ರಿಯಾದ್- ಪಾಸ್‌ಪೋರ್ಟ್‌ಗಳ ಜನರಲ್ ಡೈರೆಕ್ಟರೇಟ್ (ಜವಾಝಾತ್) ಸೌದಿ ಅರೇಬಿಯಾದಲ್ಲಿ ತಂಗಿರುವ ವ್ಯಾಪಾರ, ಕುಟುಂಬ ಮತ್ತು ವೈಯಕ್ತಿಕ ಮುಂತಾದ ವಿವಿಧ ರೀತಿಯ ಭೇಟಿ ವೀಸಾಗಳನ್ನು ಹೊಂದಿರುವವರಿಗೆ ವೀಸಾ ನಿಯಮಗಳು ಮತ್ತು ನಿಬಂಧನೆಗಳನ್ನು ಕಟ್ಟುನಿಟ್ಟಾಗಿ ಅನುಸರಿಸಲು ಮತ್ತು ಅದರ ಅವಧಿ ಮುಗಿಯುವ ಏಳು ದಿನಗಳ ಮುಂಚಿತವಾಗಿ ಆನ್‌ಲೈನ್‌ನಲ್ಲಿ ಅದರ ಮಾನ್ಯತೆಯನ್ನು ವಿಸ್ತರಿಸಲು ಕರೆ ನೀಡಿದೆ. ನವೀಕರಣ ಉದ್ದೇಶಕ್ಕಾಗಿ ಜವಾಜತ್ ಕಚೇರಿಗಳಿಗೆ ಭೇಟಿ ನೀಡುವ ಅಗತ್ಯವಿಲ್ಲ ಎಂದು ಅದು ಸ್ಪಷ್ಟಪಡಿಸಿದೆ.
ಆಂತರಿಕ ಸಚಿವಾಲಯದ ಎಲೆಕ್ಟ್ರಾನಿಕ್ ಸೇವೆಗಳ ಪ್ಲಾಟ್‌ಫಾರ್ಮ್ ಅಬ್ಶೀರ್ ಅಫ್ರಾದ್, ಅಬ್ಶೀರ್ ಆಮಾಲ್ ಮತ್ತು ಮುಖೀಮ್ ವೇದಿಕೆಗಳ ಮೂಲಕ 180 ದಿನಗಳವರೆಗೆ ಆನ್‌ಲೈನ್‌ನಲ್ಲಿ ನವೀಕರಿಸಬಹುದು.ವೀಸಾವನ್ನು ವಿಸ್ತರಿಸಲು ಜವಾಝಾತ್ ಶುಲ್ಕ ಪ್ರತಿ ಪಾಸ್‌ಪೋರ್ಟ್‌ಗೆ 100 ರಿಯಾಲ್ ಆಗಿದೆ.
ಫಲಾನುಭವಿಯು ಅಬ್ಶೀರ್‌ನಲ್ಲಿ ತನ್ನ ಖಾತೆಯನ್ನು ನಮೂದಿಸಬೇಕು ಮತ್ತು ಭೇಟಿ ವೀಸಾ ವಿಸ್ತರಣೆಗಾಗಿ ಸೇವಾ ಶುಲ್ಕವನ್ನು ಪಾವತಿಸಬೇಕು. ವಿಸ್ತರಣೆಗಾಗಿ, ಭೇಟಿ ನೀಡುವವರು ಮಾನ್ಯವಾದ ವೈದ್ಯಕೀಯ ವಿಮೆಯನ್ನು ಹೊಂದಿರಬೇಕು. ನಿಗದಿತ ನಿಯಮಗಳು ಮತ್ತು ಷರತ್ತುಗಳಿಗೆ ಅನುಸಾರವಾಗಿ ವೀಸಾ ವಿಸ್ತರಣೆಯ ಕಾರ್ಯವಿಧಾನಗಳನ್ನು ಪೂರ್ಣಗೊಳಿಸಬೇಕು. ಭೇಟಿ ವೀಸಾದ ಒಟ್ಟು ವಿಸ್ತರಣೆಯ ಅವಧಿಯು 180 ದಿನಗಳನ್ನು ಮೀರಬಾರದು.180 ದಿನಗಳ ನಂತರ ನವೀಕರಿಸಲು, ಸೌದಿ ಅರೇಬಿಯಾದಿಂದ ಹೊರಗೆ ಹೋಗಿ ಹಿಂತಿರುಗಬೇಕು.
ಆನ್‌ಲೈನ್ ಸೇವೆಯ ಲಾಭ ಪಡೆಯಲು ಯಾವುದೇ ತೊಂದರೆಗಳನ್ನು ಎದುರಿಸಿದರೆ, ಅವರು ಅಬ್ಶೀರ್ ಪ್ಲಾಟ್‌ಫಾರ್ಮ್‌ನಲ್ಲಿ ಅದರ ಸಂವಹನ ಸೇವೆ (ತವಾಸುಲ್) ಮೂಲಕ ಜವಾಝಾತ್‌ಗೆ ದೂರು ಸಲ್ಲಿಸಬಹುದು ಎಂದು ನಿರ್ದೇಶನಾಲಯ ತಿಳಿಸಿದೆ. ನಿರ್ದೇಶನಾಲಯದ ವಿಶೇಷ ತಂಡವು ಪ್ರಕರಣವನ್ನು ಪರಿಶೀಲಿಸಿ SMS ಮೂಲಕ ದೂರಿನ ಸ್ಥಿತಿಯ ಬಗ್ಗೆ ಮಾಹಿತಿ ನೀಡಲಿದೆ ಎಂದು ನಿರ್ದೇಶನಾಲಯವು ಪ್ರಕಟಣೆಯಲ್ಲಿ ತಿಳಿಸಿದೆ.
ಈ ಹಿಂದೆ, ವೀಸಾ ವಿಸ್ತರಣೆಗಾಗಿ ಮೂರು ತಿಂಗಳಿಗೊಮ್ಮೆ ಸೌದಿ ಅರೇಬಿಯಾದಿಂದ ಹೊರಗೆ ಹೋಗಿ ಹಿಂತಿರುಗಬೇಕಿತ್ತು. ಏಕ ಪ್ರವೇಶ ಮತ್ತು ಬಹು ಪ್ರವೇಶವನ್ನು ಈಗ ಆನ್‌ಲೈನ್‌ನಲ್ಲಿ ನವೀಕರಿಸಬಹುದು. ಏಕ ಪ್ರವೇಶವನ್ನು ಪ್ರತಿ 30 ದಿನಗಳಿಗೊಮ್ಮೆ ಮತ್ತು ಬಹು ಪ್ರವೇಶವನ್ನು ಪ್ರತಿ 90 ದಿನಗಳಿಗೊಮ್ಮೆ ವಿಸ್ತರಿಸಬೇಕಾಗಿದೆ.
















ಇನ್ನಷ್ಟು ಸುದ್ದಿಗಳು
ಸೌದಿಯ ವೈಮಾನಿಕ ದಾಳಿ ಇರಾಕಿ ಜನತೆ ಅಥವಾ ಸರ್ಕಾರದ ವಿರುದ್ಧವಲ್ಲ- ಸೌದಿ ಅರೇಬಿಯಾ
ಇಸ್ರೇಲಿ ಉತ್ಪನ್ನಗಳ ಆಮದು ನಿಷೇಧ: ಐರ್ಲೆಂಡ್ ಕ್ರಮವನ್ನು ಸ್ವಾಗತಿಸಿದ ಕತಾರ್
ಪ್ರಾದೇಶಿಕ ಮಟ್ಟದಲ್ಲಿ ಅನಿಶ್ಚಿತತೆ: ಮೂರು ಗಲ್ಫ್ ದೇಶಗಳಿಗೆ ವಿಮಾನ ಸೇವೆ ಸ್ಥಗಿತ
ಅನಿವಾಸಿ ಭಾರತೀಯರ ಪಾಸ್ಪೋರ್ಟ್ ಶುಲ್ಕ ಹೆಚ್ಚಳ: ಮೂರು ವಾರಗಳಲ್ಲಿ ನಿರ್ಧಾರ ತಿಳಿಸುವಂತೆ ಕೇಂದ್ರಕ್ಕೆ ಕೋರ್ಟ್ ನಿರ್ದೇಶನ
ಹೋರ್ಮುಜ್ ಮೂಲಕ ಸುರಕ್ಷಿತ ಸಾರಿಗೆ- ಪ್ರಮುಖ ಚರ್ಚೆಗಾಗಿ ಇರಾನ್ಗೆ ತಲುಪಿದ ಒಮಾನ್ ನಿಯೋಗ
ಉಮ್ರಾ ಯಾತ್ರಿಕರಿಗೆ ಸಿಹಿ ಸುದ್ದಿ: ಒಂದು ವರ್ಷ ಕಾಲಾವಧಿಯ ‘ಮಲ್ಟಿ ಎಂಟ್ರಿ’ ಉಮ್ರಾ ವೀಸಾ ಬಿಡುಗಡೆ
ಭಾರತದ ವಿಮಾನ ಪ್ರಯಾಣಿಕರಿಗೆ ಸಿಹಿ ಸುದ್ದಿ: ಟಿಕೆಟ್ ದರಕ್ಕೆ ಮಾಸಿಕ ಕಂತಿನ ಸೌಲಭ್ಯ
ನಿಖರವಲ್ಲದ ಸುದ್ದಿ ಹಂಚಿಕೊಂಡರೆ ಅಪಾಯ- ನಕಲಿ ಸುದ್ದಿಗಳ ವಿರುದ್ಧ ಸೌದಿಯಲ್ಲಿ ಎಚ್ಚರಿಕೆ
ಸೌದಿ: ‘ಏಕೀಕೃತ ರಾಷ್ಟ್ರೀಯ ವೀಸಾ ಪ್ಲಾಟ್‌ಫಾರ್ಮ್’ ಅನುಷ್ಠಾನಕ್ಕೆ- ವೀಸಾ ಪ್ರಕ್ರಿಯೆಗಳು ಇನ್ನಷ್ಟು ಸುಲಭ
ಅಂತಾರಾಷ್ಟ್ರೀಯ ಸರ್ವೀಸ್ಗಳಲ್ಲಿ ದರ ಕಡಿತ – ಏರ್ ಇಂಡಿಯಾ ಎಕ್ಸ್ಪ್ರೆಸ್ ಘೋಷಣೆ