ಮಸ್ಕತ್: ಒಮಾನ್‌ನಲ್ಲಿ ಕೈದಿಗಳಿಗೆ ಪ್ರವಾದಿ ﷺ ರವರ ಜನ್ಮ ದಿನದ ಉಡುಗೊರೆ. ಪ್ರವಾದಿ ﷺ ರವರ ಜನ್ಮ ದಿನಾಚರಣೆ ಸಂದರ್ಭದಲ್ಲಿ, ಒಮಾನ್ ಸುಲ್ತಾನ್ ಹೈಥಮ್ ಬಿನ್ ತಾರಿಕ್ ಜೈಲಿನಲ್ಲಿರಿಸಿರುವ ಅನೇಕ ಮಂದಿಗೆ ಕ್ಷಮಿಸಿ ಬಿಡುಗಡೆ ಮಾಡಿದರು.
ಒಮಾನ್ ಸುಲ್ತಾನ್, ವಿವಿಧ ಪ್ರಕರಣಗಳಲ್ಲಿ ಶಿಕ್ಷೆಗೊಳಗಾದ 94 ಮಂದಿ ಅನಿವಾಸಿಗಳು ಸಹಿತ 162 ಜನರಿಗೆ ಕ್ಷಮಾದಾನ ನೀಡಿದ್ದಾರೆ.
ವಿವಿಧ ಹಬ್ಬಾಚರಣೆಗಳ ಸಂದರ್ಭದಲ್ಲಿ, ಒಮಾನ್ ಈ ರೀತಿ ಅನೇಕ ಕೈದಿಗಳನ್ನು ಬಿಡುಗಡೆ ಮಾಡಿ, ಆಶ್ವಾಸನೆ ನೀಡುತ್ತಿದೆ.