janadhvani

Kannada Online News Paper

ಸೌದಿ: ಒಮ್ಮೆ ಪಾಲಿಸಿ ಪಡೆದರೆ, ನವೀಕರಿಸುವ ಅಗತ್ಯವಿಲ್ಲ- ಹೊಸ ‘ರಾಷ್ಟ್ರೀಯ ವಿಮೆ’ ಜಾರಿಗೆ

ಸಂಪೂರ್ಣವಾಗಿ ಸರ್ಕಾರದ ಅನುದಾನಿತ ವಿಮೆಯಾಗಿದ್ದು, ಯಾವುದೇ ನಿರ್ದಿಷ್ಟ ಸಮಯದ ಮಿತಿ ಇಲ್ಲದೆ, ಜೀವಮಾನವಿಡೀ ಮುಂದುವರಿಯಲಿದೆ.

ರಿಯಾದ್: ಸೌದಿ ಅರೇಬಿಯಾದಲ್ಲಿ ಜೀವಮಾನದ ಆರೋಗ್ಯ ವಿಮೆಯನ್ನು ಜಾರಿಗೊಳಿಸಲಾಗುತ್ತದೆ. 2024 ರ ಮಧ್ಯದ ವೇಳೆಗೆ ‘ರಾಷ್ಟ್ರೀಯ ವಿಮೆ’ ಹೆಸರಿನಲ್ಲಿ ಒಂದೇ ಪ್ರೀಮಿಯಂ ವಿಮೆಯನ್ನು ಜಾರಿಗೆ ತರಲಾಗುವುದು ಎಂದು ಆರೋಗ್ಯ ಸಚಿವ ಫಹದ್ ಅಲ್ ಜಲಾಜಿಲ್ ಹೇಳಿದ್ದಾರೆ. ರಿಯಾದ್‌ನಲ್ಲಿ ವಿಶ್ವ ಆರೋಗ್ಯ ವೇದಿಕೆಯ ಅಂಗವಾಗಿ ನಡೆದ ಸಭೆಯಲ್ಲಿ ಅವರು ಮಾತನಾಡಿದರು.

ಒಮ್ಮೆ ಪಾಲಿಸಿಯನ್ನು ಪಡೆದರೆ,ಅದನ್ನು ನವೀಕರಿಸುವ ಅಗತ್ಯವಿಲ್ಲ.ಸಂಪೂರ್ಣವಾಗಿ ಸರ್ಕಾರದ ಅನುದಾನಿತ ವಿಮೆಯಾಗಿದ್ದು, ಯಾವುದೇ ನಿರ್ದಿಷ್ಟ ಸಮಯದ ಮಿತಿ ಇಲ್ಲದೆ, ಜೀವಮಾನವಿಡೀ ಮುಂದುವರಿಯಲಿದೆ.ಅಲ್ಲದೆ ಚಿಕಿತ್ಸೆಗೂ ಯಾವುದೇ ನಿರ್ದಿಷ್ಟ ಮಿತಿಗಳನ್ನು ನಿಗದಿಪಡಿಸಲಾಗಿಲ್ಲ. ಇದಲ್ಲದೆ, ಪೂರ್ವಾನುಮತಿ ಅಗತ್ಯವಿಲ್ಲದೇ ಆರೋಗ್ಯ ಸಂಸ್ಥೆಗಳಿಂದ ಸೇವೆಗಳನ್ನು ಪಡೆಯಬಹುದು ಎಂದು ಸಚಿವರು ಹೇಳಿದರು.

ವ್ಯಕ್ತಿಯ ಜೀವನದ ಎಲ್ಲಾ ಹಂತಗಳಲ್ಲಿ ಆರೋಗ್ಯ ಸೌಲಭ್ಯಗಳನ್ನು ಒದಗಿಸುವುದಾಗಿದೆ ರಾಷ್ಟ್ರೀಯ ವಿಮೆಯ ಉದ್ದೇಶ. ಆರೋಗ್ಯ ಕ್ಲಸ್ಟರ್‌ಗಳ ಜಾಲದ ಮೂಲಕ ಸೇವೆಗಳನ್ನು ತಲುಪಿಸಲಾಗುವುದು.ಇದು ಸೌದಿ ನಾಗರಿಕರಿಗಾಗಿ ವಿಶೇಷ ಜಾಲವನ್ನು ಹೊಂದಿರುತ್ತದೆ. ಈ ಮೂಲಕ ಪ್ರತಿಯೊಬ್ಬ ನಾಗರಿಕರು ಅನೇಕ ಪ್ರಯೋಜನಗಳನ್ನು ಪಡೆಯಲಿದ್ದಾರೆ.

ನಾಗರಿಕರನ್ನು 80 ವರ್ಷ ವಯಸ್ಸಿನವರೆಗೆ ಆರೋಗ್ಯವಾಗಿ ಮತ್ತು ಸುರಕ್ಷಿತವಾಗಿರಿಸಲು, ಸಂಪೂರ್ಣ ಸದೃಢತೆ ಮತ್ತು ನಡೆಯಲು, ಓಡಲು ಮತ್ತು ಸಾಮಾನ್ಯ ಜೀವನವನ್ನು ನಡೆಸಲು ಸಾಧ್ಯವಾಗುವಂತೆ ಜೀವಮಾನದ ಆರೋಗ್ಯ ವಿಮೆಯು ಸಹಾಯ ಮಾಡಲಿದೆ.

error: Content is protected !! Not allowed copy content from janadhvani.com