janadhvani

Kannada Online News Paper

ದಮ್ಮಾಮ್: JAMWA ದ ವತಿಯಿಂದ ನವೆಂಬರ್ 16ರಂದು ” ಗಮ್ಮತ್ -3″ ಕುಟುಂಬ ಸಮ್ಮಿಲನ

ದಮ್ಮಾಮ್-ಅಲ್ ಜುಬೈಲ್: ಜೋಕಟ್ಟೆಯ ಅನಿವಾಸೀ ಒಕ್ಕೂಟವಾದ ಜೋಕಟ್ಟೆ ಏರಿಯಾ ಮುಸ್ಲಿಂ ವೆಲ್ಫೇರ್ ಅಸೋಸಿಯೇಷನ್ (JAMWA) ಇದರ ವತಿಯಿಂದ “ಸಾಮುದಾಯಿಕ ಅಭ್ಯುದಯಕ್ಕಾಗಿ ಒಟ್ಟು ಸೇರೋಣ” ಎಂಬ ಧ್ಯೇಯ ವಾಕ್ಯದಡಿ “ಗಮ್ಮತ್ತ್ – 3” ಎಂಬ ಕುಟುಂಬ ಸಮ್ಮಿಲನವನ್ನು ಇದೇ ನವೆಂಬರ್ 16ರಂದು ಸಂಜೆ ದಮ್ಮಾಮ್ ಸಫ್ವಾದಲ್ಲಿನ ಇಸ್ತ್ರಾ ಅಲ್ ನಬಿ ನಲ್ಲಿ ನಡೆಸಲಿರುವುದು ಎಂದು ಜಂಟಿ ಪತ್ರಿಕಾ ಪ್ರಕಟಣೆಯು ತಿಳಿಸಿದೆ.
JAMWA ದಮ್ಮಾಮ್ ಹಾಗೂ ಜುಬೈಲ್ ಘಟಕದ ಅಧ್ಯಕ್ಷರಾದ ಸಿರಾಜ್ ಬಿ.ಎಸ್. ವರ್ಲ್ಡ್ ವೈಡ್ ಮತ್ತು ಕಾರ್ಯಕ್ರಮದ ಸಂಚಾಲಕರಾದ ಶೆರೀಫ್ ಅರಿಕೆರೆ ಅವರು ಜಂಟಿಯಾಗಿ ಮಾತನಾಡುತ್ತಾ, ಗಲ್ಫ್ ಮೂಲದ ಸಮಾನ ಮನಸ್ಕರಾದ ಜೋಕಟ್ಟೆ ಆಸುಪಾಸಿನ ಕೆಲವು ಯುವಕರ ನಾಯಕತ್ವದಲ್ಲಿ JAMWA, 2004 ರಲ್ಲಿ ರಿಯಾದ್ ನಲ್ಲಿ ಸ್ಥಾಪಿತಗೊಂಡು ಜೋಕಟ್ಟೆ ಹಾಗೂ ಸುತ್ತ ಮುತ್ತಲ ವಲಸಿಗರನ್ನು ಒಂದೇ ಸೂರಿನಡಿಯಲ್ಲಿ ಸಂಘಟಿಸಿ ಬಡ, ನಿರ್ಗತಿಕ ಹಾಗೂ ದೀನ ಕುಟುಂಬಗಳಿಗೆ ಶೈಕ್ಷಣಿಕ ಹಾಗೂ ವೈದ್ಯಕೀಯ ಸಹಾಯ ಹಸ್ತವನ್ನು ನೀಡುವುದರೊಂದಿಗೆ, ಬಡ ಹಾಗೂ ನಿರ್ಗತಿಕ ಹುಡುಗಿಯರ ಮದುವೆ ಸಂಬಂಧಿಸಿದ ವೆಚ್ಚಗಳನ್ನೂ ಕೂಡ ಹಲವು ವರ್ಷಗಳಿಂದ ನೀಡುತ್ತಾ ಬಂದಿದೆ.

JAMWA ಕಳೆದ ಎರಡು ಬಾರಿ ಅಂದರೆ 2012 ಹಾಗೂ 2016 ರಲ್ಲಿ ನಡೆಸಿದ “ಗಮ್ಮತ್” ಸಮ್ಮಿಲನದಲ್ಲಿ ದೊರೆತ ಮೊತ್ತದಿಂದ, ಉನ್ನತ ಶಿಕ್ಷಣವನ್ನು ಗಮನದಲ್ಲಿಟ್ಟುಕೊಂಡು ಜೋಕಟ್ಟೆಯ ಅಂಜುಮನ್ ಕಾಲೇಜಿಗೆ ಜಮೀನು ಖರೀದಿಸಲು ಹಾಗೂ ಸಮುದಾಯ ಕೇಂದ್ರಕ್ಕಾಗಿ ಭೂಮಿಯನ್ನು ಖರೀದಿಸಲು ಬಳಸಲಾಯಿತು. ಪ್ರಸ್ತುತ ಹಮ್ಮಿಕೊಂಡಿರುವ “ಗಮ್ಮತ್ತ್-3” ಕುಟುಂಬ ಸಮ್ಮಿಲನವು “ಸಾಮುದಾಯಿಕ ಅಭ್ಯುದಯಕ್ಕಾಗಿ ಒಟ್ಟು ಸೇರೋಣ” ಎಂಬ ಧ್ಯೇಯ ವಾಕ್ಯದಡಿ , ಜೋಕಟ್ಟೆ ಹಾಗೂ ಆಸುಪಾಸಿನ ಜನರ ಸಾಮುದಾಯಿಕ ಶ್ರೇಯೋಭಿವೃಧ್ಧಿಯನ್ನು ಮನದಲ್ಲಿಟ್ಟು ಕೊಂಡು, ಒಂದು ಸಮುದಾಯ ಕೇಂದ್ರ ಹಾಗೂ ವಾಣಿಜ್ಯ ಸಂಕೀರ್ಣ ನಿರ್ಮಿಸುವ ಯೋಜನೆಯನ್ನು ಹೊಂದಿದೆ.

ಈ ಒಂದು ಯೋಜನೆಯ ಪ್ರಯುಕ್ತ, JAMWA ನವೆಂಬರ್ 16, 2023 ರಂದು ಇಸ್ಟ್ರಾ ಅಲ್ ನಬಿ, ಸಫ್ವಾ-ದಮ್ಮಾಮ್‌ನಲ್ಲಿ “ಸಮುದಾಯ ಕಲ್ಯಾಣಕ್ಕಾಗಿ ಒಟ್ಟಾಗಿ ಸೇರೋಣ” ಎಂಬ ಕುಟುಂಬ ಸಮ್ಮಿಲನ ಕಾರ್ಯಕ್ರಮ “ಗಮ್ಮತ್-3” ಅನ್ನು ಆಯೋಜಿಸುತ್ತಿದೆ. ಸಮ್ಮಿಲನವು ಜ್ಞಾನ ವರ್ಧಕ ಕ್ವಿಝ್, ಆಹ್ಲಾದಕರ ಕ್ರೀಡೆಗಳು ಮುಂತಾದ ಸ್ಪರ್ಧೆಗಳನ್ನೊಳಗೊಂಡಿರುವುದು ಹಾಗೂ ಈ ಕಾರ್ಯಕ್ರಮಗಳೆಲ್ಲವನ್ನೂ ಮಕ್ಕಳಿಗೆ, ಮಹಿಳೆಯರಿಗೆ ಹಾಗೂ ಪುರುಷರಿಗೆ ಪ್ರತ್ಯೇಕವಾಗಿ ಏರ್ಪಡಿಸಲಾಗಿದೆ ಈ ಸಮಾರಂಭಕ್ಕೆ ಸುಮಾರು 2500 ರಷ್ಟು ಅನಿವಾಸೀ ಬಾರತೀಯರನ್ನು ನೀರೀಕ್ಷಿಸಲಾಗುತ್ತಿದೆ ಎಂದರು.

ಆಲ್-ಮುಝೈನ್ ಸಂಸ್ಥೆಯ ಮುಖ್ಯ ಕಾರ್ಯ ನಿರ್ವಾಹಕ ಮಾನ್ಯ ಝಕರಿಯ್ಯ ಜೋಕಟ್ಟೆ ಹಾಗೂ ಬಿ.ಎಮ್. ಶೆರೀಫ್ ವೈಟ್ ಸ್ಟೋನ್ ರವರ ಮಾರ್ಗದರ್ಶನದಲ್ಲಿ ಈ “ಗಮ್ಮತ್ತ್” ಸಮಾರಂಭ ನಡೆಯಲಿದ್ದು, ಇದರ ಸುಸೂತ್ರ ಕಾರ್ಯ ನಿರ್ವಹಣೆಗಾಗಿ ಉಪ ಸಮಿತಿಯೊಂದನ್ನು ರಚಿಲಾಗಿದೆ.
ಪ್ರಸ್ತುತ ಸುಮಾರು 500 ಸದಸ್ಯರು ರಿಯಾದ್, ದಮ್ಮಾವ್, ಜುಬೈಲ್‌ , ಜಿದ್ದ ಹಾಗೂ GCC ಯ ಪ್ರಮುಖ ನಗರದಾದ್ಯಂತ ಸಂಸ್ಥೆಯ ಸಾಮಾಜಿಕ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದಾರೆ.

ಊರಿನ ಅಂಜುಮಾನ್ ಖುವ್ವತುಲ್ ಇಸ್ಲಾಂ ಸಂಸ್ಥೆಯ ಸುಧೀರ್ಘ ಸಾಮಾಜಿಕ ಕೊಡುಗೆಗಳನ್ನು ಮನದಟ್ಟು ಮಾಡಿ ಅದರ ಸಹಯೋಗದೊಂದಿಗೆ JAMWA ದ ಎಲ್ಲಾ ಸಾಮಾಜಿಕ ಕಾರ್ಯಕ್ರಮಗಳು ನಡೆಯುತ್ತಿದ್ದು , ಈ ಗಮ್ಮತ್ ಕುಟುಂಬ ಸಮ್ಮಿಲನ ಕಾರ್ಯಕ್ರಮಕ್ಕೆ ಅನಿವಾಸಿಗಳ ಉದಾತ್ತ ಬೆಂಬಲ ಹಾಗೂ ಎಲ್ಲರ ಪಾಲುಗೊಳ್ಳುವಿಕೆಯೊಂದಿಗೆ ಸಮಾರಂಭ ವನ್ನು ಅವಿಸ್ಮರಣೀಯ ಗೊಳಿಸಬೇಕೆಂದು JAMWA ದ ಗೌರವಾಅಧ್ಯಕ್ಶರೂ ಆಗಿರುವ ಮಾನ್ಯ ಝಕರಿಯ ಜೋಕಟ್ಟೆ ಅಲ್- ಮುಝೈನ್ ಹಾಗೂ ಬಿ.ಎಮ್. ಶೆರೀಫ್ ವೈಟ್ ಸ್ಟೋನ್ ರವರು ಪ್ರತ್ಯೇಕ ಪತ್ರಿಕಾ ಪ್ರಕಟಣೆಯಲ್ಲಿ ವಿನಂತಿಸಿ ಕೊಂಡಿದ್ದಾರೆ.
ಜುಬೈಲ್‌ನಲ್ಲಿ ಇತ್ತೀಚೆಗೆ ಪತ್ರಿಕಾ ಪ್ರಕಟಣೆಯಲ್ಲಿ, JAMWA GCC ಅಧ್ಯಕ್ಷ ಅಬ್ದುಲ್ ರಹಮಾನ್ ಚೆಯ್ಯೋನ್, GCC. ಕಾರ್ಯದರ್ಶಿ ಮೊಯ್ದಿನ್ G., JAMWA ಪೂರ್ವ ವಲಯದ ಕಾರ್ಯನಿರ್ವಾಹಕರಾದ ಸಿನಾನ್ TPH, ಮುಸ್ತಾಕ್ AKF, ಶರಫುಲ್ಹ A.M., B.A ಆರಿಫ್, ಇಕ್ಬಾಲ್ ಬೊಟ್ಟು, ಮೊಹಮ್ಮದ್ ಸಲಾವುದ್ದೀನ್, ಹನೀಫ್, ಬಿ.ಎಸ್. ಹಮೀದ್, ಅಜೀಂ ಅರಿಕೆರೆ, ಹಕೀಂ ಅರಿಕೆರೆ, ಫಾರೂಕ್ ಜಮಾತ್, ಬದ್ರುದ್ದೀನ್ ಸೇರಿದಂತೆ ಅನೇಕ ಸದಸ್ಯರು ಭಾಗವಹಿಸಿದ್ದರು.

error: Content is protected !! Not allowed copy content from janadhvani.com