janadhvani

Kannada Online News Paper

ಖ್ಯಾತ ವಿದ್ವಾಂಸ, ಮುಫ್ತಿ ಅನ್ವರ್ ಅಲಿ ಖಾದಿರಿ ನಿಧನ- ಸಂತಾಪ

ಮುಫ್ತಿಯವರ ಕುಟುಂಬಸ್ಥರು, ಶಿಷ್ಯರು ಆಗಮನ ಆಗಬೇಕಾದ್ದರಿಂದ ಮಹಾನರ ಮಯ್ಯತ್ ದಫನ ನಾಳೆ ಬೆಳಿಗ್ಗೆ 11ಗಂಟೆಗೆ ರಾಮನಗರದಲ್ಲಿ ನಡೆಯಲಿದೆ.

ಬೆಂಗಳೂರು: ಕರ್ನಾಟಕ ಮುಸ್ಲಿಂ ಜಮಾಅತ್ ಇದರ ಪ್ರಥಮ ರಾಜ್ಯಾಧ್ಯಕ್ಷರಾಗಿದ್ದ ಸುನ್ನೀ ಉಲಮಾ ಬೋರ್ಡ್ ರಾಜ್ಯಾಧ್ಯಕ್ಷರೂ ಆಗಿರುವ ಮುಫ್ತಿ ಏ ಕರ್ನಾಟಕ ಮುಫ್ತಿ ಅನ್ವರ್ ಅಲಿ ಖಾದ್ರಿ ರಝ್ವಿ ರಾಮನಗರ ಇಂದು ನಿಧನರಾಗಿದ್ದಾರೆ.

ಮಾಜಿ ವಖ್ಫ್ ಬೋರ್ಡ್ ಅಧ್ಯಕ್ಷ ಮೌಲಾನ ಶಾಫಿ ಸಅದಿ ಸಂತಾಪ

ಮುಫ್ತಿ ಅನ್ವರ್ ಅಲಿ ಖಾದ್ರಿ ರಝ್ವಿ ಮುಸ್ಲಿಂ ಜಮಾಅತ್ ರಾಜ್ಯಾಧ್ಯಕ್ಷರಾಗುದರೊಂದಿಗೆ ಹನಫಿ ವಲಯದಲ್ಲಿ ದೊಡ್ಡ ಮಟ್ಟಿಗೆ ಸಂಘಟನೆ ವಿಸ್ತಾರ ಪಡೆದುಕೊಂಡು ಜನರಿಗೆ ತಲುಪುವಲ್ಲಿ ಯಶಸ್ವಿಯಾಗಿತ್ತು. ಲಕ್ಷಾಂತರ ಅನುಯಾಯಿಗಳಿರುವ ಮುಫ್ತಿ, ಕರ್ನಾಟಕ ರಾಜ್ಯದ 25ಜಿಲ್ಲೆಗಳಿಗೆ ಕರ್ನಾಟಕ ಮುಸ್ಲಿಂ ಜಮಾಅತ್ ಅನ್ನು ತಲುಪಿಸಲು ದೊಡ್ಡ ಶಕ್ತಿಯಾಗಿ ಕಾರ್ಯಾಚರಿಸಿದರು.

ಬಹಳಷ್ಟು ಆತ್ಮೀಯರಾಗಿದ್ದ ಮಹಾನರು ಕಳೆದ 1 ವರ್ಷದಿಂದ ಅನಾರೋಗ್ಯಕ್ಕೀಡಾಗಿದ್ದರು. ಅನಾರೋಗ್ಯ ಕಾಡುತ್ಚಿದ್ದರೂ ದೂರವಾಣಿ ಮೂಲಕ ನಿರಂತರ ಸಂಪರ್ಕ ಮಾಡಿ ಸುನ್ನೀ ಸಂಘಟನೆಯ ಚಲನವಲನದ ಬಗ್ಗೆ ಚರ್ಚೆ ನಡೆಸುತ್ತಿದ್ದರು. ಕಳೆದ ವಾರ ಬೆಂಗಳೂರು ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ತನ್ನ ಪುತ್ರ ಖಾಜ ನನಗೆ ಕರೆ ಮಾಡಿ,ತಂದೆಯವರಿಗೆ ನಿಮ್ಮಂದಿಗೆ ಮಾತನಾಡಬೇಕಂತೆ ಎಂದು ಹೇಳಿದರು. ನಾನು ತಕ್ಷಣ ಆಸ್ಪತ್ರೆಗೆ ಭೇಟಿ ನೀಡಿದೆ.1 ಘಂಟೆಗಳ ಕಾಲ ಸುಧೀರ್ಘವಾಗಿ ಮಾತನಾಡಿದರು. ಕರ್ನಾಟಕದ ಸುನ್ನೀ ಸಂಘ ಶಕ್ತಿಯ ಶಾಕ್ತೀಕರಣದ ವಸಿಯ್ಯತ್ಗಾಗಿತ್ತದು ಎಂದು ಗೊತ್ತಾಗಿರಲಿಲ್ಲ.

ದಿನಾಂಕ ನಾಲ್ಕರಂದು ಅವರ ನಾಯಕತ್ವದಲ್ಸಿ ಸುನ್ನೀ ಉಲಮಾ ಬೋರ್ಡಿನ ಪ್ರಮುಖ ಸಭೆಯೊಂದು ನಡೆಯಲಿಕ್ಕಿತ್ತು. 4 ದಿವಸಗಳ ಮುಂಚೆ ದೂರವಾಣಿ ಮೂಲಕ ಸಭೆಯ ಬಗ್ಗೆ ಸುಧೀರ್ಘವಾಗಿ ಮಾತನಾಡಿದ್ದೆವು. ಭೇಟಿಯಾದಾಗಲೆಲ್ಲಾ ಪ್ರೀತಿಯಿಂದ ಮಾತನಾಡಿಸಿ ದುಆ ಮಾಡುತ್ತಿದ್ದದ್ದು ನನ್ನ ಪಾಲಿಗೆ ದೊಡ್ಡ ಆಶ್ವಾಸನೆ ಮತ್ತು ಧೈರ್ಯ ತುಂಬುವ ನಾಯಕತ್ವ ಆಗಿತ್ತು.

ಮುಫ್ತಿಯವರ ಕುಟುಂಬಸ್ಥರು, ಶಿಷ್ಯರು ಆಗಮನ ಆಗಬೇಕಾದ್ದರಿಂದ ಮಹಾನರ ಮಯ್ಯತ್ ದಫನ ನಾಳೆ ಬೆಳಿಗ್ಗೆ 11ಗಂಟೆಗೆ ರಾಮನಗರದಲ್ಲಿ ನಡೆಯಲಿದೆ. ಎಲ್ಲಾ ನಾಯಕರು, ಕಾರ್ಯಕರ್ತರು ಮಹಾನರ ಮಗ್ಫಿರ್ತ್ಗಾಗಿ ಪ್ರಾರ್ಥಿಸುವಂತೆ ತಮ್ಮ ಸಂತಾಪ ಸೂಚನೆಯಲ್ಲಿ ಶಾಫಿ ಸಅದಿಯವರು ವಿನಂತಿಸಿದ್ದಾರೆ.

—————————————————–

✍️ ಹಾಫಿಝ್ ಸುಫ್ಯಾನ್ ಸಖಾಫಿ ಅಲ್ ಹಿಕಮಿ
(ರಾಜ್ಯಾಧ್ಯಕ್ಷರು ಎಸ್ಸೆಸ್ಸೆಫ್ ಕರ್ನಾಟಕ)

ಕರ್ನಾಟಕ ಮುಸ್ಲಿಂ ಜಮಾಅತ್ ಇದರ ಪ್ರಥಮ ರಾಜ್ಯಾಧ್ಯಕ್ಷರಾಗಿದ್ದ ತುಂಬಾ ವರ್ಷಗಳ ಕಾಲ ಎಸ್ಸೆಸ್ಸೆಫ್ ನಿರ್ದೇಶಕರೂ ಆಗಿದ್ದ, ನಮ್ಮ ಸಂಘಟನೆಯ ಕಾರ್ಯವೈಖರಿಗಳ ಜೊತೆ ಯಾವತ್ತೂ ಜೊತೆಗೆ ನಿಲ್ಲುತ್ತಿದ್ದ ಖ್ಯಾತ ಸುನ್ನೀ ಹನಫಿ ವಿದ್ವಾಂಸ ಮುಫ್ತಿಯೇ ಕರ್ನಾಟಕ , ಮುಫ್ತಿ ಅನ್ವರುಲ್ ಖಾದಿರಿ ರಾಮನಗರ ಇಂದು ನಿಧನರಾದರು. ಇನ್ನಾಲಿಲ್ಲಾಹ್….
ಈ ಬಾರಿ ಗೋಲ್ಡನ್ ಫಿಫ್ಟಿ ಮಹಾ ಸಮ್ಮೇಳನಕ್ಕೆ ಆಹ್ವಾನ ನೀಡುವಾಗಲೂ ತನ್ನ ಅನಾರೋಗ್ಯದ ಕಾರಣ ಹೊರಗೆ ಬರಲು ಅಸಾಧ್ಯವಿದೆ ಎಂದು ಹೇಳಿ ಬಹಳಷ್ಟು ದುಆ ಮಾಡಿ ಕೊಟ್ಟು ಹಾರೈಸಿದ್ದರು. ಯಾವುದೇ ತರ್ಕ ತಕರಾರುಗಳಿಗೆ ನಿಲ್ಲದೆ ದೀನಿ ಖಿದ್‌ಮತ್ ಮಾಡುವ ಎಲ್ಲಾ ಸುನ್ನಿಗಳಿಗೆ ಮಾರ್ಗದರ್ಶನ ನೀಡುತ್ತಿದ್ದ ಅವರು ನಮ್ಮೆಲ್ಲಾ ಉಲಮಾಗಳ ಜೊತೆ ನಿಕಟವಾದ ಸಂಪರ್ಕದಲ್ಲಿದ್ದರು. ನಮ್ಮ ಸಂಘಟನೆಯ ಬಹಳಷ್ಟು ವೇದಿಕೆಗಳಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಮಹಾನುಭಾವರು ಇದೀಗ ಪವಿತ್ರ ರಬೀಇನ ಪುಣ್ಯ ತಿಂಗಳಲ್ಲಿ ನಮ್ಮನ್ನಗಲಿದ್ದಾರೆ.
ಅಲ್ಲಾಹು ಮಹಾನುಭಾವರ ಖಬರ್ ಸಂತೋಷ ಮಾಡಿ ಕೊಡಲಿ, ಅವರ ಜೊತೆ ನಾಳೆ ಸ್ವರ್ಗದಲ್ಲಿ ನಮ್ಮನ್ನು ಒಟ್ಟು ಸೇರಿಸಿ ಅನುಗ್ರಹಿಸಲಿ -ಆಮೀನ್

error: Content is protected !! Not allowed copy content from janadhvani.com