ಜಿದ್ದಾ : ಉತ್ತರ ಕರ್ನಾಟಕದ ಶೈಕ್ಷಣಿಕ ಚಳುವಳಿಯಲ್ಲಿ ಮಾದರೀ ಕಾರ್ಯಾಚರಣೆ ಮಾಡುತ್ತಿರುವ ಮಸ್‌ದರ್ ಎಜ್ಯು ಆಂಡ್ ಚಾರಿಟಿ ಇದರ ಪ್ರಚಾರ ಸಭೆ ಹಾಗೂ ಮಸ್‌ದರ್ ಜಿದ್ದಾ ಸಮಿತಿ ರಚನೆ ಯಶಸ್ವಿಯಾಗಿ ನಡೆಯಿತು.
ಸಯ್ಯಿದ್ ಅಬ್ದುರ್ರಹ್ಮಾನ್ ಉಚ್ಚಿಲ ರವರ ನೇತೃತ್ವದಲ್ಲಿ ನಡೆದ ಸಭೆಯನ್ನು ಸುಲೈಮಾನ್ ಸಅದಿ ಸೋಮವಾರಪೇಟೆ ಉದ್ಘಾಟಿಸಿದರು. ಕರ್ನಾಟಕ ಮುಸ್ಲಿಂ ಜಮಾಅತ್ ರಾಜ್ಯ ಪ್ರಧಾನ ಕಾರ್ಯದರ್ಶಿ ಮೌಲಾನಾ ಅಬೂ ಸುಫ್ಯಾನ್ ಮದನಿ ಮೀಲಾದ್ ಸಂದೇಶವನ್ನು ನೀಡಿದರು. ಎಸ್ಸೆಸ್ಸೆಫ್ ರಾಜ್ಯಾಧ್ಯಕ್ಷ ಹಾಫಿಝ್ ಸುಫ್ಯಾನ್ ಸಖಾಫಿ ಅಲ್ ಹಿಕಮಿ ಮಸ್‌ದರ್ ಕಾರ್ಯವೈಖರಿ ಬಗ್ಗೆ ಮಾಹಿತಿ ನೀಡಿದರು.ಜೊತೆಗೆ ಮಸ್‌ದರ್ ಜಿದ್ದಾ ಸಮಿತಿ ಅಸ್ತಿತ್ವಕ್ಕೆ ತರಲಾಯಿತು.
ನಿರ್ದೇಶಕರಾಗಿ ಫಾರೂಖ್ ಸಅದಿ, ಗೌರವಾಧ್ಯಕ್ಷರಾಗಿ ಸಯ್ಯಿದ್ ಅಬ್ದುರ್ರಹ್ಮಾನ್ ಉಚ್ಚಿಲ ಹಾಗೂ ಸಮಿತಿಯ ಅಧ್ಯಕ್ಷರಾಗಿ ಅಬ್ದುರ್ರಹ್ಮಾನ್ ಗಂಟಾಲ್‌ಕಟ್ಟೆ ಪ್ರಧಾನ ಕಾರ್ಯದರ್ಶಿಯಾಗಿ ಮನ್ಸೂರ್ ಕಾಟಿಪಳ್ಳ ಹಾಗೂ ಕೋಶಾಧಿಕಾರಿಯಾಗಿ ರಫೀಕ್ ಎರ್ಮಾಳು ರವರನ್ನು ಆಯ್ಕೆ ಮಾಡಲಾಯಿತು.
ಉಪಾಧ್ಯಕ್ಷರುಗಳಾಗಿ ಸುಲೈಮಾನ್ ಸಅದಿ ಸೋಮವಾರಪೇಟೆ, ಫಾರೂಖ್ ಕಾಟಿಪಳ್ಳ, ಎಂಎಸ್ಎಂ ಅಶ್ರಫ್ ಕಕ್ಕಿಂಜೆ ಕಾರ್ಯದರ್ಶಿಗಳಾಗಿ ಶಂಸುದ್ದೀನ್ ಮಡಂತ್ಯಾರು, ನಾಸಿರ್ ಹೆಚ್ ಕಲ್ಲು, ನಾಸಿರ್ ಮಂಚಿ ರವರನ್ನು ಆಯ್ಕೆ ಮಾಡಲಾಯಿತು.
ಉಮರ್ ಆಸಿಫ್, ಮಸೂದ್, ಆರಿಫ್ ಉಚ್ಚಿಲ ರವರನ್ನು ಕಾರ್ಯಕಾರಿ ಸಮಿತಿ ಸದಸ್ಯರನ್ನಾಗಿ ನೇಮಿಸಲಾಯಿತು.