಂದು ವರ್ಷ ಕಾಲಾವಧಿಯ ‘ಮಲ್ಟಿ ಎಂಟ್ರಿ’ ಉಮ್ರಾ ವೀಸಾ ಬಿಡುಗಡೆ
ಭಾರತದ ವಿಮಾನ ಪ್ರಯಾಣಿಕರಿಗೆ ಸಿಹಿ ಸುದ್ದಿ: ಟಿಕೆಟ್ ದರಕ್ಕೆ ಮಾಸಿಕ ಕಂತಿನ ಸೌಲಭ್ಯ
ನಿಖರವಲ್ಲದ ಸುದ್ದಿ ಹಂಚಿಕೊಂಡರೆ ಅಪಾಯ- ನಕಲಿ ಸುದ್ದಿಗಳ ವಿರುದ್ಧ ಸೌದಿಯಲ್ಲಿ ಎಚ್ಚರಿಕೆ
ಸೌದಿ: ‘ಏಕೀಕೃತ ರಾಷ್ಟ್ರೀಯ ವೀಸಾ ಪ್ಲಾಟ್ಫಾರ್ಮ್’ ಅನುಷ್ಠಾನಕ್ಕೆ- ವೀಸಾ ಪ್ರಕ್ರಿಯೆಗಳು ಇನ್ನಷ್ಟು ಸುಲಭ
ಅಂತಾರಾಷ್ಟ್ರೀಯ ಸರ್ವೀಸ್ಗಳಲ್ಲಿ ದರ ಕಡಿತ – ಏರ್ ಇಂಡಿಯಾ ಎಕ್ಸ್ಪ್ರೆಸ್ ಘೋಷಣೆ