ಅಬುಧಾಬಿ: ರಮಝಾನಿನಲ್ಲಿ ಖಾಸಗಿ ವಲಯದ ಕೆಲಸದ ವೇಳಾಪಟ್ಟಿಯನ್ನು ಪ್ರಕಟಿಸಲಾಗಿದೆ.ಸರ್ಕಾರಿ ಮಾನವ ಸಂಪನ್ಮೂಲಗಳ ಫೆಡರಲ್ ಪ್ರಾಧಿಕಾರವು ರಮಝಾನಿನ ಕೆಲಸದ ಸಮಯವು ಸಾಮಾನ್ಯ ಕೆಲಸದ ಸಮಯಕ್ಕಿಂತ ಎರಡು ಗಂಟೆ ಕಡಿಮೆ ಎಂದು ತಿಳಿಸಿದೆ.
ಮಾನವ ಸಂಪನ್ಮೂಲ ಮತ್ತು ವಲಸೆ ಸಚಿವಾಲಯದ ನೌಕರರು ಬೆಳಿಗ್ಗೆ 9 ರಿಂದ ಮಧ್ಯಾಹ್ನ 2 ರ ತನಕ ಕೆಲಸ ಮಾಡಲಿದ್ದಾರೆ ಎಂದು ಸಚಿವ ನಾಸರ್ ಬಿನ್ ಥಾನಿ ಅಲ್ ಹಮ್ಲಿ ಹೇಳಿದರು
ಶಾಲೆಗಳು 5 ಗಂಟೆಗಳು ಕಾರ್ಯಾಚರಿಸಲಿದೆ.
ಪಾರ್ಕಿಂಗ್ ಸಮಯದಲ್ಲಿ ಬದಲಾವಣೆ:
ರಂಝಾನಿನ ಪಾರ್ಕಿಂಗ್ ಸಮಯವನ್ನು ಘೋಷಿಸಲಾಗಿದ್ದು,ಎರಡು ಹಂತಗಳಲ್ಲಿ ಪಾರ್ಕಿಂಗ್ ಶುಲ್ಕವನ್ನು ಏರ್ಪಡಿಸಲಾಗಿದೆ.ದುಬೈಯಲ್ಲಿ ಪಾರ್ಕಿಂಗ್ ಶುಲ್ಕ ಬೆಳಿಗ್ಗೆ 8 ರಿಂದ ಸಂಜೆ 6 ರ ವರೆಗೆ ಮತ್ತು ರಾತ್ರಿ 8 ರಿಂದ 12 ರವರೆಗೆ ಇರುತ್ತದೆ.
ಸಂಜೆ 6ರಿಂದ ರಾತ್ರಿ 8ರ ನಡುವೆ 2 ಗಂಟೆ ಉಚಿತ ಪಾರ್ಕಿಂಗ್ ಇರುತ್ತದೆ.
ಟೀಕೊಂ ಪ್ರದೇಶದಲ್ಲಿ ಬೆಳಿಗ್ಗೆ 8 ರಿಂದ ಸಂಜೆ 6 ರವರೆಗೆ ಪಾರ್ಕಿಂಗ್ ಶುಲ್ಕ ನೀಡಬೇಕು.ಮಲ್ಟಿ ಲೆವೆಲ್ ಪಾರ್ಕಿಂಗ್ ಕೇಂದ್ರಗಳಲ್ಲಿ ಸಾಮಾನ್ಯವಾಗಿ ಇರುವಂತೆ ಪಾರ್ಕಿಂಗ್ ಶುಲ್ಕವನ್ನು ವಿಧಿಸಲಾಗುತ್ತದೆ ಎಂದು ರೋಡ್ಸ್ ಮತ್ತು ಟ್ರಾನ್ಸ್ ಪೋರ್ಟ್ಸ್ ಅಥಾರಿಟಿ ಹೇಳಿದೆ.
ಇನ್ನಷ್ಟು ಸುದ್ದಿಗಳು
ಅಲ್ ಮದೀನತುಲ್ ಮುನವ್ವರ ಮೂಡಡ್ಕ ಬತ್ತಾ ಸಮಿತಿಗೆ ನೂತನ ಸಾರಥ್ಯ
ವಾಟ್ಸಾಪ್ ಬಳಕೆದಾರರಿಗೆ ಸೌದಿ ಹಣಕಾಸು ಸಚಿವಾಲಯ ಎಚ್ಚರಿಕೆ
ಝಂಝಂ ಲೇಬಲಿನಲ್ಲಿ ಸಾದಾ ನೀರು ವಿತರಣೆ – ವಿದೇಶೀಯರ ಬಂಧನ
ಸೌದಿ: ಕಾರ್ಮಿಕ ಕಾನೂನುಗಳಲ್ಲಿ ಮತ್ತಷ್ಟು ಬದಲಾವಣೆ- ಮಧ್ಯವರ್ತಿಗಳ ಮೂಲಕ ನೇಮಕಾತಿ ನಿಷಿದ್ಧ
ಕಾರು ಮತ್ತು ಬೀದಿಗಳಿಲ್ಲದ ನಗರ- ಸೌದಿಯಲ್ಲಿ ನಿರ್ಮಾಣ
ದುಬೈನಲ್ಲಿ ಸಿಲುಕಿದ್ದ ಸೌದಿ ಪ್ರಯಾಣಿಕರಿಗೆ ಆಸರೆಯಾದ ಕೆಸಿಎಫ್