ಮಂಗಳೂರು: ಎಸ್ ವೈ ಎಸ್ ಕರ್ನಾಟಕ ಇದರ ಮೂವತ್ತನೇ ವಾರ್ಷಿಕ ಮಹಾ ಸಮ್ಮೇಳನವು 2024 ಜನವರಿ 24ರಂದು ಮಂಗಳೂರಿನಲ್ಲಿ ನಡೆಯಲಿದ್ದು ಅದರ ಭಾಗವಾಗಿ ದ. ಕ ಜಿಲ್ಲೆ ವೆಸ್ಟ್ ವತಿಯಿಂದ ನವಂಬರ್ ತಿಂಗಳ ಲ್ಲಿ ಯುವಜನೋತ್ಸವವು ಹಮ್ಮಿಕೊಂಡಿದ್ದು ಅದರ ಪ್ರಚಾರಾರ್ಥವಾಗಿ ದ. ಕ ಜಿಲ್ಲಾ ವೆಸ್ಟ್ ಇದರ ವ್ಯಾಪ್ತಿಯಲ್ಲಿರುವ ಯುನಿಟ್ ಕಾರ್ಯ ಕರ್ತರನ್ನು ಸರ್ಕಲ್ ಮಟ್ಟದಲ್ಲಿ ಸೇರಿಸಿ ಯುನಿಟ್ಸ್ ಹೋಮೋನ್ ಕಾರ್ಯ ಕ್ರಮವು ಅಕ್ಟೋಬರ್ 19ರಿಂದ 29ರ ತನಕ ನಡೆಯಲಿದೆ.
ಇದರ ಜಿಲ್ಲಾ ಮಟ್ಟದ ಉದ್ಘಾಟನಾ ಸಮಾರಂಭ ವು ನಾಳೆ (19/10/23) ಬಂಟ್ವಾಳ ಝೋನಿನ ಸಜಿಪ ಸರ್ಕಲ್ ಕೊಳಕ್ಕೆ ಯಲ್ಲಿ ರಾತ್ರಿ 7 ಗಂಟೆಗೆ ನಡೆಯಲಿದೆ. ಜಿಲ್ಲಾಧ್ಯಕ್ಷ ವಿ ಯು ಇಸಾಕ್ ಝುಹ್ರಿ, ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಹಿಮಾನ್ ಪ್ರಿಂಟೆಕ್, ಕೋಶಾಧಿಕಾರಿ ನಝೀರ್ ಮುಡಿಪು,ಖಲೀಲ್ ಮಾಲೀಕಿ, ಮಜೀದ್ ಸಖಾಫಿ ಅಮ್ಮುಂಜೆ, ತೌಸೀಫ್ ಸಅದಿ ಹರೇಕಳ
ಇಸ್ಮಾಯಿಲ್ ಮಾಸ್ಟರ್ ಮಂಜನಾಡಿ ಮುಂತಾದವರು ಭಾಗವಹಿಸಲಿದ್ದಾರೆ.