ಇದು ವಿಜ್ಞಾನದ ಶತಮಾನವಾಗಿದೆ ವಿದ್ಯೆಯಿಂದ ಜಗತ್ತನ್ನು ಗೆಲ್ಲಬಹುದೆಂದು ಜೀವಿಸಿ ತೋರಿಸಿಕೊಟ್ಟ ಮಹಾನರಾಗಿದ್ದರು ಸೆಯ್ಯದ್ ತಾಜುಲ್ ಉಲಮಾರವರು ಎಂದು ತಾಜುಲ್ ಉಲಮಾ ಎಜ್ಯುಕೇಶನಲ್ ಟ್ರಸ್ಟ್ ಸ್ಥಾಪಕರೂ ಆದ ಸೈಯದ್ ಮುಹಮ್ಮದ್ ಶಿಹಾಬುದ್ದೀನ್ ಅಲ್ ಮಶ್ಹೂರ್ ತಂಙಲ್ ಹೇಳಿದರು.
ಅವರು ಕರ್ನಾಟಕ ಕಲ್ಚರಲ್ ಫೌಂಡೇಶನ್ KCF “ಜಗತ್ತಿಗೆ ಕರುಣೆಯ ಪ್ರವಾದಿ (ﷺ)” ಎಂಬ ಪ್ರಮೇಯದಲ್ಲಿ ಸೌದಿ ಅರೇಬಿಯಾದಾದ್ಯಂತ ನಡೆಸುತ್ತಿರುವ ರಬೀಅ್-23 ಕಾರ್ಯ ಕ್ರಮದ ಕೆ.ಸಿ.ಎಫ್ ಅಲ್ ಖಸೀಂ ಝೋನಿನ ಅಲ್ ರಾಸ್ ಯುನಿಟ್ ವೇದಿಕೆಯಲ್ಲಿ ನೇತೃತ್ವ ನೀಡಿ ಮಾತಾಡಿದರು.
ಅಕ್ಟೋಬರ್ 19 ಗುರುವಾರದಂದು ನಡೆದ ಸಭಾ ಕಾರ್ಯಕ್ರಮವು ಅಲ್ ರಾಸ್ ಸಿಟಿ ಯುನಿಟ್ ಅಧ್ಯಕ್ಷರಾದ ಶಂಸುದ್ದೀನ್ ಉಜಿರೆ ಬೆಟ್ಟುರವರ ಅಧ್ಯಕ್ಷತೆಯಲ್ಲಿ ಯಾಕೂಬ್ ಸಖಾಫಿ ಉಸ್ತಾದರ ದುವಾದೊಂದಿಗೆ ಐಸಿಎಫ್ ನೇತಾರ ಅಬ್ಬಾಸ್ ಸಖಾಫಿ ಉದ್ಘಾಟಿಸಿದರು ಕೆ.ಸಿ.ಎಫ್ ಸೌದಿ ರಾಷ್ಟ್ರೀಯ ಸಮಿತಿ ಪ್ರದಾನ ಕಾರ್ಯದರ್ಶಿ ಸಾಲಿ ಬೆಳ್ಳಾರೆ ಕೆ.ಸಿಎಫ್ ಸಂಘಟನೆಯು ನಡೆಸುತ್ತಿರುವ ಯೋಜನೆಗಳನ್ನು ವಿವರಿಸಿ ಆಶಂಸಾ ಮಾತುಗಳನ್ನಾಡಿದರು.
ಡಾII ಮುಹಮ್ಮದ್ ಮುತ್ತೇಡಂ, KMCC ನೇತಾರ ಶಿಹಾಬುದ್ದೀನ್ ಸಂದರ್ಭಕ್ಕನುಸಾರವಾಗಿ ಮಾತಾಡಿದರು.
ಮುಹಮ್ಮದ್ ನಝೀರ್ ದಾರಿಮಿ ಅರ್ಥ ಪೂರ್ಣವಾದ ಮದುಹುರ್ರಸೂಲ್ ಪ್ರಬಾಷಣ ನಡೆಸಿದರು1CF, RSC ನೇತಾರರು ಭಾಗವಹಿಸಿದರು.
ಬಶೀರ್ ಕನ್ಯಾನ ನಿರೂಪಣೆಗೈದ ಕಾರ್ಯ ಕ್ರಮವನ್ನು ಹಸನ್ ಮದನಿ ಸ್ವಾಗತಿಸಿ ವಂದಿಸಿದರು