janadhvani

Kannada Online News Paper

ಕೆಸಿಎಫ್ ರಿಯಾದ್ ಪ್ರವಾಸಿ ಸಂಗಮ-23 ಫ್ಯಾಮಿಲಿ ಗೆಟ್ ಟುಗೆದರ್

ಕರ್ನಾಟಕ ಕಲ್ಚರಲ್ ಫೌಂಡೇಶನ್ (ಕೆಸಿಎಫ್) ರಿಯಾದ್ ಝೋನ್ ವತಿಯಿಂದ ಅಕ್ಟೋಬರ್ 26ರಂದು “ಪ್ರವಾಸಿ ಸಂಗಮ-23” ಫ್ಯಾಮಿಲಿ ಗೆಟ್ ಟುಗೆದರ್ ಕಾರ್ಯಕ್ರಮವನ್ನು ಬಹಳ ವಿಜ್ರಂಭನೆಯಿಂದ ರಿಯಾದ್ ನಲ್ಲಿರುವ ಇಲೆಕ್ಟ್ರಾನಿಯಾ ಇಸ್ತಿರಾದಲ್ಲಿ ನಡೆಸಲಾಯಿತು.

ಕಾರ್ಯಕ್ರಮದ ಆರಂಭದಲ್ಲಿ ಮುಸ್ತಫಾ ಸಅದಿ ಹಾಗೂ ರಶೀದ್ ಮದನಿಯವರ ನೇತ್ರತ್ವದಲ್ಲಿ  ರಬೀಅ್-23 ಆತ್ಮೀಯ ಮಜ್ಲಿಸ್ ನಡೆಸಲಾಯಿತು.

ನಂತರ ಆಹಾರ, ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ, ಸಭಾಕಾರ್ಯಕ್ರಮ, ದಫ್ ಪ್ರದರ್ಶನ ಹಾಗೂ  ಆಕರ್ಷಕವಾದ ಆಟೋಟ ಸ್ಪರ್ಧೆಗಳೂ ನಡೆಯಿತು.

ರಿಯಾದ್ ಝೋನ್ ಅಧ್ಯಕ್ಷರಾದ ಮುಸ್ತಫಾ ಸಅದಿಯವರ ಅಧ್ಯಕ್ಷತೆಯಲ್ಲಿ ನಡೆದ ಸಭಾಕಾರ್ಯಕ್ರಮದಲ್ಲಿ ರಾಫೀ ಕಣ್ಣಂಗಾರ್ ರವರು ಖಿರಾಅತ್ ಓದಿ, ಮುಖ್ಯ ಅತಿಥಿಯಾಗಿ ಆಗಮಿಸಿದ ಕೆಸಿಎಫ್ ಅಂತರಾಷ್ಟ್ರೀಯ ಸಮಿತಿ ಅಧ್ಯಕ್ಷರಾದ ಡಿಪಿ ಯೂಸುಫ್ ಸಖಾಫಿ ಬೈತಾರ್ ರವರು ಉದ್ಘಾಟನೆ ಮಾಡಿದರು. ಸಂಘಟನೆಯು ಜಿಸಿಸಿ ರಾಷ್ಟ್ರಗಳಲ್ಲದೇ ಮಲೇಷಿಯಾ ಹಾಗೂ ಲಂಡನ್ ಗಳಲ್ಲೂ ಕಾರ್ಯಚರಿಸುತ್ತಿದೆ. ಇಲ್ಲಿ ಈಗ ರಾತ್ರಿಯಾದರೆ ಬೇರೆ ರಾಷ್ಟ್ರದಲ್ಲಿ ಹಗಲಾಗಿರುತ್ತದೆ. ಆದ್ದರಿಂದ ಕೆಸಿಎಫ್ ಸಂಘಟನೆಯು ದಿನದ 24 ಗಂಟೆಗಳೂ ಕಾರ್ಯಾಚರಣೆ ನಡೆಸುತ್ತಿರುತ್ತದೆ ಎಂದು ಅವರು ಉದ್ಘಾಟನಾ ಭಾಷಣದಲ್ಲಿ ತಿಳಿಸಿದರು.

ದಶ ವಾರ್ಷಿಕವನ್ನು ಆಚರಿಸುತ್ತಿರುವ ಕೆಸಿಎಫ್ ಸಂಘಟನೆಯು ನಡೆಸಿಕೊಂಡು ಬಂದಂತಹ ಕಾರ್ಯಾಚರಣೆ ಹಾಗೂ ಮುಂದಿನ ಯೋಜನೆಗಳ ಮಾಹಿತಿಯನ್ನು ವಿವರಿಸಿ ಸೌದಿ ಅರೇಬಿಯಾ ರಾಷ್ಟ್ರೀಯ ನೇತಾರರಾದ ಸಿದ್ದೀಕ್ ಸಖಾಫಿ ಪೆರುವಾಯಿಯವರು ದಿಕ್ಸೂಚಿ ಭಾಷಣ ಮಾಡಿದರು.

ಕೆಸಿಎಫ್ ಸೌದಿ ಅರೇಬಿಯಾ ಅಧ್ಯಕ್ಷರಾದ ನಝೀರ್ ಹಾಜಿ ಕಾಶಿಪಟ್ನ, ಪ್ರಧಾನ ಕಾರ್ಯದರ್ಶಿ ಸಾಲಿ ಬೆಳ್ಳಾರೆ, ಹಿತೈಷಿಗಳಾದ ಡಾ| ಲತೀಫ್ ಯುನಿವರ್ಸಲ್, ಸಾಮಾಜಿಕ ಕಾರ್ಯಕರ್ತರಾದ ಶಿಹಾಬ್ ಕೊಟ್ಟುಕಾಡ್ ರವರು ಶುಭಾಶಯ ಮಾತುಗಳನ್ನಾಡಿದರು.

ವೇದಿಕೆಯಲ್ಲಿ ಕೆಸಿಎಫ್ ಅಂತರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸದಸ್ಯರಾದ ಉಮರ್ ಅಳಕೆಮಜಲು, ರಾಷ್ಟ್ರೀಯ ಕ್ಯಾಬಿನೆಟ್ ಸದಸ್ಯರಾದ ಯಾಖೂಬ್ ಸಖಾಫಿ, ಖಾದರ್ ಕಣ್ಣಂಗಾರ್,ಕೆಸಿಎಫ್ ಕತ್ತರ್ ರಾಷ್ಟ್ರೀಯ ನೇತಾರರಾದ ಹಸೈನಾರ್ ಕಾಟಿಪಳ್ಳ, NT ಕಾರ್ಗೊ ಮುಖ್ಯಸ್ಥರಾದ ಅಶ್ರಫ್ ಕೊಪ್ಪ, ಪ್ರವಾಸಿ ಸಂಗಮ ಸ್ವಾಗತ ಸಮಿತಿ ಚೇರ್ಮಾನ್ ಇಸ್ಮಾಯಿಲ್ ಕಣ್ಣಂಗಾರ್, ಕನ್ವೀನರ್ ಸಲಾಮ್ ಹಳೆಯಂಗಡಿ, ಫೈನಾನ್ಷಿಯಲ್‌ ಕಂಟ್ರೋಲರ್ ಹಂಝಾ ಮೈಂದಾಳ ಇವರು ಗಣ್ಯ ಉಪಸ್ಥಿತರಿದ್ದರು.

ಬಶೀರ್ ತಲಪ್ಪಾಡಿಯವರು ನಿರೂಪಣೆ ಮಾಡಿದ ಕಾರ್ಯಕ್ರಮಕ್ಕೆ ಝೋನ್ ಪ್ರಧಾನ ಕಾರ್ಯದರ್ಶಿ ಅಶ್ರಫ್ ಕಿಲ್ಲೂರು ಸ್ವಾಗತಿಸಿ ಅಬ್ದುಲ್ ಸಲಾಂ ಎಣ್ಮೂರು ರವರು ಧನ್ಯವಾದಗೈದರು.

ಸಭಾ ಕಾರ್ಯಕ್ರಮದ ನಂತರ ಆಕರ್ಷನೀಯ ಡಿಜಿಟಲ್ ಕ್ವಿಝ್ ಹಾಗೂ ಕ್ರೀಡಾ ಕಾರ್ಯಕ್ರಮಗಳನ್ನು ನಡೆಸಲಾಯಿತು.

ರಾತ್ರಿ 08 ಗಂಟೆಯಿಂದ ಆರಂಭಿಸಿ ಮುಂಜಾನೆ 04 ಗಂಟೆಯ ವರೆಗೆ ನಡೆದ ಕಾರ್ಯಕ್ರಮದಲ್ಲಿ ಸರಿಸುಮಾರು 1,400ರಷ್ಟು ಜನರು ಸೇರಿದ್ದರು ಎಂದು ಸಂಘಟಕರು ಜನಧ್ವನಿ ವಾರ್ತೆಗೆ ತಿಳಿಸಿದ್ದಾರೆ.

error: Content is protected !! Not allowed copy content from janadhvani.com