janadhvani

Kannada Online News Paper

ಆತ್ಮ ಪರಿಶೀಲನೆಯ ಮಾಸ ರಮಝಾನ್: ಅಬುಧಾಬಿಯಲ್ಲಿ ಫಾರೂಖ್ ನ‌ಈಮಿ

ಅಬುಧಾಬಿ: ರಮಝಾನ್‌ನಲ್ಲಿ ಸ್ವಯಂ ಆತ್ಮಪರಿಶೀಲನೆ ನಡೆಸಿ ಮನಸ್ಸನ್ನು ನಲ್ಮೆಯ ಫಲವತ್ತಾದ ಭೂಮಿಯನ್ನಾಗಿ ಮಾಡುವಂತೆ, ಎಸ್ಸೆಸ್ಸೆಫ್ ಕೇರಳ ರಾಜ್ಯಾಧ್ಯಕ್ಷ, ಶೈಖ್ ಖಲೀಫಾ ಬಿನ್ ಝಾಯಿದ್ ಅಲ್ ನಹ್ಯಾನ್ ಅವರ ರಮಝಾನ್ ಅತಿಥಿಯೂ ಆಗಿರುವ ಪ್ರಮುಖ ವಾಗ್ಮಿ ಡಾ. ಫಾರೂಖ್ ನ‌ಈಮಿ ಕೊಲ್ಲಂ ಹೇಳಿದ್ದಾರೆ.

ಅಬುಧಾಬಿಯ ಇಂಡಿಯನ್ ಇಸ್ಲಾಮಿಕ್ ಸೆಂಟರ್ನಲ್ಲಿ ಅವರು ರಮಝಾನ್ ಪ್ರವಚನ ನೀಡುತ್ತಿದ್ದರು.

ಪಾಪಗಳನ್ನು ಮನ್ನಿಸಲ್ಪಡುವ ರಮಝಾನಿನಲ್ಲಿ ದಾನ ಮತ್ತು ಕುರ್‌ಆನ್ ಪಾರಾಯಣವನ್ನು ಹೆಚ್ಚಿಸುವಂತಾಗ ಬೇಕು. ರಂಝಾನ್ ನ ಬಿಡುವಿನ ವೇಳೆಗಳು ನಿದ್ರಿಸಲು ಮೀಸಲಿರುವ ಸಮಯವಲ್ಲ. ವೃತ ಅನುಷ್ಟಿಸುವವರ ನಿದ್ರೆ ಕೂಡ ಆರಾಧನೆಯಾಗಿದೆ. ಹಾಗೆ ಮಾಡುವುದರಿಂದ ಭೂಮಿ ಸಣ್ಣದಾಗಿ, ಪರಲೋಕಕ್ಕಿರುವ ದೂರ ಕಡಿಮೆಯಾಗುತ್ತದೆ ಎಂದು ಅವರು ಹೇಳಿದರು. ಅಲ್ಲಾಹನ ಕಾರುಣ್ಯ ಗೃಹವಾದ ಸ್ವರ್ಗದ ಕುರಿತು ನಾವು ತಿಳಿಯಬೇಕು.ಸ್ವರ್ಗವು ವೃತ ಅನುಷ್ಟಿಸುವವರ ಮನೆಯಾಗಿದೆ. ಅಲ್ಲಾಹನತ್ತ ಇನ್ನಷ್ಟು ಹತ್ತಿರವಾಗಲು ಪ್ರಚೋದನೆ ನೀಡುವ ಮಾಸವಾಗಿದೆ ರಮಝಾನ್. ಇತರ ದಿನಗಳಿಗಿಂದ ದುಪ್ಪಟ್ಟು ಪ್ರತಿಫಲ ಲಭಿಸುವ ಮಾಸವಾಗಿದೆ ರಮಝಾನ್ ಎಂದು ಅವರು ವಿವರಿಸಿದರು.

ಐಸಿಎಫ್ ರಾಷ್ಟ್ರಾಧ್ಯಕ್ಷ ಮುಸ್ತಫಾ ದಾರಿಮಿ ಕಡಾಂಗೋಡ್ ಅಧ್ಯಕ್ಷತೆ ವಹಿಸಿದ್ದರು. ಪಿ.ವಿ. ಅಬೂಬಕರ್ ಮೌಲವಿ, ಹಂಝ ಅಹ್ಸನಿ, ಹಮೀದ್ ಪರಪ್ಪ ಹಮೀದ್ ಈಶ್ವರಮಂಗಲ, ಅನ್ವರ್ ಸಾದಾತ್ ತಂಙಳ್ ವಾರಾಣಕ್ಕರ, ಸಮದ್ ಅಮಾನಿ ಮುಂತಾದವರು ಉಪಸ್ಥಿತರಿದ್ದರು.

error: Content is protected !! Not allowed copy content from janadhvani.com