ಸ್ವಾಗತ ಸಮಿತಿ ಚೆಯರ್ಮೇನ್ ಆಗಿ ಮೂಸ ಬಸರ ಹಾಜಿ ಆಯ್ಕೆ
ಉತ್ತರ ಕರ್ನಾಟಕದ ಮೊದಲ ಸಮನ್ವಯ ಶಿಕ್ಷಣ ಸಂಸ್ಥೆ ಮುಈನುಸುನ್ನಾ ವಿದ್ಯಾಸಂಸ್ಥೆ ಹಾವೇರಿ ಇದರ ದಶಮ ಸಂಭ್ರಮದ ಭಾಗವಾಗಿ ಶಾರ್ಜಾದಲ್ಲಿ ಇದೇ ಬರುವ ನವೆಂಬರ್ 3ರಂದು ಮುಹಬ್ಬತೇ ಜೀಲಾನಿ ಬೃಹತ್ ಸಮಾವೇಶ ನಡೆಯಲಿದೆ..
ಶಾರ್ಜಾ ರೋಲದಲ್ಲಿರುವ ನೂರುಲ್ ಹಿಲಾಲ್ ಪಾರ್ಟಿ ಹಾಲ್ ನಲ್ಲಿ ನಡೆಯಲಿರುವ ಈ ಬೃಹತ್ ಸಮಾವೇಶದಲ್ಲಿ ಮುಈನುಸುನ್ನಾ ವಿದ್ಯಾಸಂಸ್ಥೆ ಅಧ್ಯಕ್ಷರೂ, ಪೋಸೋಟ್ ತಂಙಳ್ ರವರ ಸುಪುತ್ರ ರಾದ ಸಯ್ಯಿದ್ ಶಹೀರ್ ಅಲ್ ಬುಖಾರಿ ಪೋಸೋಟ್ ತಂಙಳ್ ರವರು ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.
ಈ ಕಾರ್ಯಕ್ರಮ ನಿರ್ವಹಣೆಗಾಗಿ ಆಯ್ಕೆ ಮಾಡಿದ ಸ್ವಾಗತ ಸಮಿತಿಯ ಚೆಯರ್ಮೇನ್ ಆಗಿ ಮೂಸ ಬಸರ ಹಾಜಿ ಮಂಜನಾಡಿ,ಜನರಲ್ ಕನ್ವಿನರ್ ಆಗಿ ಶರೀಫ್ ಸಾಲೆತ್ತೂರು, ಕೋಶಾಧಿಕಾರಿ ಯಾಗಿ ಲತೀಫ್ ತಿಂಗಳಾಡಿ ಆಯ್ಕೆ ಯಾದರು.
ಕರೀಂ ಮುಸ್ಲಿಯಾರ್ ,ತೆಕ್ಕಾರ್ ರಫೀಕ್ ಮುಸ್ಲಿಯಾರ್ ವೈಸ್ ಚೆಯರ್ಮೇನ್ ಗಳಾಗಿ ,ಹಾಗು ಯು.ಟಿ ನೌಶಾದ್,ನಾಸಿರ್ ತಳಿಪರಂಬ್,ನಝೀರ್ ನೆಕ್ಕಿಲ್ ಕನ್ವಿನರ್ಸ್ ಗಳಾಗಿ ಆಯ್ಕೆ ಮಾಡಲಾಯಿತು.. ಮುಈನುಸುನ್ನಾ ದುಬೈ ಪ್ರೊವಿಷನಲ್ ಸಮಿತಿ ಅಧ್ಯರಾದ ಅಬ್ದುಲ್ಲಾ ಪೆರುವಾಯಿ ಯವರ ನಿವಾಸದಲ್ಲಿ ಮುಈನುಸುನ್ನಾ ಡೈರೆಕ್ಟರ್ ಕೆ.ಎಂ ಮುಸ್ತಫಾ ನಈಮಿ ಹಾವೇರಿ ಯವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಸಂಸ್ಥೆ ಯ ಕಾರ್ಯದರ್ಶಿ ಕಮಾಲುದ್ದೀನ್ ಅಂಬ್ಲಮೊಗರ್, ರಾಷ್ಟ್ರೀಯ ಅಧ್ಯಕ್ಷ ರಾದ ಅಶ್ರಫ್ ಸತ್ತಿಕ್ಕಲ್ ಉಪಸ್ಥಿತರಿದ್ದರು.