ರಿಯಾದ್- ಸೌದಿ ಅರೇಬಿಯಾಯದಲ್ಲಿ ವಾಹನಗಳ ನೋಂದಣಿ (ಇಸ್ತಿಮಾರಾ) ನವೀಕರಿಸಲು ಮತ್ತು ಪಡೆಯಲು ವಾರ್ಷಿಕ ಶುಲ್ಕ ಜಾರಿಗೆ ಬಂದಿದೆ. ಪರಿಚಯಿಸಿದೆ ಮೊದಲ ಹಂತದಲ್ಲಿ, ಇಂಧನ ದಕ್ಷತೆಯ ಆಧಾರದ ಮೇಲೆ 2024 ಮಾದರಿಯ ಸಣ್ಣ ವಾಹನಗಳಿಗೆ ಶುಲ್ಕ ವಿಧಿಸಲಾಗುತ್ತದೆ. ಇದರ ಪ್ರಕಾರ, ಪ್ರತಿ ವರ್ಷ ಗರಿಷ್ಠ 190 ರಿಯಾಲ್‌ಗಳಷ್ಟು ಹೆಚ್ವುವರಿಯಾಗಿ ಪಾವತಿಸಬೇಕಾಗುತ್ತದೆ.
ವಾಣಿಜ್ಯ ಸಚಿವಾಲಯ, SASO, ಝಕಾತ್ ತೆರಿಗೆ ಮತ್ತು ಕಸ್ಟಮ್ಸ್ ಪ್ರಾಧಿಕಾರ, ಜನರಲ್ ಟ್ರಾಫಿಕ್ ಇಲಾಖೆ, ರಾಷ್ಟ್ರೀಯ ಮಾಹಿತಿ ಕೇಂದ್ರ ಮತ್ತು ಸೌದಿ ಎನರ್ಜಿ ಎಫಿಷಿಯನ್ಸಿ ಸೆಂಟರ್ ಸಹಯೋಗದಲ್ಲಿ ಈ ಯೋಜನೆಯನ್ನು ಕಾರ್ಯಗತಗೊಳಿಸಲಾಗಿದೆ.
ಮುಂದಿನ ವರ್ಷ ಎರಡನೇ ಹಂತದಲ್ಲಿ, ಎಲ್ಲಾ ವಾಹನಗಳು ವಾರ್ಷಿಕ ಶುಲ್ಕ ಪಾವತಿಯ ವ್ಯಾಪ್ತಿಗೆ ಬರಲಿದೆ. ವಾಹನದ ಇಂಧನ ಬಳಕೆಗೆ ಅನುಗುಣವಾಗಿ ವಾರ್ಷಿಕ ಶುಲ್ಕವನ್ನು ಐದು ಹಂತಗಳಾಗಿ ವಿಂಗಡಿಸಲಾಗಿದೆ. ಆದ್ದರಿಂದ ಕಡಿಮೆ ಇಂಧನ ಬಳಕೆ ಹೊಂದಿರುವ ವಾಹನಗಳಿಗೆ ಯಾವುದೇ ಶುಲ್ಕ ವಿಧಿಸಲಾಗುವುದಿಲ್ಲ.
ಪ್ರತಿ ವಾಹನದ ಶುಲ್ಕದ ಮಾಹಿತಿಯು SASO ದ ‘ಮರ್ಕಬತೀ’ ಅಪ್ಲಿಕೇಶನ್ ಮೂಲಕ ಲಭಿಸಲಿದೆ.