ಕೊಡಗು ಸುನ್ನೀ ವೇಲ್ಪೇರ್ ಅಸೋಸಿಯೇಷನ್ ಕುವೈಟ್ ಸಮಿತಿ ವತಿಯಿಂದ ನವಂಬರ್ 10 ನೇ ತಾರೀಕು ಶುಕ್ರವಾರ ಕೈತಾನ್ ರಾಜಧಾನಿ ಹೋಟೆಲ್ ನಲ್ಲಿ ಬ್ರಹತ್ತ್ ಜಲಾಲಿಯ್ಯ ರಾತೀಬ್ ಹಾಗೂ ಶೈಖ್ ಜೀಲಾನಿ ಸಯ್ಯಿದ್ ತಾಜುಲ್ ಉಲಾಮಾ ಅನುಸ್ಮರಣೆ ಸಮಾವೇಶ ನಡೆಯಿತು.
ಮಗ್ರಿಬ್ ನಮಾಜಿನ ಬಳಿಕ ಪ್ರಾರಂಭಗೊಂಡ ಕಾರ್ಯಕ್ರಮ ಉಸ್ತಾದ್ ರುಗಳ ನೇತೃತ್ವದಲ್ಲಿ ಜಾಲಾಲಿಯ್ಯ ರಾತೀಬ್ ನಡೆಯಿತು.
ಸಮಿತಿಯ ಪ್ರ.ಕಾರ್ಯದರ್ಶಿ ರಹೀಮ್ ಕೊಳಕ್ಕೇರಿ ಸಮಾವೇಶದಲ್ಲಿ ಬಾಗವೈಸಿದವರಿಗೆ ಸ್ವಾಗತ ಕೋರಿ ಮಾತನಾಡಿದರು.
KSWA ಕುವೈಟ್ ಸಮಿತಿ ಅಧ್ಯಕ್ಷರಾದ ಬಾದುಃಶಾ ಸಖಾಫಿ ಮಾದಪುರ ಅಧ್ಯಕ್ಷತೆ ವೈಸಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.
ಕಾರ್ಯಕ್ರಮದ ಸ್ವಾಗತ ಸಮಿತಿ ಚೆರ್ಮಾನ್ ಹಾಗೂ KCF ರಾಷ್ಟ್ರೀಯ ಸಮಿತಿ ಅಧ್ಯಕ್ಷರಾದ ಹುಸೈನ್ ಮುಸ್ಲಿಯಾರ್ ಕಾರ್ಯಕ್ರಮವನ್ನು ಉದ್ಘಾಟನೆ ಗೈದು ಮಾತನಾಡಿದರು.
ಕಾರ್ಯಕ್ರಮದಲ್ಲಿ KSWA ಜಿ ಸಿ ಸಿ ಪ್ರ:ಕಾರ್ಯದರ್ಶಿ ಇಸ್ಮಾಯಿಲ್ ಅಯ್ಯಂಗೇರಿ ಪ್ರಾಸ್ತಾವಿಕ ಭಾಷಣ ಮಾಡಿದರು.
ಕಾರ್ಯಕ್ರಮದಲ್ಲಿ KCF ಕುವೈಟ್ ಸಮಿತಿ ಪರವಾಗಿ ಅಬ್ದುಲ್ ರಹಮಾನ್ ಸಖಾಫಿ ICF ಕುವೈತ್ ದಃ ಹ್ವಾ ವಿಂಗ್ ಚೆರ್ಮಾನ್ ಅಲವಿ ಸಖಾಫಿ ತಂಜೇರಿ .ಮಾಹಿನ್ ಸಖಾಫಿ ಅಯ್ಯಂಗೇರಿ .ಶುಭಕೋರಿ ಮಾತನಾಡಿದರು. ವೇದಿಕೆಯಲ್ಲಿ ಇನ್ನಿತರ ಅತಿಥಿಗಳಾಗಿ ಕೆಸಿಎಫ್ ಪ್ರ.ಕಾರ್ಯದರ್ಶಿ ಯಃಕೂಬ್ ಕಾರ್ಕಳ. DKSC ಅಧ್ಯಕ್ಷರು ಯೂಸುಫ್ ಮಂಚಕ್ಕಲ್. ಬಶೀರ್ ಸಖಾಫಿ .ಅಶ್ರಫ್ ಮಿಸ್ಬಾಹಿ .ಇಸ್ಮಾಯಿಲ್ ಹಾಜಿ ಹುಂಡಿ ಕೋಶಾಧಿಕಾರಿ kswa .ಅಲ್ ಮದೀನ ಸಮಿತಿ ಅಧ್ಯಕ್ಷರಾದ ಶಾಹುಲ್ ಹಮೀದ್ ಸಹದಿ .ಉಮರ್ ಝುಹರಿ ಹಾಗೂ ಮುಹಮ್ಮದ್ ಹಾಜಿ ಮೂರ್ನಾಡ್ ಅಬ್ದುಲ್ ಖಾದರ್ ಮಡಿಕೇರಿ ಅಬ್ದುಲ್ ಲತೀಫ್ kkma. ಜಮಾಲ್ ಕೃಷ್ಣಾಪುರ ಮಣಿಪುರ ಸಮಿತಿ.ಝಕರಿಯ ಮುಸ್ಲಿಯಾರ್ ಎಮ್ಮೆಮಾಡು.ಪಾರೂಖ್ ಸಖಾಫಿ.ಸಿರಾಜ್ ಸುಂಟಿಕೊಪ್ಪ ಬಾಗವೈಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಪ್ರಭಾಷಣಕಾರರಾಗಿ ಆಗಮಿಸಿದ್ದ ಸಯ್ಯಿದ್ ಮುತ್ತನ್ನೂರ್ ತಂಗಲ್ ಮಲಪ್ಪುರಂ ಸವಿಸ್ತಾರವಾಗಿ ಮಾತನಾಡಿ ಜನಮನಸ್ಸು ಸೆಳೆದರು. ಕಾರ್ಯಕ್ರಮದಲ್ಲಿ ಸಯ್ಯಿದ್ ವರನ್ನು ಮೊಮೊಂಟ್ ನೀಡಿ ಗೌರವಿಸಲಾಯಿತು.ಅದೇರೀತಿ ಸಮಿತಿಯ ಇಬ್ಬರು ಗಣ್ಯ ವ್ಯಕ್ತಿಗಳಾದ ಮಾಹಿನ್ ಸಖಾಫಿ ಹಾಗೂ ಇಸ್ಮಾಯಿಲ್ ಹಾಜಿ ಹುಂಡಿ ಅವರನ್ನು ಮೊಮೊಂಟ್ ನೀಡಿ ಸನ್ಮಾನಿಸಲಾಯಿತು.
ಕೊನೆಯಲ್ಲಿ kswa ಜಿ ಸಿ ಸಿ ಸದಸ್ಯರಾದ ಹನೀಫ್ ಚೇರಿಯಪರಂಬು ಧನ್ಯವಾದ ಅರ್ಪಿಸಿದರು.