janadhvani

Kannada Online News Paper

ಕುಂಬ್ರ ಮರ್ಕಝುಲ್ ಹುದಾ- ಅಧ್ಯಕ್ಷರಾಗಿ ಅರಿಯಡ್ಕ ಅಬ್ದುರಹ್ಮಾನ್ ಹಾಜಿ, ಬಶೀರ್ ಇಂದ್ರಾಜೆ ಪ್ರ. ಕಾರ್ಯದರ್ಶಿ

ಪುತ್ತೂರು: ರಾಜ್ಯದ ಪ್ರತಿಷ್ಟಿತ ಮಹಿಳಾ‌ ಶಿಕ್ಷಣ ಸಂಸ್ಥೆ ಕುಂಬ್ರ ಮರ್ಕಝುಲ್ ಹುದಾ ಕರ್ನಾಟಕ (ರಿ) ಇದರ ವಿಶೇಷ ಸಭೆಯು ಕಾರಂದೂರು ಮರ್ಕಝ್ ಸಖಾಫತಿ ಸ್ಸುನ್ನಿಯ್ಯಃ ಬಿ.ಡಿ.ಹಾಲ್‌ನಲ್ಲಿ ಸಂಸ್ಥೆಯ ಅಧ್ಯಕ್ಷರಾದ ಉಸ್ತಾದ್ ಸಿ. ಮುಹಮ್ಮದ್ ಫೈಝಿ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.ಸಂಸ್ಥೆಯ ಕಳೆದ ಎರಡು ವರ್ಷಗಳ ಪ್ರಗತಿ ಪರಿಶೀಲನೆ ಮತ್ತು ಲೆಕ್ಕ ಪತ್ರಗಳ ಪರಿಶೋಧನೆ ನಡೆಸಿ ಮುಂದಿನ ದಿನಗಳಲ್ಲಿ ಅಭಿವೃಧ್ದಿ ಕಾರ್ಯಗಳನ್ನು ತ್ವರಿತಗೊಳಿಸುವುದಕ್ಕಾಗಿ ಆಡಳಿತ ಸಮಿತಿಯನ್ನು ಕೆಳಗಿನಂತೆ ಪುನಾರಚಿಸಲಾಯಿತು.

ಹಾಜಿ ಪಿ.ಎಂ.ಅಬ್ದುರಹ್ಮಾನ್ ಅರಿಯಡ್ಕ (ಅಧ್ಯಕ್ಷರು) ಡಾ.ಎಮ್ಮೆಸ್ಸೆಂ. ಅಬ್ದುಲ್ ರಶೀದ್ ಸಖಾಫಿ ಝೈನೀ ಕಾಮಿಲ್ (ಉಪಾಧ್ಯಕ್ಷರು) ಮುಹಮ್ಮದ್ ಬಶೀರ್ ಇಂದ್ರಾಜೆ (ಪ್ರಧಾನ ಕಾರ್ಯದರ್ಶಿ) ಬಿ.ಕೆ.ಅಬ್ದುಲ್ ರಶೀದ್ ಸಂಪ್ಯ, ಯೂಸುಫ್ ಮೈದಾನಿಮೂಲೆ (ಕಾರ್ಯದರ್ಶಿಗಳು) ಯೂಸುಫ್ ಗೌಸಿಯಾ ಸಾಜಾ (ಕೋಶಾಧಿಕಾರಿ) ಅನ್ವರ್ ಹುಸೈನ್ ಗೂಡಿನಬಳಿ (ಆಡಿಟರ್)

ಸದಸ್ಯರಾಗಿ ಆಶಿಖುದ್ದೀನ್ ಅಖ್ತರ್ ಕುಂಬ್ರ,ಶಂಸುದ್ದೀನ್ ಬೈರಿಕಟ್ಟೆ, ಅಬ್ದುಲ್ ಹಮೀದ್ ಸುಳ್ಯ,ಎಸ್.ಎಂ.ಬಶೀರ್ ಹಾಜಿ ಶೇಖಮಲೆ, ಶಾಕಿರ್ ಹಾಜಿ ಮಿತ್ತೂರು,ಕರೀಂ ಕಾವೇರಿ ಇವರನ್ನು ಆರಿಸಲಾಯಿತು.

ಸಂಸ್ಥೆಯ ಮುಖ್ಯ ಪೋಷಕರಾಗಿ ಇಂಡಿಯನ್ ಗ್ರಾಂಡ್ ಮುಫ್ತಿ ಸುಲ್ತಾನುಲ್ ಉಲಮಾ ಎ.ಪಿ.ಉಸ್ತಾದ್ ಹಾಗೂ ಸಲಹೆಗಾರರಾಗಿ ಮರ್ಕಝು ಸ್ಸಖಾಫತಿ ಸ್ಸುನ್ನಿಯ್ಯಃ ಚಾನ್ಸಲರ್ ಸಿ.ಮುಹಮ್ಮದ್ ಫೈಝಿ ಅವರನ್ನು ನೇಮಕಮಾಡಲಾಯಿತು. ಉಪಾಧ್ಯಕ್ಷ ಡಾ.ಎಮ್ಮೆಸ್ಸೆಂ ಝೈನೀ ಕಾಮಿಲ್ ಉಧ್ಘಾಟಿಸಿದರು.ನಿಕಟಪೂರ್ವ ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಹ್ಮಾನ್ ಹಾಜಿ ಅರಿಯಡ್ಕ ಸ್ವಾಗತಿಸಿ ನೂತನ ಪ್ರಧಾನ ಕಾರ್ಯದರ್ಶಿ ಬಶೀರ್ ಇಂದ್ರಾಜೆ ಧನ್ಯವಾದ ಸಲ್ಲಿಸಿದರು. ಮರ್ಕಝ್ ಆಡಳಿತ ವಿಭಾಗದ ಅಧಿಕಾರಿಗಳಾದ ಅಬ್ದುಸ್ಸಮದ್ ಸಖಾಫಿ ಮಲಪ್ಪುರಂ, ದಿಲ್‌ಶಾದ್ ಅಲಿ, ಮುಹಮ್ಮದ್ ಶಬೀರ್ , ಕುಂಬ್ರ ಮರ್ಕಝ್ ಮೆನೇಜರ್ ಉಮರ್ ಅಂಜದಿ ಕುಕ್ಕಿಲ ಭಾಗವಹಿಸಿದರು.

error: Content is protected !! Not allowed copy content from janadhvani.com