ಕುವೈತ್ ಸಿಟಿ: ವಿದೇಶೀಯರ ಆರೋಗ್ಯ ಚಿಕಿತ್ಸೆ ಮತ್ತು ಮದ್ದಿನ ಶುಲ್ಕವನ್ನು ಹೆಚ್ಚಿಸಲಾಗಿಲ್ಲ. ವಿದೇಶೀಯರಿಂದ ಹೆಚ್ಚಿನ ಶುಲ್ಕವನ್ನು ಪಡೆಯದಂತೆ ಆರೋಗ್ಯ ಸಚಿವಾಲಯವು ದೇಶದಾದ್ಯಂತ ಎಲ್ಲಾ ಆಸ್ಪತ್ರೆಗಳು, ಕ್ಲಿನಿಕ್ ಗಳು ಮತ್ತು ಆರೋಗ್ಯ ಕೇಂದ್ರಗಳಿಗೆ ಕಠಿಣ ತಾಕೀತು ನೀಡಿದೆ.
ಕಳೆದ ಅಕ್ಟೋಬರ್ ನಂತರ ಯಾವುದೇ ಏರಿಕೆಯನ್ನು ಮಾಡಲಾಗಿಲ್ಲ. ವಿದೇಶಿಗಳ ವೈದ್ಯಕೀಯ ಪರೀಕ್ಷೆಗಾಗಿ ಆರೋಗ್ಯ ಸಚಿವಾಲಯದ ಅನುಮತಿಯಿಲ್ಲದೆ ಯಾರನ್ನೂ ಶುಲ್ಕ ಪಡೆಯಲು ಅನುಮತಿ ನೀಡಲಾಗುವುದಿಲ್ಲ ಎಂದು ಸಚಿವಾಲಯ ಸೂಚಿಸಿದೆ.
ವಿದೇಶಿ ರೋಗಿಗಳ ತಪಾಸಣೆ ಮತ್ತು ಔಷಧಿಗಳನ್ನು ನಿರ್ಧರಿಸುವ ಸಂಪೂರ್ಣ ಜವಾಬ್ದಾರಿ ವೈದ್ಯರದ್ದಾಗಿದೆ. ಎಂದು ಪ್ರಕಟಣೆ ತಿಳಿಸಿದೆ.
ಕಳೆದ ವರ್ಷ ವಿದೇಶಿ ಪ್ರಜೆಗಳ ಚಿಕಿತ್ಸೆಗಳಿಗೆ ಗಣನೀಯವಾದ ಹೆಚ್ಚಳವನ್ನು ಜಾರಿಗೆ ತಂದಿದೆ.ಹೆಚ್ಚುವರಿಯಾಗಿ, ಆರೋಗ್ಯ ಕೇಂದ್ರಗಳನ್ನು ಭೇಟಿ ಮಾಡಿದ ಪ್ರತೀ ಬಾರಿ, ಹೆಚ್ಚಿನ ಶುಲ್ಕವನ್ನು ಪಾವತಿಸಬೇಕಾಗುತ್ತದೆ.
ವಿದೇಶಿಗರು ಪ್ರತಿ ವರ್ಷ ತಮ್ಮ ಮನೆಗಳ ನವೀಕರಣದೊಂದಿಗೆ ಪ್ರತ್ಯೇಕ ವಿಮೆ ಶುಲ್ಕವನ್ನು ನೀಡಬೇಕಾಗುತ್ತದೆ. ವಿದೇಶಿ ಆರೋಗ್ಯ ಕೇಂದ್ರಗಳಲ್ಲಿ ವಿಕಿರಣಶಾಸ್ತ್ರದಂತಹ ಚಿಕಿತ್ಸೆಗೆ ಹೆಚ್ಚಿನ ಶುಲ್ಕವನ್ನು ನೀಡಬೇಕು.
ವಲಸಿಗರ ಶುಲ್ಕ ಹೆಚ್ಚಳದ ನಂತರ ಸರ್ಕಾರೀ ಆಸ್ಪತ್ರೆಗಳಲ್ಲಿನ ರೋಗಿಗಳ ಸಂಖ್ಯೆಯಲ್ಲಿ ಗಮನಾರ್ಹ ಕುಸಿತವನ್ನು ತೋರಿಸಿದೆ.
ಏತನ್ಮಧ್ಯೆ,ತೆರಿಗೆ ಮತ್ತು ವ್ಯಾಟ್ ಗಳನ್ನು ಜಾರಿಗೆ ತರಲು GCC ಯ ನಿರ್ಧಾರವನ್ನು 2021 ರವರೆಗೆ ವಿಸ್ತರಿಸಲಾಗುವುದು ಎಂದು ಕುವೈಟ್ ರಾಷ್ಟ್ರೀಯ ಸಲಹಾ ಹಣಕಾಸು ಸಮಿತಿ ಅಧ್ಯಕ್ಷ ಅದ್ನಾನ್ ಅಬ್ದುಲ್ ಸಮದ್ ಎಂ.ಪಿ. ಅವರು ಹಣಕಾಸು ಸಚಿವಾಲಯಕ್ಕೆ ತಿಳಿಸಿದರು.
ಹಣಕಾಸು ಸಚಿವ ನಯೀಫ್ ಅಲ್-ಹಜ್ರಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ, 5% ವ್ಯಾಟ್ ನ ಪ್ರಸ್ತಾಪವನ್ನು ಅಕ್ಟೋಬರ್ ನಲ್ಲಿ ಚರ್ಚಿಸಲಾಗುವುದು ಎಂದು ತಿಳಿಸಿದ್ದಾರೆ.