ದುಬೈ: ಅಲ್ ವಫಾ ಚಾರಿಟೇಬಲ್ ಟ್ರಸ್ಟ್ನ ಉಪಾಧ್ಯಕ್ಷರು, ಜಮೀಯತುಲ್ ಫಲಾಹ್ ಸಂಘಟನೆಯ ಮಾಜಿ ಜಿಲ್ಲಾಧ್ಯಕ್ಷರು ಜಮಿಯತುಲ್ ಫಲಾಹ್ ಸಿಟಿ ಕಾರ್ಪೋರೇಶನ್ ಇದರ ಅಧ್ಯಕ್ಷರು ಮತ್ತು ಸಮಾಜ ಸೇವಕರಾಗಿದ್ದ ಪಿ.ಬಿ ಅಬ್ದುಲ್ ರಝಾಕ್ ಅವರು ನವೆಂಬರ್ 14 ರಂದು ದುಬೈಯ ಆಸ್ಟರ್ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ದುಬೈಯಲ್ಲಿ ಮಯ್ಯತ್ ನ ದಫನ ಕಾರ್ಯಕ್ಕೆ ಬೇಕಾಗುವ ದಾಖಲೆ ಪತ್ರಗಳನ್ನು ಸರಿಪಡಿಸುವಲ್ಲಿ ಕೆ.ಸಿ. ಎಫ್ ಯು.ಎ.ಇ ಸನ್ನದ್ಧ ಸಮಿತಿ ನೇತ್ರತ್ವ ವಹಿಸಿ ಕೆ.ಸಿ.ಎಫ್ ಯು.ಎ.ಇ ಸಮಿತಿಯ ಉಪಾಧ್ಯಕ್ಷರಾದ ಝೈನುದ್ದೀನ್ ಹಾಜಿ ಬೆಳ್ಳಾರೆ ಅವರ ಮಾರ್ಗದರ್ಶನದೊಂದಿಗೆ ಸಮದ್ ಬಿರಾಲಿ, ಮುಬೀನ್ ಶೇಕ್, ಉಡುಪಿ, ಝಹಿರ್ ಬೈಕಂಪಾಡಿ, ಹಾಜಿ ಶೂಕುರ್ ಉಳ್ಳಾಲ, ಅಲಿ ಕೂಳೂರ್ ಮುಂತಾದವರು ಪಿ.ಬಿ ಅಬ್ದುಲ್ ರಝಾಕ್ ರವರ ಮಗನಾದ ಝೀಶಾನ್ ರೊಂದಿಗೆ ಕೈಜೋಡಿಸಿದರು.
ನವೆಂಬರ್ 15 ರಂದು ಅಲ್ ಐನ್ ನ ದಫನ ಭೂಮಿಯಲ್ಲಿ ದಫನ ಕ್ರಿಯೆ ನಡೆಯಿತು. ಪಿ.ಬಿ ಅಬುಲ್ ರಝಾಕ್ ಅವರ ಕುಟುಂಬಸ್ಥರು,ಅಶ್ಫಾಕ್, ಅವರ ಅಳಿಯ ಮುದಸ್ಸಿರ್, ಸಂಬಧಿಕರು, ಹಾಗೂ ಕೆ.ಸಿ. ಎ.ಫ್ ಅಲ್ ಐನ್ ನ ನೇತಾರರು ಭಾಗವಹಿಸಿದ್ದರು.