ರಿಯಾದ್: ಚಾಲಕ ಹುದ್ದೆಯಲ್ಲಿ ಸೌದಿ ಅರೇಬಿಯಾ ತಲುಪುವ ವಲಸಿಗರು ತಮ್ಮ ಸ್ವಂತ ದೇಶದಲ್ಲಿ ನೀಡಲಾದ ಅನುಮೋದಿತ ಪರವಾನಗಿಯೊಂದಿಗೆ ಸೌದಿ ಅರೇಬಿಯಾದಲ್ಲಿ ವಾಹನ ಚಲಾಯಿಸಬಹುದು. ಈ ಬಗ್ಗೆ ಸೌದಿ ಸಂಚಾರ ನಿರ್ದೇಶನಾಲಯ ಮಾಹಿತಿ ನೀಡಿದೆ.
ಸೌದಿ ಅರೇಬಿಯಾದಲ್ಲಿ ತಮ್ಮ ಸ್ವಂತ ದೇಶದ ಪರವಾನಗಿಗಳನ್ನು ಬಳಸಿಕೊಂಡು ಮೂರು ತಿಂಗಳ ಅವಧಿಗೆ ಮೀರದೆ ಚಾಲನೆ ಮಾಡಬಹುದು.
ಇದಕ್ಕಾಗಿ, ವಿದೇಶಿ ಚಾಲನಾ ಪರವಾನಗಿಯನ್ನು ಅಧಿಕೃತ ಕೇಂದ್ರದಿಂದ ಅನುವಾದಿಸಿ, ತಮ್ಮೊಂದಿಗೆ ಕೊಂಡೊಯ್ಯಬೇಕು. ಚಾಲನಾ ವೀಸಾದಲ್ಲಿ ಆಗಮಿಸುವ ವಿದೇಶಿಗರು ಓಡಿಸುವ ವಾಹನಕ್ಕೆ ಅನುಗುಣವಾದ ಪರವಾನಗಿ ಹೊಂದಿರಬೇಕು ಎಂಬ ಷರತ್ತು ಕೂಡ ಇದೆ. ವಿದೇಶದಲ್ಲಿ ಲಘು ವಾಹನ ಪರವಾನಗಿ ಹೊಂದಿರುವ ವ್ಯಕ್ತಿಯು ಸೌದಿ ಅರೇಬಿಯಾದಲ್ಲಿ ಅದೇ ವಾಹನವನ್ನು ಮಾತ್ರ ಓಡಿಸಬಹುದು. ಹೆವಿ ಲೈಸನ್ಸ್ ಹೊಂದಿರುವವರು ಭಾರೀ ವಾಹನಗಳನ್ನು ಓಡಿಸಬಹುದು.