janadhvani

Kannada Online News Paper

ಗಲ್ಫ್ : ಕಠಿಣ ಉಷ್ಣಾಂಶದಲ್ಲಿ 16 ಗಂಟೆಗಳಷ್ಟು ದೀರ್ಘ ಉಪವಾಸ

ದುಬೈ: ಪವಿತ್ರ ಮಾಸ ರಂಝಾನ್ ಆರಂಭಗೊಂಡಿದೆ. ಯುಎಇಯಲ್ಲಿ ಉಷ್ಣಾಂಶವು ಕಠಿಣವಾಗಿರುವಂತೆಯೇ ರಂಝಾನ್ ಉಪವಾಸವು 15 ಗಂಟೆಗಳಷ್ಟು ದೀರ್ಘವಿದೆ.

ರಮಝಾನ್ ತಿಂಗಳ ಉಪವಾಸಕ್ಕಾಗಿ ಮಾನಸಿಕ ಮತ್ತು ದೈಹಿಕವಾಗಿ ಸನ್ನದ್ದರಾಗಿರುವ ವಿಶ್ವಾಸಿಗಳು ಹಸಿವು, ಬಾಯಾರಿಕೆ ಮತ್ತು ಭಾವನೆಗಳಿಂದ ದೂರವಿದ್ದು ದೇವರ ಮೆಚ್ಚುಗೆಯನ್ನು ಗಳಿಸಲು ಶ್ರಮಿಸುತ್ತಾರೆ.ದೀರ್ಘ ಉಪವಾಸದ ಸಮಯ ಅನಗತ್ಯ ಚರ್ಚೆ ಮತ್ತು ಕಾರ್ಯಗಳನ್ನು ತ್ಯಜಿಸಿ,ರಂಝಾನ್ ರಾತ್ರಿಯಲ್ಲಿ ಪಾಪಗಳನ್ನು ಮನ್ನಿಸುವಂತೆ ಅಲ್ಲಾಹನ ಮುಂದೆ ಕಣ್ಣೀರಿಳಿಸಿ ಪ್ರಾರ್ಥಿಸುತ್ತಾರೆ.

ಆತ್ಮಹರ್ಷದ ದಿನ ಮತ್ತು ರಾತ್ರಿಗಳನ್ನು ಸ್ವಾಗತಿಸಿರುವ ವಿಶ್ವಾಸಿಗಳು ಮೂವತ್ತು ದಿನಗಳವರೆಗೆ ವಿಶ್ರಾಂತಿ ಪಡೆಯದೆ ಅಲ್ಲಾಹನ ಆಜ್ಞೆಯನ್ನು ಪಾಲಿಸಲು ಮುನ್ನುಗ್ಗುತ್ತಾರೆ.

ಉಪವಾಸದ ದಿನಗಳನ್ನು ಸಂತೋಷದೊಂದಿ ಬರಮಾಡಿಕೊಳ್ಳಲು ಮಾನಸಿಕ ಮತ್ತು ದೈಹಿಕ ತಯಾರಿಯಲ್ಲಿದ್ದ ವಿಶ್ವಾಸಿಗಳು,ಮಾಡಿದ ಪಾಪಗಳನ್ನು ಪಶ್ಚಾತಾಪಪಟ್ಟು ದೇವರಲ್ಲಿ ಪ್ರಾರ್ಥಿಸುವುದು ಮತ್ತು ದಾನ ನೀಡುವುದರಲ್ಲಿ ದೃಷ್ಟಿ ಹಾಯಿಸಲಿದ್ದಾರೆ.

ಯುಎಇ ಯಲ್ಲಿನ ಮಸೀದಿ ಪರಿಸರದಲ್ಲಿ ಇಫ್ತಾರ್ ಔತಣಕೂಟವು ಸಕ್ರಿಯವಾಗಲಿವೆ.ಸಾಮಾಜಿಕ ಸಾಂಸ್ಕೃತಿಕ ಸಂಸ್ಥೆಗಳು ಮತ್ತು ವ್ಯಾಪಾರ ಸಂಸ್ಥೆಗಳು ಸೇರಿ ಇಫ್ತಾರ್ ಕೂಟಗಳನ್ನು ಸಂಘಟಿಸುತ್ತಾರೆ.

ರಾತ್ರಿ ತರಾವೀಹ್ ನಮಾಜಿನಲ್ಲಿ ಭಾಗವಹಿಸಿ, ನಿದ್ರೆ ತ್ಯಜಿಸಿ, ಅನ್ನ ಪಾನೀಯಗಳನ್ನು ನಿಯಂತ್ರಿಸುವಾಗ ಆಡಂಬರ, ಅನಾವಶ್ಯಕ ಕರ್ಚುಗಳನ್ನು ನಿಯಂತ್ರಿಸಿ ಬಡವರನ್ನು ಆರ್ಥಿಕವಾಗಿ ಸಹಕರಿಸುತ್ತಾ  ಒಂದು ಉನ್ನತ ಜೀವನಕ್ಕೆ ಕಾಲಿರಿಸಲು ಸಾಧ್ಯವಾಗುತ್ತದೆ.

ಸಮುದಾಯದ ಧಾರ್ಮಿಕ ವಿದ್ವಾಂಸರು ವಿಶ್ವಾಸಿ ಸಮೂಹಕ್ಕೆ ಹಿತೋಪದೇಶಗಳನ್ನು ನೀಡುತ್ತಾರೆ ರಮಝಾನನ್ನು ಸ್ವಾಗತಿಸಲು ಖರ್ಜೂರ ಹಣ್ಣುಗಳು, ಧಾನ್ಯಗಳು, ಪಾನೀಯಗಳು, ನೀರು, ಮೀನು, ಇತ್ಯಾದಿಗಳನ್ನು ಖರೀದಿಸಲು ಮಾರುಕಟ್ಟೆಗಳು ಸಕ್ರಿಯಗೊಂಡಿದೆ.

error: Content is protected !! Not allowed copy content from janadhvani.com